ನವದೆಹಲಿ: ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಇತ್ತೀಚೆಗೆ ಘೋಷಿಸಲಾದ ವಿಮಾ ಯೋಜನೆ ಅನುಷ್ಠಾನದ ಪ್ರಗತಿಯ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸಭೆ ನಡೆಸಿ ಪರಿಶೀಲಿಸಿದರು. ನಾಮನಿರ್ದೇಶಿತರಿಗೆ ಶೀಘ್ರವಾಗಿ ಘೋಷಣೆಯ ಪ್ರಯೋಜನೆಗಳನ್ನು ತಲುಪಿಸಲು ತ್ವರಿತ ಕ್ಲೇಮ್ ನೀಡುವಂತೆ ಅವರು ಸೂಚಿಸಿದರು.
50 ಲಕ್ಷ ರೂ. ವಿಮಾ ಯೋಜನೆಯು ಸಮುದಾಯ ಆರೋಗ್ಯ ಕಾರ್ಯಕರ್ತರು ಸೇರಿದಂತೆ 22.12 ಲಕ್ಷ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರಿಗೆ ಅನ್ವಯವಾಗುತ್ತಿದ್ದು, ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ನ (ಪಿಎಂಜಿಕೆಪಿ) ಅಡಿಯಲ್ಲಿ ಘೋಷಿಸಲಾದ ಯೋಜನೆಯ ಭಾಗವಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿರ್ವಹಿಸುತ್ತಿರುವ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯ ಮೂಲಕ ಧನಸಹಾಯ ಪಡೆದ ಈ ಯೋಜನೆಯನ್ನು ಸೆಪ್ಟೆಂಬರ್ವರೆಗೆ ಮತ್ತೆ ಮೂರು ತಿಂಗಳು ವಿಸ್ತರಿಸಲಾಯಿತು.
ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ಪರಿಶೀಲನಾ ಸಭೆಯಲ್ಲಿ, ನ್ಯೂ ಇಂಡಿಯಾ ಅಶ್ಯೂರೆನ್ಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ಈ ಯೋಜನೆಯ ಮುಖ್ಯಾಂಶ ಮತ್ತು ಅದರ ಅನುಷ್ಠಾನದ ಸ್ಥಿತಿಯ ಬಗ್ಗೆ ವಿವರಗಳನ್ನು ನೀಡಿದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಇಲ್ಲಿಯವರೆಗೆ 147 ಇಂಟಿಮೆಷನ್ ಸ್ವೀಕರಿಸಲಾಗಿದ್ದು, 87 ಅರ್ಜಿಗಳಿಗೆ ರೈಟ್ಸ್ ದಾಖಲೆ ಸಲ್ಲಿಸಲಾಗಿದೆ. ಅದರಲ್ಲಿ 15 ಪಾವತಿ ಆಗಿದ್ದು, 4 ಪಾವತಿ ಅನುಮೋದನೆ ನೀಡಲಾಗಿದೆ ಮತ್ತು 13 ಪರೀಕ್ಷಾ ಹಂತದಲ್ಲಿವೆ ಎಂದು ಹೇಳಿದರು. ಒಟ್ಟು 55 ಕ್ಲೇಮ್ಗಳು ಅನರ್ಹವೆಂದು ಕಂಡುಬಂದಿದ್ದು, ಅದರಲ್ಲಿ 35 ಕ್ಲೇಮ್ಗಳು ಪೊಲೀಸ್ ಸಿಬ್ಬಂದಿ, ಆಸ್ಪತ್ರೆಗಳಿಗೆ ಸಂಬಂಧವಿಲ್ಲದ ಪುರಸಭೆಯ ಕಾರ್ಮಿಕರು, ಶಿಕ್ಷಣ, ಕಂದಾಯ ಇಲಾಖೆಗಳ ಜನರಿದ್ದಾರೆ ಎಂದು ಅವರು ತಿಳಿಸಿದರು.