ನವದೆಹಲಿ: ಒತ್ತಡಕ್ಕೊಳಗಾದ ಯೆಸ್ ಬ್ಯಾಂಕ್ ಮತ್ತು ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ಗಳನ್ನು (ಪಿಎಂಸಿ) ನೆನಪಿಸುವಂತೆ, ಲಕ್ಷ್ಮಿ ವಿಲಾಸ್ ಬ್ಯಾಂಕಿನಿಂದ ಒಂದು ತಿಂಗಳ ಅವಧಿಗೆ ಹಣ ಹಿಂಪಡೆಯುವ ನಿರ್ಬಂಧಿತ ಮೊತ್ತವನ್ನು 25 ಸಾವಿರ ರೂ. ನಿಗದಿಪಡಿಸಲಾಗಿದೆ.
ತಮಿಳುನಾಡು ಮೂಲದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಕಳೆದ ಕೆಲವು ದಿನಗಳಿಂದ ವಿತ್ತೀಯ ಸಂಕಷ್ಟ ಎದುರಿಸುತ್ತಿದೆ. ಕೆಟ್ಟ ಸಾಲ ಅಥವಾ ನಿಷ್ಕ್ರಿಯ ಆಸ್ತಿ (ಎನ್‌ಪಿಎ) ಹೆಚ್ಚಳದಿಂದಾಗಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತ್ವರಿತ ತಿದ್ದುಪಡಿ ಕ್ರಮಕ್ಕೆ ಸ್ವಾಧೀನಪಡಿಸಿಕೊಂಡಿತ್ತು.
ಹಣಕಾಸು ಸಚಿವಾಲಯದ ಅಡಿ ಹಣಕಾಸು ಸೇವಾ ಇಲಾಖೆಯ ಬ್ಯಾಂಕಿಂಗ್ ವಿಭಾಗವು ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ, 'ತಮಿಳುನಾಡು ಕರೂರಿನ ಲಕ್ಷ್ಮಿ ವಿಲಾಸ್ ಬ್ಯಾಂಕ್ ಲಿಮಿಟೆಡ್‌ಗೆ ಸಂಬಂಧ ಹಣ ವಿತ್ ಡ್ರಾ ಮಿತಿ ಹೇರಲಾಗಿದೆ. ಮಂಗಳವಾರ (2020ರ ನವೆಂಬರ್ 17) ಸಂಜೆ 6:00ರಿಂದ ಜಾರಿಗೆ ಬರುತ್ತಿದ್ದು, 2020ರ ಡಿಸೆಂಬರ್ 16ರ ತನಕ ಜಾರಿಯಲ್ಲಿರುತ್ತದೆ ಎಂದು ಸರ್ಕಾರ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ನ ಸಲಹೆ ಮೇರೆಗೆ ಕೇಂದ್ರ ಸರ್ಕಾರ ಈ ನಿರ್ಧಾರ ಉತೆಗೆದುಕೊಂಡಿದೆ. ಅಲ್ಲದೆ ಬ್ಯಾಂಕ್ನ ನಿರ್ದೇಶಕರ ಮಂಡಳಿಯನ್ನು ರದ್ದು ಪಡಿಸಲಾಗಿದ್ದು, ಕೆನರಾ ಬ್ಯಾಂಕ್ನ ಮಾಜಿ ಆಡಳಿತಾಧಿಕಾರಿ ಟಿಎನ್ ಮನೋಹರನ್ ಅವರನ್ನು ಬ್ಯಾಂಕ್ನ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.
ಆರ್ಬಿಐ ಅನುಮತಿ ಇಲ್ಲದೆ ಯಾವುದೇ ಕಾರಣದಿಂದಲೂ ಲಕ್ಷ್ಮಿ ವಿಲಾಸ್ ಬ್ಯಾಂಕ್, 25,000 ರೂ.ಗಿಂತಲೂ ಹೆಚ್ಚಿನ ಹಣವನ್ನು ಬ್ಯಾಂಕ್ನ ಗ್ರಾಹಕರಿಗೆ ನೀಡುವಂತಿಲ್ಲ. 30 ದಿನಗಳ ತನಕ ಈ ನಿರ್ಬಂಧ ಜಾರಿಯಲ್ಲಿ ಇರುತ್ತದೆ.