ನವದೆಹಲಿ: ಕೇಂದ್ರ ಆದಾಯ ತೆರಿಗೆ ಇಲಾಖೆಯು ಫಾರಂ (ಅರ್ಜಿ ನಮೂನೆ- 16)ಅನ್ನು ನೂತನವಾಗಿ ಪರಿಷ್ಕರಣೆ ಮಾಡಿದ್ದು, ಪರಿಷ್ಕೃತ ಅರ್ಜಿ ನಮೂನೆ ಮೇ 12ರಿಂದ ಜಾರಿಗೆ ಬರಲಿದೆ.
ಮನೆ ಬಾಡಿಗೆಯಿಂದ ಬರುವ ವರಮಾನ, ವಿವಿಧ ಉಳಿತಾಯ ಯೋಜನೆಗಳಲ್ಲಿನ ತೆರಿಗೆ ಕಡಿತ, ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ, ಬೇರೆ ಮೂಲಗಳಿಂದ ಬರುವ ಆದಾಯ ಹಾಗೂ ವಿವಿಧ ಭತ್ಯೆಗಳನ್ನೂ ಒಳಗೊಂಡು ಇನ್ನು ಕೆಲವು ವಿವರಗಳನ್ನು ಅರ್ಜಿ ನಮೂನೆಯಲ್ಲಿ ಸೇರಿಸಲಾಗಿದೆ.
ಮೂಲ ತೆರಿಗೆ ಕಡಿತ (ಟಿಡಿಎಸ್) ಆಗಿರುವ ಮಾಹಿತಿಗಳನ್ನು ಒಳಗೊಂಡಿರುವುದು ಫಾರಂ 16 ಆಗಿದೆ. ವಾರ್ಷಿಕ ಲೆಕ್ಕಪತ್ರ ಸಲ್ಲಿಸುವಾಗ ಈ ಮಾಹಿತಿಗಳನ್ನು ನೀಡಬೇಕಾಗುತ್ತದೆ.
ಉದ್ಯೋಗದಾತರು ತೆರಿಗೆ ಇಲಾಖೆಗೆ ನೀಡಬೇಕಿರುವ ಫಾರಂ 24 ಸಹ ಪರಿಷ್ಕರಣೆ ಮಾಡಲಾಗಿದೆ. ನೌಕರರ ಆಸ್ತಿ ಖರೀದಿ ಅಥವಾ ಮನೆ ನಿರ್ಮಾಣಕ್ಕೆ ಬ್ಯಾಂಕೇತರ ಸಂಸ್ಥೆಗಳಿಂದ ಸಾಲ ಪಡೆದಿದ್ದರೆ ಆ ಸಂಸ್ಥೆಯ ಪ್ಯಾನ್ ಮಾಹಿತಿಯನ್ನು ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ.