ETV Bharat / business

ವಿಶ್ವ ಆರ್ಥಿಕ ಬೆಳವಣಿಗೆ ದರ ಕುಸಿತ: ಐಎಂಎಫ್​ ಖಡಕ್​ ಎಚ್ಚರಿಕೆ

ಜಾಗತಿಕ ಆರ್ಥಿಕತೆಯ ಸತತ ಎರಡು ವರ್ಷಗಳ ಬೆಳವಣಿಗೆಯ ನಂತರ ಅಸ್ಥಿರವಾಗುತ್ತಿದೆ. ಹಣಕಾಸು ಮಾರುಕಟ್ಟೆಯ ಆಘಾತಕಾರಿ ಚಟುವಟಿಕೆಗಳು, ವಾಣಿಜ್ಯ ದೃಷ್ಟಿಕೋನದಲ್ಲಿನ ಅನಿಶ್ಚಿತತೆ ಇದಕ್ಕೆ ಪುಷ್ಟಿ ನೀಡುತ್ತಿವೆ.

ಕ್ರಿಸ್ಟಿನ್‌ ಲಗಾರ್ಡೆ
author img

By

Published : Apr 3, 2019, 12:12 PM IST

ವಾಷಿಂಗ್ಟನ್‌: ದಶಕದ ಹಿಂದೆ ಲೆಹ್ಮನ್ ಬ್ರದರ್ಸ್​ ಬ್ಯಾಂಕ್​ ದಿವಾಳಿಯಾದ ಬಳಿಕ ಆರ್ಥಿಕ ಹಿಂಜರಿತದಿಂದ ಜಗತ್ತು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ಈ ಮಧ್ಯೆ ಆತಂಕಕಾರಿ ಅಂಶವನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ ವ್ಯಕ್ತಪಡಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ 2019ರ ವ್ಯಾಪಾರ- ವಹಿವಾಟು ನಿರೀಕ್ಷಿತ ಮಟ್ಟಕ್ಕಿಂತ ಕುಸಿತ ಕಂಡಿರುವುದು ಮತ್ತೊಂದು ಆರ್ಥಿಕ ಹಿಂಜರಿತದ‌ ಆತಂಕ ಸೃಷ್ಟಿಸಲಿದೆ ಎಂದುಐಎಂಎಫ್​ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿನ್‌ ಲಗಾರ್ಡೆ ಹೇಳಿದ್ದಾರೆ.

ಐಎಂಎಫ್​ ಮತ್ತು ವರ್ಲ್ಡ್​ ಬ್ಯಾಂಕ್​ನ ಪೂರ್ವ ವೀಕ್ಷಣಾ ಸಭೆಯಲ್ಲಿ ಮಾತನಾಡಿದ ಅವರು, ಅಮೆರಿಕ - ಚೀನಾ ನಡುವಿನ ವಾಣಿಜ್ಯ ದರ ಸಮರ, ಬ್ರೇಕ್ಸಿಟ್​, ಹೆಚ್ಚುತ್ತಿರುವ ವ್ಯಾಪಾರದ ಉದ್ವಿಗ್ನತೆ ಹಾಗೂ ಬಿಗಿಯಾದ ಆರ್ಥಿಕ ನಡವಳಿಗಳಂಥಹ ವಿಚಾರಗಳು ಜಾಗತಿಕ ಮಾರುಕಟ್ಟೆಯ ವ್ಯವಹಾರಕ್ಕೆ ಹೊಡೆತ ನೀಡುತ್ತಿವೆ. ಇಂತಹ ಸಂದರ್ಭವನ್ನು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.

ದೇಶಗಳ ವ್ಯಾಪಾರದ ಬೆಳವಣಿಗೆ ತೀವ್ರ ನಿಧಾನಗತಿಯಲ್ಲಿದೆ. ಐಎಂಎಫ್​ ತನ್ನ ಜಾಗತಿಕ ಬೆಳವಣಿಗೆ ದರವನ್ನು ಜನವರಿಯಲ್ಲಿ ಶೇ 3.7ರಿಂದ ಶೇ 3.5ಕ್ಕೆ ಇಳಿಸಿತು. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಕೆಳಕ್ಕೆ ಇಳಿಯಬಹುದು ಎಂದು ಅಂದಾಜಿಸಿದ್ದಾರೆ. ಎರಡು ವರ್ಷಗಳ ಹಿಂದೆ ಬೆಳವಣಿಗೆಯ ವೇಗವರ್ಧನೆಯಲ್ಲಿ ಮುಂದಿದ್ದೆವು . ಈಗ ಇದರ ವೇಗವನ್ನು ನಿಧಾನಗೊಳಿಸುವ ಅನಿವಾರ್ಯತೆ ನಮ್ಮ ಮುಂದಿದೆ ಎಂದರು.

ಸರಳವಾದ ಹಣಕಾಸು ನೀತಿಗಳು ಅಳವಡಿಸಿಕೊಂಡರೇ 2019ರ ದ್ವಿತೀಯಾರ್ಧದಲ್ಲಿ ಚೇತರಿಕೆ ಕಾಣಲಿದೆ. 2020ರಲ್ಲಿನ ಬೆಳವಣಿಗೆ ವೇಗದ ಮೇಲಿನ ಒತ್ತಡ ಕ್ಷೀಣಿಸಲಿದೆ. ದಶಕದ ಹಿಂದೆ ಸಂಭವಿಸಿದ್ದ ಆರ್ಥಿಕ ಹಿಂಜರಿತದ ಬಳಿಕವೂ ಅಧಿಕ ಪ್ರಮಾಣದಲ್ಲಿ ಸಾರ್ವಜನಿಕ ಸಾಲ ಮತ್ತು ಕಡಿಮೆ ಬಡ್ಡಿದರಗಳು ಸೀಮಿತವಾಗಿ ಉಳಿದಿವೆ. ಮುಂದಿನ ದಿನಗಳಲ್ಲಿ ಆರ್ಥಿಕ ಕುಸಿತ ಸಂಭವಿಸಿದರೇ ದೇಶಗಳಲ್ಲಿನ ಸುರಕ್ಷಾ ನಿಧಿಯನ್ನು ಚುರುಕಾಗಿ ಬಳಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.