ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ನೆಟ್‌ವರ್ಕ್‌ನ (ಜಿಎಸ್‌ಟಿಎನ್) ಜಾಲತಾಣದಲ್ಲಿ ತಾಂತ್ರಿಕ ದೋಷಗಳು ಕಂಡುಬರುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವು ದೂರುಗಳು ಕೇಳಿಬಂದಿದ್ದವು.
ರಿಟರ್ನ್ ಫೈಲಿಂಗ್ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಎಸ್‌ಟಿಎನ್ ಸ್ಪಷ್ಟ ಪಡಿಸಿದೆ. ನಿನ್ನೆ 11.52 ಲಕ್ಷ ಜಿಎಸ್ಟಿಆರ್ಬಿ (ಅಕ್ಟೋಬರ್) ರಿಟರ್ನ್ಸ್ ಸಲ್ಲಿಕೆಯಾಗಿವೆ. ಅರ್ಜಿ ದಟ್ಟಣೆಯ ವೇಳೆಯಲ್ಲಿ ಸುಮಾರು 1.82 ಲಕ್ಷ ರಿಟರ್ನ್ಸ್ ಸಲ್ಲಿಕೆಯಾಗಿವೆ ಎಂದು ಹೇಳಿದೆ.
ನವೆಂಬರ್ 18ರಂದು 8.14 ಲಕ್ಷಕ್ಕೂ ಹೆಚ್ಚು ರಿಟರ್ನ್ಸ್ ಸಲ್ಲಿಸಲಾಗಿದ್ದು, ಬುಧವಾರ ಸಂಜೆ 4.00ರ ವೇಳೆಗೆ 9.23 ಲಕ್ಷ ಜಿಎಸ್‌ಟಿಆರ್ 3 ಬಿ ರಿಟರ್ನ್ಸ್ ಸಲ್ಲಿಸಲಾಗಿದ್ದು, ಮಧ್ಯಾಹ್ನ 12 ರಿಂದ 4ರ ನಡುವೆ 6.30 ಲಕ್ಷ ರಿಟರ್ನ್ಸ್ ಬಂದಿವೆ ಎಂದು ಜಿಎಸ್‌ಟಿಎನ್ ತಿಳಿಸಿದೆ.
ಯಾವುದೇ ಆನ್‌ಲೈನ್ ವ್ಯವಸ್ಥೆಯು ತನ್ನದೆಯಾದ ಲೋಡ್ ಮಿತಿ ಹೊಂದಿರುತ್ತದೆ. ಜಿಎಸ್‌ಟಿ ರಿಟರ್ನ್ ಫೈಲಿಂಗ್ ವ್ಯವಸ್ಥೆಗೆ ಒಂದು ನಿರ್ದಿಷ್ಟ ಅವಧಿಯಲ್ಲಿ ಗರಿಷ್ಠ 1.5 ಲಕ್ಷ ರಿಟರ್ನ್ಸ್ ಫೈಲಿಂಗ್ ಹೊಂದಿದೆ. ಈ ಮಿತಿಯನ್ನು ತಲುಪಿದ ಬಳಿಕ ತೆರಿಗೆದಾರನು ತನ್ನ ಸರದಿಗಾಗಿ ಕೆಲವು ನಿಮಿಷ ಕಾಯುವಂತೆ ಕೇಳುವ ಸಂದೇಶ ಸೈಟ್ನಲ್ಲಿ ಪ್ರದರ್ಶನವಾಗುತ್ತದೆ ಎಂದಿದೆ.
ದೂರುಗಳನ್ನು ಉಲ್ಲೇಖಿಸಿದ ಜಿಎಸ್‌ಟಿಎನ್, ಕೆಲವು ಫೈಲ್‌ದಾರರು ಕೆಲ ನಿರ್ದಿಷ್ಟ ಸಮಯದಲ್ಲಿ 1.5 ಲಕ್ಷ ರಿಟರ್ನ್ಸ್ ಲೋಡ್ನ ಹೊರೆ ಮಿತಿಯಲ್ಲಿ ಇದ್ದಾಗ ಲಾಗ್ಔಟ್ ಸಮಸ್ಯೆ ಅನುಭವಿಸಿರಬಹುದು. ಇಲ್ಲವೇ ತೆರಿಗೆ ಪಾವತಿದಾರರ ಕೊನೆಯಲ್ಲಿ ಯಾವುದೋ ಸ್ಥಳೀಯ ಸಮಸ್ಯೆಯಿಂದಾಗಿ ಸ್ವಲ್ಪ ತೊಂದರೆಗೆ ಸಿಲುಕಿರಬಹುದು. ಇದು ನೆಟ್‌ವರ್ಕ್‌ನ ತಾಂತ್ರಿಕ ದೋಷವಲ್ಲ ಎಂದು ಸ್ಪಷ್ಟನೆ ನೀಡಿದೆ.