ಮುಂಬೈ: ಡಿಸೆಂಬರ್ 11ರ ವಾರದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹವು 778 ಮಿಲಿಯನ್ ಡಾಲರ್ ಇಳಿದು 578.568( 42 ಲಕ್ಷ ಕೋಟಿ ರೂ) ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಆರ್ಬಿಐನ ಅಂಕಿ ಅಂಶಗಳು ತಿಳಿಸಿವೆ.
ಹಿಂದಿನ ವಾರದಲ್ಲಿ ವಿದೇಶಿ ಮೀಸಲು ನಿಧಿ ಜೀವಿತಾವಧಿಯ ಗರಿಷ್ಠ 579.346 ಬಿಲಿಯನ್ ಡಾಲರ್‌ಗೆ ತಲುಪಿ 4.525 ಬಿಲಿಯನ್ ಡಾಲರ್ನಷ್ಟು ಹೆಚ್ಚಳವಾಗಿತ್ತು. ಈ ವಾರದಲ್ಲಿನ ವಿದೇಶಿ ಕರೆನ್ಸಿ ಆಸ್ತಿಗಳ (ಎಫ್‌ಸಿಎ) ಕುಸಿತದಿಂದಾಗಿ ಮೀಸಲು ಇಳಿಕೆಯಾಗಿದೆ.
ರಾಷ್ಟ್ರೀಯ ರೈಲ್ವೆ ಯೋಜನೆ 2030: ಇನ್ಮುಂದೆ ನೋ ವೇಟಿಂಗ್ ಲಿಸ್ಟ್!
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಾಪ್ತಾಹಿಕ ಅಂಕಿಅಂಶಗಳ ಪ್ರಕಾರ ಎಫ್‌ಸಿಎಗಳು 1.042 ಬಿಲಿಯನ್ ಡಾಲರ್ ಇಳಿದು 536.344 ಬಿಲಿಯನ್ ಡಾಲರ್‌ಗೆ ಇಳಿದಿದೆ. ವಾರದಲ್ಲಿ ಚಿನ್ನದ ಸಂಗ್ರಹವು 284 ಮಿಲಿಯನ್ ಡಾಲರ್ ಹೆಚ್ಚಳವಾಗಿ 36.012 ಬಿಲಿಯನ್ ಡಾಲರ್‌ಗೆ ಏರಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿಯೊಂದಿಗಿನ (ಐಎಂಎಫ್) ವಿಶೇಷ ಡ್ರಾಯಿಂಗ್ ರೈಟ್ಸ್ (ಎಸ್‌ಡಿಆರ್) 3 ಮಿಲಿಯನ್ ಡಾಲರ್‌ನಿಂದ 1.503 ಬಿಲಿಯನ್ ಡಾಲರ್‌ಗೆ ಇಳಿದಿದೆ. ಐಎಂಎಫ್ ಜೊತೆಗಿನ ದೇಶದ ಮೀಸಲು ಸ್ಥಾನವು 16 ಮಿಲಿಯನ್ ಡಾಲರ್‌ಗೆ ಇಳಿದು 4.709 ಬಿಲಿಯನ್ ಡಾಲರ್‌ಗೆ ತಲುಪಿದೆ.