ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದಿಂದ ಪ್ರಭಾವಿತವಾದ ರಫ್ತು ವಲಯ ವೃದ್ಧಿಸುವಂತೆ ಮಾಡಲು ಮಾರ್ಚ್ 31ರಂದು ಮುಗಿದ ಬಡ್ಡಿ ಸಮೀಕರಣ ಯೋಜನೆಯನ್ನು ಸರ್ಕಾರ ಶೀಘ್ರದಲ್ಲೇ ವಿಸ್ತರಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೆಬ್‌ನಾರ್ ಉದ್ದೇಶಿಸಿ ಮಾತನಾಡಿದ ವಿದೇಶಿ ವ್ಯಾಪಾರ ಮಹಾನಿರ್ದೇಶಕ ಅಮಿತ್ ಯಾದವ್, ಮುಂದಿನ ವಾರಗಳಲ್ಲಿ ಬಡ್ಡಿ ಸಮೀಕರಣ ಯೋಜನೆಯ ವಿಸ್ತರಣೆಗೆ ಸಂಬಂಧಿಸಿದಂತೆ ನೀವು ಒಂದು ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ ಎಂದು ಸುಳಿವು ಬಿಟ್ಟುಕೊಟ್ಟರು.
ರಫ್ತು ಉದ್ಯಮ ಮತ್ತೆ ತನ್ನ ಹಳೆಯ ಲಯಕ್ಕೆ ಬರುತ್ತದೆ ಎಂದು ನಾವು ಖಚಿತಪಡಿಸುತ್ತಿದ್ದೇನೆ. ಮಾರ್ಚ್‌ನ ರಫ್ತು ದತ್ತಾಂಶ ಒಂದು ಸೂಚಕವಾಗಿದೆ. ಪ್ರಸ್ತುತ ಬಿಕ್ಕಟ್ಟಿನ ಪರಿಣಾಮವನ್ನು ಮಾರ್ಚ್‌ನ ರಫ್ತು ದತ್ತಾಂಶದಲ್ಲಿ ಕಾಣಬಹುದು. ಏಪ್ರಿಲ್‌ಗೂ ಸಹ ಇದೇ ರೀತಿ ಇರುತ್ತದೆ ಎಂದಿದ್ದಾರೆ ಎಂದು ಫಿಕ್ಕಿ ಪ್ರಕಟಣೆಯಲ್ಲಿ ತಿಳಿಸಿದೆ.