ನವದೆಹಲಿ: ಜಿಎಸ್‌ಟಿ ನೆಟ್‌ವರ್ಕ್ (ಜಿಎಸ್‌ಟಿಎನ್) ಪೋರ್ಟಲ್‌ನಲ್ಲಿ ಹೊಸ ಹೆಡ್ ಅಭಿವೃದ್ಧಿಪಡಿಸಿದ್ದು, ಈ ಮೂಲಕ ತೆರಿಗೆದಾರರು ಎಲೆಕ್ಟ್ರಾನಿಕ್ ಕ್ಯಾಶ್ ಲೆಡ್ಜರ್‌ನಲ್ಲಿ ಲಭ್ಯವಿರುವ ಮೊತ್ತವನ್ನು ಇನ್ನೊಂದು ಹೆಡ್ಗೆ ಸುಲಭವಾಗಿ ವರ್ಗಾಯಿಸಬಹುದು.
ಫಾರ್ಮ್ ಜಿಎಸ್‌ಟಿ ಪಿಎಂಟಿ-09 ತೆರಿಗೆದಾರರಿಗೆ ಒಂದಕ್ಕಿಂತ ಹೆಚ್ಚು ಹೆಡ್ಗಳಿಂದ (ಮೇಜರ್ ಅಥವಾ ಮೈನರ್) ಮತ್ತೊಂದು ಹೆಡ್ಗೆ (ಮೇಜರ್ ಅಥವಾ ಮೈನರ್) ಬಹು ವರ್ಗಾವಣೆ ಮಾಡಬಹುದಾಗಿದೆ. ಎಲೆಕ್ಟ್ರಾನಿಕ್ ನಗದು ಲೆಡ್ಜರ್‌ನಲ್ಲಿ ಲಭ್ಯವಿರುವ ಹೊಸ ಆಯ್ಕೆ, ಇಂಟ್ರಾ-ಹೆಡ್ ಅಥವಾ ಇಂಟರ್-ಹೆಡ್ ವರ್ಗಾವಣೆಗೆ ನೆರವಾಗಲಿದೆ.
ಕೇಂದ್ರ ಜಿಎಸ್‌ಟಿ, ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಜಿಎಸ್‌ಟಿ, ಇಂಟಿಗ್ರೇಟೆಡ್ ಜಿಎಸ್‌ಟಿ ಮತ್ತು ಸೆಸ್ ಮೇಜರ್ ಹೆಡ್ ವ್ಯಾಪ್ತಿಗೆ ಬರುತ್ತವೆ. ಮೈನರ್ ಹೆಡ್ನಲ್ಲಿ ತೆರಿಗೆ, ಬಡ್ಡಿ, ವಿಳಂಬ ಪಾವತಿ ಮೇಲಿನ ಶುಲ್ಕ, ದಂಡ ಮತ್ತು ಇತ್ಯಾದಿ ಇವೆ.
ನಗದು ಸಂಪನ್ಮೂಲಗಳಿಗೆ ಸೀಮಿತವಿರುವ ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಜಿಎಸ್‌ಟಿಎನ್ ಪೋರ್ಟಲ್ನ ಈ ಹೊಸ ಕಾರ್ಯವು ತೆರಿಗೆದಾರರಿಗೆ ಕೆಲ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ತೆರಿಗೆದಾರರು ನಿರ್ದಿಷ್ಟ ಹೆಡ್ನಲ್ಲಿ ತಪ್ಪಾಗಿ ಜಮಾ ಮಾಡಿದ ತೆರಿಗೆಗೆ ಮರುಪಾವತಿಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಮೊತ್ತವನ್ನು ಮತ್ತೆ ನಗದು ಲೆಡ್ಜರ್‌ನಲ್ಲಿ ಠೇವಣಿ ಇಡಬೇಕಾಗಿಲ್ಲ ಎಂದು ಜಿಎಸ್‌ಟಿಎನ್ ಹೇಳಿದೆ.