ಹೈದರಾಬಾದ್: ಚಿನಿವಾರ ಪೇಟೆಯಲ್ಲಿಂದು ಕೂಡ ಚಿನ್ನಾಭರಣಗಳ ಬೆಲೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಮೇಲೆ 250 ರೂಪಾಯಿ ಇಳಿಕೆಯಾಗಿ 44,800 ರೂಪಾಯಿ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಮೇಲೆ 270 ರೂಪಾಯಿ ಕಡಿತದ ಬಳಿಕ 48,600 ರೂಪಾಯಿಗೆ ಇಳಿದಿದೆ.
ಇತ್ತ ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ನ ಪ್ರತಿ 10 ಗ್ರಾಂ ಚಿನ್ನದ ಮೇಲೆ 250 ರೂ. ಇಳಿದಿದ್ದು, 44,500 ರೂಪಾಯಿ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರದ ಮೇಲೆ 270 ರೂ. ಕುಸಿತವಾಗಿ 48,600ಗೆ ಮಾರಾಟವಾಗುತ್ತಿದೆ.
ವಿಶಾಖಪಟ್ಟಣಂನಲ್ಲಿ ಚಿನ್ನದ ದರ ಇದೇ ರೀತಿಯ ಇಳಿಕೆ ಕಂಡಿದ್ದು, 22 ಕ್ಯಾರೆಟ್‌ನ 10 ಗ್ರಾಂಗೆ 44,550 ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಚಿನ್ನ 48,600 ರೂಪಾಯಿ ಇದೆ. ನೆರೆಯ ಕೇರಳದಲ್ಲೂ ಪ್ರತಿ 10 ಗ್ರಾಂ 22-ಕ್ಯಾರೆಟ್ ಚಿನ್ನದ ದರ 44,550 ರೂ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 48.600 ರೂ.ಇದೆ.
ಹೈದರಾಬಾದ್, ವಿಶಾಖಪಟ್ಟಣಂ, ಕೇರಳದಲ್ಲಿ ಒಂದು ಕೆಜಿ ಬೆಳ್ಳಿಗೆ 67,600 ರೂ. ಇದ್ದರೆ ಬೆಂಗಳೂರಿನಲ್ಲಿ ಬೆಳ್ಳಿ ದರ 62,400 ರೂಪಾಯಿ ಇದೆ.