ನವದೆಹಲಿ: ಅಂಕಿಅಂಶ ಸಚಿವಾಲಯವು ಜನವರಿ 7 ರಂದು ರಾಷ್ಟ್ರೀಯ ಆದಾಯ ಅಥವಾ ಜಿಡಿಪಿ ದತ್ತಾಂಶದ ಮೊದಲ ಮುಂಗಡ ಅಂದಾಜು ಬಿಡುಗಡೆ ಮಾಡಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ದಾಖಲಾದ ಶೇ 4.5ರಷ್ಟು ಜಿಡಿಪಿಯ, ಆರು ವರ್ಷಗಳ ಅವಧಿಯಲ್ಲಿ ದಾಖಲಾದ ಅತಿ ಕಡಿಮೆ ಬೆಳವಣಿಗೆಯಾಗಿದೆ. ಇದಕ್ಕೂ ಮೊದಲು ಹಣಕಾಸಿನ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಶೇ 5ರಷ್ಟು ಇತ್ತು.
ಮುಂಗಡ ಅಂದಾಜುಗಳ ಬೆಂಚ್‌ಮಾರ್ಕ್-ಇಂಡಿಕೇಟರ್ ವಿಧಾನವನ್ನು ಬಳಸಿಕೊಂಡು ಅಂಕಿಅಂಶಗಳು ಬಿಡುಗಡೆ ಮಾಡಲಾಗುತ್ತಿದೆ. ಈ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿನ ಕೈಗಾರಿಕಾ ಉತ್ಪಾದನಾ ಸೂಚ್ಯಂಕದಂತಹ (ಐಐಪಿ) ಸೂಚಕಗಳ ಜೊತೆಗೆ ವಲಯವಾರು ಅಂದಾಜುಗಳನ್ನು ಪಡೆಯಲಾಗುತ್ತದೆ. ಪಟ್ಟಿಮಾಡಿದ ಖಾಸಗಿ ಕಂಪನಿಗಳ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದ ಆರ್ಥಿಕ ಕಾರ್ಯಕ್ಷಮತೆ, ಬೆಳೆಗಳ ಉತ್ಪಾದನೆಯ ಮೊದಲ ಮುಂಗಡ ಅಂದಾಜುಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಾತೆಗಳು, ಸಾಲಗಳ ಠೇವಣಿಗಳ ಸೂಚಕಗಳು, ರೈಲ್ವೆಯ ಪ್ರಯಾಣಿಕ ದಟ್ಟಣೆ ಮತ್ತು ಸರಕು ಗಳಿಕೆ, ನಾಗರಿಕ ವಿಮಾನಯಾನ, ವಾಣಿಜ್ಯ ವಾಹನಗಳ ಮಾರಾಟ ಒಳಗೊಂಡು ಈ ವಿತ್ತೀಯ ವರ್ಷದ ಮೊದಲ ಎಂಟು ತಿಂಗಳ ಚಟುವಟಿಕೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
2017ರ ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಚಯ ಮತ್ತು ತೆರಿಗೆ ರಚನೆಯಲ್ಲಿನ ಬದಲಾವಣೆಗಳು, ಜಿಡಿಪಿ ಸಂಕಲನಕ್ಕೆ ಬಳಸಲಾಗುವ ಒಟ್ಟು ತೆರಿಗೆ, ಜಿಎಸ್‌ಟಿ ರಹತಿ ಮತ್ತು ಜಿಎಸ್‌ಟಿ ಸಹಿತ ತೆರಿಗೆ ಆದಾಯ ಒಳಗೊಂಡಿದೆ. 2019-20ನೇ ಸಾಲಿಗೆ, ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (ಸಿಜಿಎ) ಒದಗಿಸಿದಂತೆ ತೆರಿಗೆ ಆದಾಯದ ಬಜೆಟ್ ಅಂದಾಜುಗಳನ್ನು ಪ್ರಸ್ತುತ ಬೆಲೆಗಳಲ್ಲಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಅಂದಾಜು ಮಾಡಲು ಬಳಸಲಾಗುತ್ತದೆ.