ನವದೆಹಲಿ: ಎಲೆಕ್ಟ್ರಾನಿಕ್ ವೆಹಿಕಲ್(ಇವಿ) ಬಳಕೆ ಹೆಚ್ಚಾಗುತ್ತಿರುವ ಕಾರಣ ಮನೆಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ವೆಚ್ಚವೂ ಕೂಡ ದುಬಾರಿಯಾಗಲಿದೆ. ಈ ವೆಚ್ಚವು ಜಾಗತಿಕವಾಗಿ 2026 ರ ವೇಳೆಗೆ 16 ಬಿಲಿಯನ್ ಡಾಲರ್ನಷ್ಟಾಗಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ವೆಚ್ಚವು 2021 ರಲ್ಲಿ 3.4 ಬಿಲಿಯನ್ ಡಾಲರ್ನಷ್ಟಿತ್ತು. ಮುಂದಿನ 5 ವರ್ಷಗಳಲ್ಲಿ ಇದು ಶೇಕಡಾ 390ಕ್ಕಿಂತಲೂ ಹೆಚ್ಚಾಗಲಿದೆ. ಮನೆಯಲ್ಲಿಯೇ ಚಾರ್ಜಿಂಗ್ ಮಾಡಲು ಕಡಿಮೆ ದರದಲ್ಲಿಯೇ ಚಾರ್ಜಿಂಗ್ ವ್ಯವಸ್ಥೆ ಮಾಡಿಕೊಳ್ಳುವುದರಿಂದ ಈ ವೆಚ್ಚ ವಿಪರೀತವಾಗಿ ಹೆಚ್ಚಾಗಲಿದೆ ಎಂದು ಜುನಿಪರ್ ರಿಸರ್ಚ್‌ನ ಹೊಸ ಅಧ್ಯಯನ ತಿಳಿಸಿದೆ.
2026 ರ ವೇಳೆಗೆ ಜಾಗತಿಕವಾಗಿ 21 ಮಿಲಿಯನ್ ಕುಟುಂಬಗಳು ವಾಹನ ಚಾರ್ಜಿಂಗ್ಗಾಗಿ ಹೋಮ್ ವಾಲ್ ಬಾಕ್ಸ್ ಅನ್ನು ಹೊಂದಲಿವೆ. ಈ ಸಂಖ್ಯೆ 2021 ರಲ್ಲಿ ಕೇವಲ 2 ಮಿಲಿಯನ್ ಮಾತ್ರ ಇತ್ತು. ಸಾರ್ವಜನಿಕ ಚಾರ್ಜಿಂಗ್ ನೆಟ್‌ವರ್ಕ್‌ಗಳು ವೇಗವಾಗಿ ಬೆಳೆಯುತ್ತಿರುವ ಮಧ್ಯೆಯೇ, ಮುಂದಿನ 5 ವರ್ಷಗಳಲ್ಲಿ ಹೋಮ್ ವಾಲ್ ಬಾಕ್ಸ್‌ಗಳ ಬಳಕೆಯೂ ಅದೇ ತೆರನಾಗಿ ಹೆಚ್ಚಲಿವೆ ಎಂದು ಅಧ್ಯಯನ ತಿಳಿಸಿದೆ.
ಹೋಮ್ ವಾಲ್ ಬಾಕ್ಸ್‌ಗಳು ಅನುಕೂಲಕರ ಮತ್ತು ಕಡಿಮೆ ವೆಚ್ಚದ್ದಾಗಿವೆ. ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರಗಳು ಹೋಮ್ ಚಾರ್ಜಿಂಗ್ ವ್ಯವಸ್ಥೆ ಬೆಂಬಲಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಂಶೋಧನಾ ಲೇಖಕ ನಿಕ್ ಮೇನಾರ್ಡ್ ಅಭಿಪ್ರಾಯಪಟ್ಟಿದ್ದಾರೆ.
ಹೋಮ್ ಚಾರ್ಜಿಂಗ್ ಮಾರಾಟಗಾರರು ಮತ್ತು ಆಟೋಮೋಟಿವ್ ತಯಾರಕರು ಭವಿಷ್ಯದ ಇವಿಗಳ ಬಳಕೆಗೆ ಹೋಮ್ ಚಾರ್ಜಿಂಗ್ ವ್ಯವಸ್ಥೆ ರೂಪಿಸಲು ಪಾಲುದಾರಿಕೆ ಹೊಂದಬೇಕಿದೆ ಎಂದು ಅಧ್ಯಯನ ತಿಳಿಸಿದೆ.
ಓದಿ: 2014ರಲ್ಲಿಯೇ ಎಬಿಜಿ ಶಿಪ್ಯಾರ್ಡ್ ದಿವಾಳಿ ಘೋಷಣೆ: ಸಚಿವೆ ನಿರ್ಮಲಾ ಸೀತಾರಾಮನ್