ETV Bharat / business

ಗೂಗಲ್​ ಪೇ ಪೇಮೆಂಟ್​ ಆಪರೇಟರ್ ಅಲ್ಲ, ಆರ್​ಬಿಐ ದೃಢೀಕರಣ ಬೇಕಿಲ್ಲ ; ಕೋರ್ಟ್​ಗೆ ಕಂಪನಿ ಅಫಿಡವಿಟ್‌ - Delhi High Court

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಧಿಕಾರ ಹೊಂದಿರುವ ಪಿಎಸ್‌ಒ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಆಗಿದೆ..

GPay
ಗೂಗಲ್​ ಪೇ
author img

By

Published : Jul 22, 2020, 8:52 PM IST

ನವದೆಹಲಿ : ಗೂಗಲ್ ಇಂಡಿಯಾ ಡಿಜಿಟಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ತನ್ನ ಗೂಗಲ್ ಪೇ ಅಪ್ಲಿಕೇಷನ್‌ಗೆ ಆರ್‌ಬಿಐ ಅನುಮತಿ ಅಗತ್ಯವಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಇದೊಂದು ಪಾವತಿ ವ್ಯವಸ್ಥೆ ಆಪರೇಟರ್ (ಪಿಎಸ್‌ಒ) ಅಲ್ಲ. ಆದರೆ, ಇದು ಮೂರನೇ ವ್ಯಕ್ತಿಯ ಅಪ್ಲಿಕೇಷನ್ ಪೂರೈಕೆದಾರ ಎಂದು ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಧಿಕಾರ ಹೊಂದಿರುವ ಪಿಎಸ್‌ಒ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಆಗಿದೆ. ಇದು ಸಂಪೂರ್ಣ ಏಕೀಕೃತ ಪಾವತಿ ಇಂಟರ್​ಫೇಸ್ (ಯುಪಿಐ) ನೆಟ್‌ವರ್ಕ್‌ನ ಮಾಲೀಕರು ಮತ್ತು ನಿರ್ವಾಹಕರು ಎಂದು ಗೂಗಲ್ ಅಫಿಡವಿಟ್‌ನಲ್ಲಿ ತಿಳಿಸಿದೆ.

ಎನ್‌ಪಿಸಿಐ ತನ್ನ ನೆಟ್‌ವರ್ಕ್‌ನಲ್ಲಿ ವಹಿವಾಟು ನಡೆಸಲು ಪಾವತಿ ಸೇವಾ ಪೂರೈಕೆದಾರ ಬ್ಯಾಂಕ್​ಗಳು ಮತ್ತು ಗೂಗಲ್ ಪೇ ನಂತಹ 3ನೇ ವ್ಯಕ್ತಿಯ ಅಪ್ಲಿಕೇಷನ್ ಪೂರೈಕೆದಾರರಿಗೆ (ಟಿಪಿಎಪಿ) ಅಧಿಕಾರ ನೀಡುತ್ತದೆ ಎಂದಿದೆ.

ಬುಧವಾರದಂದು ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರಿದ್ದ ನ್ಯಾಯಪೀಠವು ಗೂಗಲ್​ನ ಅಫಿಡವಿಟ್​ಗೆ ಪ್ರತಿಕ್ರಿಯಿಸಲು ಅರ್ಜಿದಾರರು ಸಮಯ ಕೋರಿದ ನಂತರ ಹೆಚ್ಚಿನ ವಿಚಾರಣೆಯನ್ನು ಅಗಸ್ಟ್ 31ಕ್ಕೆ ಮುಂದೂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.