ನವದೆಹಲಿ: ಕೊರೊನಾ ವಿಶ್ವದಾದ್ಯಂತ ತಳಮಳ ಸೃಷ್ಟಿಸಿದೆ. ಎಲ್ಲಾ ರಾಷ್ಟ್ರಗಳ ಆರ್ಥಿಕತೆ ಸಂಕಷ್ಟದಲ್ಲಿದೆ. ಬಹುಪಾಲು ವ್ಯವಹಾರಗಳು ಹಾಗೂ ಕಾರ್ಖಾನೆಗಳನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಅರ್ಥಿಕತೆ ಕುಂಠಿತಗೊಂಡಿದೆ. ತುಂಬಾ ಕಂಪನಿಗಳು ತಮ್ಮ ನೌಕರರಿಗೆ ರಜೆಗಳನ್ನು ಘೋಷಣೆ ಮಾಡಿವೆ. ವೇತನ ರಹಿತ ರಜೆಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡುತ್ತಿವೆ. ಯಾವ್ಯಾವ ರಾಷ್ಟ್ರಗಳಲ್ಲಿ ಎಂತಹ ಪರಿಸ್ಥಿತಿಯಿದೆ ಇಲ್ಲಿದೆ ಫುಲ್ ಡಿಟೇಲ್ಸ್.
ಇಂಗ್ಲೆಂಡ್
ಈ ರಾಷ್ಟ್ರದ ಉದ್ಯೋಗಿಗಳಿಗೆ ಕೆಲವು ಅನುದಾನಗಳನ್ನು ಬಿಡುಗಡೆ ಮಾಡಿದೆ. ತಾತ್ಕಾಲಿಕ ರಜೆಗಳನ್ನು ನೀಡಿ ಶೇಕಡಾ 80ರಷ್ಟು ವೇತನ ಪಾವತಿ ಮಾಡಲು ಕ್ರಮ ಕೈಗೊಂಡಿದೆ. ಜೊತೆಗೆ ಮಾರ್ಚ್ ಆರಂಭದಲ್ಲಿ ಉದ್ಯೋಗ ಸ್ವಾಧೀನ ಯೋಜನೆ ಜಾರಿಗೊಳಿಸಿ ಪ್ರತಿ ತಿಂಗಳಿಗೆ ರಜೆಯಲ್ಲಿರುವ ಉದ್ಯೋಗಿಗೆ ಎರಡೂವರೆ ಸಾವಿರ ಫೌಂಡ್ಗಳನ್ನು ನೀಡಲು ಮುಂದಾಗಿದೆ.
ಅಮೆರಿಕ
ಕೊರೊನಾ ವಿರುದ್ಧ ಹೋರಾಡಲು ಅಮೆರಿಕಾ ಎರಡು ಟ್ರಿಲಿಯನ್ ಡಾಲರ್ಗಳ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಿದೆ. ಈ ಪ್ಯಾಕೇಜ್ನ ಹಣದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ವೇತನ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ.
ಫ್ರಾನ್ಸ್
ಈ ರಾಷ್ಟ್ರದ ನಾಗರಿಕರಿಗೆ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿಯೂ, ಪ್ರಜೆಗಳೆಲ್ಲಾ ಮನೆಯಲ್ಲಿಯೇ ಇರಬೇಕೆಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೊನ್ ಸೂಚಿಸಿದ್ದಾರೆ. ಸುಮಾರು 45 ಬಿಲಿಯನ್ ಯೂರೋ ಅನ್ನು ಕಂಪನಿಗಳಿಗೆ ಹಾಗೂ ಉದ್ಯೋಗಿಗಳಿಗೆ ಅನುದಾನ ಘೋಷಿಸುವ ಭರವಸೆ ನೀಡಿದ್ದಾರೆ.
ಆಸ್ಟ್ರೇಲಿಯಾ
ಸುಮಾರು ಆರು ತಿಂಗಳು ಕಾರ್ಮಿಕರಿಗೆ ವೇತನದ ಬಹುಪಾಲು ನೀಡುವುದಾಗಿ ಆಸ್ಟ್ರೇಲಿಯಾ ಘೋಷಣೆ ಮಾಡಿದೆ.ಇದಕ್ಕಾಗಿ 130 ಆಸ್ಟ್ರೇಲಿಯನ್ ಡಾಲರ್ಗಳನ್ನು ಮೀಸಲಿಟ್ಟಿದೆ. ವೇತನ ಪಡೆಯಲು
ಸ್ವೀಡನ್
ಇಲ್ಲಿನ ಸರ್ಕಾರ ಕಾರ್ಮಿಕರಿಗೆ ಹೆಚ್ಚು ಸಬ್ಸಿಡಿಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ಶೇ 90ರಷ್ಟು ವೇತನವನ್ನು ಪಾವತಿ ಮಾಡಲಿದ್ದು, ಕೆಲಸದ ವೇಳೆಯನ್ನು ಇಳಿಸಲಾಗಿದೆ.
ಡೆನ್ಮಾರ್ಕ್
ಡೆನ್ಮಾರ್ಕ್ ಕೂಡಾ ಸ್ವೀಡನ್ನಂತೆ ಭರವಸೆ ನೀಡಿದೆ. ಸುಮಾರು 75ರಷ್ಟು ವೇತನ ನೀಡೋದಾಗಿ ಭರವಸೆ ನೀಡಿದೆ.