ETV Bharat / business

ರೈಲ್ವೆ ಇಲಾಖೆಗೆ ಬಜೆಟ್​ನಲ್ಲಿ ಒತ್ತು; ಹಸಿರು ರೈಲ್ವೆ ಯೋಜನೆಗೆ ಹೆಚ್ಚಿನ ಪ್ರಾಶಸ್ತ್ಯ

ಹಣಕಾಸು ಸಚಿವೆಯಾಗಿ ಮೂರನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್, ರೈಲ್ವೆ ಮೇಲಿನ ಬಂಡವಾಳ ವೆಚ್ಚಕ್ಕಾಗಿ 1.07 ಲಕ್ಷ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದಾರೆ.

File photo
ಸಂಗ್ರಹ ಚಿತ್ರ
author img

By

Published : Feb 1, 2021, 12:23 PM IST

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಭಾರೀ ಆರ್ಥಿಕ ನಷ್ಟ ಎದುರಿಸುತ್ತಿರುವ ಭಾರತದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಭಾರತೀಯ ರೈಲ್ವೆ ಇಲಾಖೆಯನ್ನು ಪುನರುಜ್ಜೀವಗೊಳಿಸುವ ಸಲುವಾಗಿ ‘ಹಸಿರು ರೈಲ್ವೆ’ ಯೋಜನೆ ಮತ್ತು ರೈಲ್ವೆ ಸುರಕ್ಷತಾ ನಿಧಿಯ ಮೇಲೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ಹೆಚ್ಚಿನ ಗಮನ ಹರಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ತಮ್ಮ ಮೂರನೇ ಬಜೆಟ್‌ ಮಂಡನೆ ಮಾಡತೊಡಗಿದ್ದು, ರೈಲ್ವೆ ಮೇಲಿನ ಬಂಡವಾಳ ವೆಚ್ಚಕ್ಕಾಗಿ 1.07 ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಭಾರತೀಯ ರಾಷ್ಟ್ರೀಯ ರೈಲು ಯೋಜನೆ ಅಡಿಯಲ್ಲಿ 2030ರ ವೇಳೆಗೆ ಹಸಿರು ರೈಲ್ವೆ ಹಾಗೂ ಸಿದ್ದ ರೈಲ್ವೆ ವ್ಯವಸ್ಥೆಯನ್ನು ತರುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ತಮ್ಮ ಬಜೆಟ್​ ಮಂಡನೆ ವೇಳೆ ಹೇಳಿದ್ದಾರೆ.

ರೈಲ್ವೆ ಬಜೆಟ್‌ನ್ನು ಈಗ ಕೇಂದ್ರ ಬಜೆಟ್​​ ಜೊತೆಗೆ ವಿಲೀನಗೊಳಿಸಲಾಗಿರುವುದರಿಂದ ಈ ವರ್ಷ ಬೃಹತ್​ ಮೂಲಸೌಕರ್ಯ ಯೋಜನೆಗಳು ಮತ್ತು ಸುರಕ್ಷತಾ ಕಾರ್ಯಗಳನ್ನು ಗಮನದಲ್ಲಿರಿಸಿಕೊಂಡು ಭಾರತೀಯ ರೈಲ್ವೆಗೆ ಹೆಚ್ಚಿನ ಹಂಚಿಕೆ ಸಿಗಲಿದೆ ಎಂದು ಈ ಹಿಂದೆಯೇ ನಿರೀಕ್ಷಿಸಲಾಗಿತ್ತು.

2030ರ ವೇಳೆಗೆ ಭಾರತೀಯ ರೈಲ್ವೆಯು ರಾಷ್ಟ್ರೀಯ ರೈಲು ಯೋಜನೆಯನ್ನು ತರಲು ಸಜ್ಜಾಗಿದ್ದು, ಪ್ರಯಾಣಿಕರಿಗೆ ಉತ್ತಮ ಸೇವಾ ಸೌಲಭ್ಯ ಹಾಗೂ ಸರಕು ಸಾಗಣೆ ಪ್ರಮಾಣ ದ್ವಿಗುಣಗೊಳಿಸಿಕೊಳ್ಳುವ ಉದ್ದೇಶ ಇರಿಸಿಕೊಂಡಿದೆ ಎಂದು ಸೀತರಾಮನ್​​ ಸ್ಪಷ್ಟಪಡಿಸಿದ್ದಾರೆ.

ಅದಲ್ಲದೆ, ಟೈರ್​-2 ಹಾಗೂ 3 ಸಿಟಿಗಳಲ್ಲಿನ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು 2030ರ ವೇಳೆಗೆ ಭಾರತೀಯ ರೈಲ್ವೆ 'ಹಸಿರು ರೈಲ್ವೆ' ಆಗಬೇಕೆಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.