ನವದೆಹಲಿ: 2019ರ ಡಿಸೆಂಬರ್‌ನಲ್ಲಿ 27.11 ಬಿಲಿಯನ್ ಡಾಲರ್‌ಗೆ ಹೋಲಿಸಿದರೆ 2020ರ ವೇಳೆಗೆ ದೇಶವು 26.89 ಬಿಲಿಯನ್(19,65,45,06,02,500 ರೂ.(1ಲಕ್ಷದ 96 ಸಾವಿರ ಕೋಟಿ ರೂ) ವಹಿವಾಟು ದಾಖಲಿಸಿದ್ದರಿಂದ ಭಾರತದ ರಫ್ತು ಪ್ರಮಾಣ ಶೇ 8ರಷ್ಟು ಕುಸಿದಿದೆ.
ಇತ್ತೀಚೆಗೆ ಬಿಡುಗಡೆಯಾದ ಪ್ರಾಥಮಿಕ ಮಾಹಿತಿ ಪ್ರಕಾರ, ಪೆಟ್ರೋಲಿಯಂ, ಚರ್ಮ ಮತ್ತು ಸಾಗರ ಉತ್ಪನ್ನಗಳಂತಹ ಕ್ಷೇತ್ರಗಳಲ್ಲಿನ ಸಂಕೋಚನದಿಂದಾಗಿ ಈ ಕುಸಿತ ಸಂಭವಿಸಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.
12.49 ಬಿಲಿಯನ್ ಡಾಲರ್ ವ್ಯಾಪಾರ ಕೊರತೆಗೆ ಹೋಲಿಸಿದರೆ, ಡಿಸೆಂಬರ್‌ನಲ್ಲಿ ವ್ಯಾಪಾರ ಕೊರತೆ ಶೇ 25.78ರಿಂದ 15.71 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ.
2019ರ ಡಿಸೆಂಬರ್‌ನಲ್ಲಿ ರಫ್ತು ಪ್ರಮಾಣ 27.11 ಬಿಲಿಯನ್ ಡಾಲರ್ ಆಗಿತ್ತು. ಆಮದು 39.5 ಬಿಲಿಯನ್ ಡಾಲರ್ನಷ್ಟಿತ್ತು. 2020ರ ನವೆಂಬರ್ನಲ್ಲಿ ರಫ್ತು ಪ್ರಮಾಣ ಶೇ 8.74ರಷ್ಟು ಕುಸಿಯಿತು.
ಇದನ್ನೂ ಓದಿ: ದೇಶದ ಮತ್ತೊಂದು ದೊಡ್ಡ ಆಸ್ತಿ ಸೇಲ್.. ₹90,000 ಕೋಟಿಗೆ ಭಾರತ್ ಪೆಟ್ರೋಲಿಯಂ ಮಾರಲು ಕೇಂದ್ರದ ಚಿಂತನೆ!
2020-21ರ ಏಪ್ರಿಲ್-ಡಿಸೆಂಬರ್‌ನಲ್ಲಿ ದೇಶದ ಸರಕು ರಫ್ತು ಶೇ 15.8ರಷ್ಟು ಕುಸಿದು 200.55 ಶತಕೋಟಿ ಡಾಲರ್‌ಗೆ ತಲುಪಿದೆ. ಇದು 2019-20ರ ಇದೇ ಅವಧಿಯಲ್ಲಿ 238.27 ಬಿಲಿಯನ್ ಡಾಲರ್ ಆಗಿತ್ತು.
ಪ್ರಸಕ್ತ ಹಣಕಾಸು ವರ್ಷದ ಒಂಬತ್ತು ತಿಂಗಳಲ್ಲಿನ ಆಮದು ಶೇ 29.08ರಷ್ಟು ಇಳಿಕೆ ಕಂಡು 258.29 ಶತಕೋಟಿ ಡಾಲರ್‌ಗೆ ತಲುಪಿದೆ. ಇದು 2019-20 ಏಪ್ರಿಲ್-ಡಿಸೆಂಬರ್‌ನಲ್ಲಿ 364.18 ಬಿಲಿಯನ್ ಡಾಲರ್ ಆಗಿತ್ತು.