ನವದೆಹಲಿ: ಬಂಗಾರದ ಬೆಲೆ ನಿತ್ಯವೂ ಏರಿಕೆ ಕಾಣುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂಗೆ 857 ರೂ. ಏರಿಕೆಯಾಗಿದೆ. ಈ ಮೂಲಕ 10 ಗ್ರಾಂ ಶುದ್ಧ ಬಂಗಾರದ ಬೆಲೆ ಈಗ 40969 ರೂ. ಆಗಿದೆ.
ಅಮೆರಿಕ-ಇರಾನ್ ಯುದ್ಧದ ಕಾರ್ಮೋಡ, ಜಾಗತಿಕ ಮಾರುಕಟ್ಟೆಗಳ ತಲ್ಲಣಗಳ ಕಾರಣದಿಂದ ಸುರಕ್ಷಿತ ಹೂಡಿಕೆ ಮೂಲವಾಗಿರುವ ಬಂಗಾರದತ್ತ ಹೂಡಿಕೆದಾರರು ಚಿತ್ತ ಹರಿಸಿರುವುದೇ ಬಂಗಾರದ ಬೆಲೆ ಗಗನಕ್ಕೇರಲು ಕಾರಣ. ಅಮೆರಿಕದಲ್ಲೂ ಪ್ರತಿ ಔನ್ಸ್ ಬಂಗಾರದ ಬೆಲೆ ₹1578 ಡಾಲರ್ ಇದೆ. ಅಂದರೆ ಶೇ.1.67ರಷ್ಟು ಹೆಚ್ಚಳವಾಗಿದೆ.
ಮುಂಬರುವ ದಿನಗಳಲ್ಲಿ ಬಂಗಾರದ ಬೆಲೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಪೇಟೆಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.