ETV Bharat / business

ವಸೂಲಾಗದ ಸಾಲ ಸಮಸ್ಯೆ ನಿಭಾಯಿಸುವ ಬಗೆ ಹೇಗೆ?:  ಪುಸ್ತಕ ಬರೆದ RBIನ ಮಾಜಿ ಗವರ್ನರ್ - ಭಾರತದಲ್ಲಿನ ಬ್ಯಾಂಕಿಂಗ್ ವಲಯ

'ಓವರ್‌ಡ್ರಾಫ್ಟ್: ಸೇವಿಂಗ್ ದಿ ಇಂಡಿಯನ್ ಸೇವರ್' ಎಂಬ ಶೀರ್ಷಿಕೆಯ ಪುಸ್ತಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಬ್ಯಾಂಕಿಂಗ್‌ಗೆ ತೊಂದರೆ ಆಗಿರುವ ವಸೂಲಾಗದ ಸಾಲ (ಎನ್‌ಪಿಎ) ಸಮಸ್ಯೆ, ಅದರ ಕಾರಣಗಳು ಮತ್ತು ಅದರ ಹತ್ತೋಟಿಗೆ ಪಟೇಲ್ ಅವರು ತೆಗೆದುಕೊಂಡಿದ್ದ ಪ್ರಯತ್ನಗಳನ್ನು ಕೇಂದ್ರೀಕರಿಸಿದ್ದಾರೆ ಎಂದು ಪ್ರಕಾಶಕರು ಹೇಳಿದ್ದಾರೆ.

Urjit Patel
ಉರ್ಜಿತ್ ಪಟೇಲ್
author img

By

Published : Jul 6, 2020, 3:31 PM IST

ಮುಂಬೈ: ಕೇಂದ್ರ ಸರ್ಕಾರವು ಬ್ಯಾಂಕಿಂಗ್ ವಲಯವನ್ನು ಕಾಡುತ್ತಿರುವ ವಸೂಲಾಗದಿರುವ ಸಾಲದ ಹೊರೆಯ ಸಮಸ್ಯೆ ನಿಭಾಯಿಸುವ ಬಗ್ಗೆ ಆರ್‌ಬಿಐನ ಮಾಜಿ ಗವರ್ನರ್ ಪುಸ್ತಕವೊಂದನ್ನು ಬರೆದಿದ್ದಾರೆ.

ತಮ್ಮ ಅವಧಿ ಮುಗಿಯುವ ಮುನ್ನ ಏಕಾಏಕಿ ಗವರ್ನರ್​ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಕೇಂದ್ರೀಯ ಬ್ಯಾಂಕಿನ ಮುಖ್ಯಸ್ಥರಾಗಿದ್ದ ಉರ್ಜಿತ್ ಪಟೇಲ್ ಅವರು ಈ ತಿಂಗಳ ಕೊನೆಯಲ್ಲಿ ಎನ್​ಪಿಎ ಕುರಿತು ಬರೆದ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಅವರ ಪ್ರಕಾಶಕರು ತಿಳಿಸಿದ್ದಾರೆ.

'ಓವರ್‌ಡ್ರಾಫ್ಟ್: ಸೇವಿಂಗ್ ದಿ ಇಂಡಿಯನ್ ಸೇವರ್' ಎಂಬ ಶೀರ್ಷಿಕೆಯ ಪುಸ್ತಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಬ್ಯಾಂಕಿಂಗ್‌ಗೆ ತೊಂದರೆ ಆಗಿರುವ ವಸೂಲಾಗದ ಸಾಲ (ಎನ್‌ಪಿಎ) ಸಮಸ್ಯೆ, ಅದರ ಕಾರಣಗಳು ಮತ್ತು ಅದರ ಹತ್ತೋಟಿಗೆ ಪಟೇಲ್ ಅವರು ತೆಗೆದುಕೊಂಡಿದ್ದ ಪ್ರಯತ್ನಗಳನ್ನು ಕೇಂದ್ರೀಕರಿಸಿ ಈ ಪುಸ್ತಕದಲ್ಲಿ ವಿವರಣೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಉರ್ಜಿತ್ ಪಟೇಲ್ ಅವರು ತಮ್ಮ ಮೂವತ್ತು ವರ್ಷಗಳ ಸ್ಥೂಲ ಆರ್ಥಿಕ ಅನುಭವವನ್ನು ನಮ್ಮ ಬ್ಯಾಂಕ್​ಗಳನ್ನು ನಿರ್ಲಜ್ಜ ದರೋಡೆಕೋರರಿಂದ ರಕ್ಷಿಸಲು ಕಾರ್ಯತಂತ್ರಗಳನ್ನು ಗುರುತಿಸಿದ್ದಾರೆ. ಅಂತಿಮವಾಗಿ ನಮ್ಮ ಉಳಿತಾಯವನ್ನು ಉಳಿಸುವ ಗುರಿಯನ್ನು ಹೊಂದಿದ್ದಾರೆ ಎಂದು ಪ್ರಕಾಶಕ ಹಾರ್ಪರ್‌ಕಾಲಿನ್ಸ್ ಇಂಡಿಯಾ ಟ್ವೀಟ್ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.