ನವದೆಹಲಿ: ಭಾರತ ಮತ್ತು ವಿದೇಶಗಳಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ ಹಳೆಯ ವಿದ್ಯಾರ್ಥಿಗಳು ಭಾರತದಲ್ಲಿ ಕೋವಿಡ್ ಪರಿಹಾರ ಕಾರ್ಯಗಳಿಗಾಗಿ 2 ಮಿಲಿಯನ್ ಡಾಲರ್‌ಗಿಂತ ಹೆಚ್ಚಿನ ಹಣ ದೇಣಿಗೆ ನೀಡಿದ್ದಾರೆ.
ಕೋವಿಡ್-19 ಪರಿಹಾರದ ಹೆಚ್ಚಿನ ಪರಿಣಾಮ ಖಚಿತಪಡಿಸಿಕೊಳ್ಳಲು ಐಐಟಿ ಮದ್ರಾಸ್ ಹಂತ ಹಂತವಾಗಿ ಬಳಸಿಕೊಳ್ಳಲಿದೆ. ನಿಧಿ ಸಂಗ್ರಹವನ್ನು ಐಐಟಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿಗಳ ಮತ್ತು ಕಾರ್ಪೊರೇಟ್ ಸಂಬಂಧಗಳ ಕಚೇರಿ (ಎಸಿಆರ್), ಐಐಟಿ ಮದ್ರಾಸ್ ಅಲುಮ್ನಿ ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕ ಮತ್ತು ಯುಎಸ್ನಲ್ಲಿ ಐಐಟಿಎಂ ಫೌಂಡೇಷನ್ ಸಹಯೋಗದೊಂದಿಗೆ ನೀಡಲಾಗಿದೆ.
ಓದಿ: ಸೆಂಟ್ರಲ್ ಬ್ಯಾಂಕ್, IOB ಖಾಸಗೀಕರಣಕ್ಕೆ ನೀತಿ ಆಯೋಗ ಶಿಫಾರಸು
ಈ ಕರಾಳ ಗಳಿಗೆಯಲ್ಲಿ ದೇಶಕ್ಕೆ ಸಹಾಯ ಮಾಡುವುದು ಭಾರತೀಯ ವಲಸೆಗಾರರ ಕರ್ತವ್ಯವಾಗಿದೆ. ಐಐಟಿ ಮದ್ರಾಸ್ ಅಲುಮ್ನಿ ನೆಟ್ವರ್ಕ್ ಚೆನ್ನೈ ಮತ್ತು ತಮಿಳುನಾಡಿಗೆ ವೈದ್ಯಕೀಯ ಉಪಕರಣಗಳು ಮತ್ತು ಸಾಮಗ್ರಿಗಳೊಂದಿಗೆ ನೆರವು ನೀಡಲಾಗುವುದು. ಇದು ಸಾವಿರಾರು ಜೀವಗಳನ್ನು ಉಳಿಸಲು ಸಹಾಯ ಮಾಡಲಾಗಿದೆ. ಇದಕ್ಕೆ ನಾನು ಕೃತಜ್ಞನಾಗಿದ್ದೇನೆ ಮತ್ತು ಹೆಮ್ಮೆ ಪಡುತ್ತೇನೆ ಎಂದು ಸಿಲಿಕಾನ್ ವ್ಯಾಲಿ ಮೂಲದ ವೆಂಚರ್ ಕ್ಯಾಪಿಟಲ್ ಸಂಸ್ಥೆ ರಾಕೆಟ್‌ಶಿಪ್ ವಿಸಿ ಮತ್ತು ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಆನಂದ್ ರಾಜರಾಮನ್ ಹೇಳಿದ್ದಾರೆ.
ಇದಲ್ಲದೆ ಐಐಟಿ ಮದ್ರಾಸ್‌ನ ರಿಜಿಸ್ಟ್ರಾರ್ ಡಾ. ಜೇನ್ ಪ್ರಸಾದ್ ಇತ್ತೀಚೆಗೆ 74 ಬೈಪಾಪ್ ಘಟಕಗಳನ್ನು ಚೆನ್ನೈ ಕಾರ್ಪೊರೇಷನ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿಗಳು ತೆಲಂಗಾಣ ಸರ್ಕಾರಕ್ಕೆ 200 ಆಮ್ಲಜನಕ ಸಾಂದ್ರಕಗಳನ್ನು (ತಲಾ 5 ಲೀಟರ್) ದಾನ ಮಾಡಿದ್ದಾರೆ.