ETV Bharat / business

6 ಕೋಟಿ ನೌಕರರಿಗೆ ಸಿಹಿ ಹಂಚಿದ ಕೇಂದ್ರ... ಇಪಿಎಫ್​ಒ ಬಡ್ಡಿ ದರ ಹೆಚ್ಚಳ

ಸೆಂಟ್ರಲ್ ಬೋರ್ಡ್​ ಆಫ್ ಟ್ರಸ್ಟೀಸ್​ ಸದಸ್ಯರ ಸಭೆ ಬಳಿಕ ಕೇಂದ್ರ ಕಾರ್ಮಿಕ ಸಚಿವ ಸಂತೋಷ್​ ಗಂಗವಾರ್ ಮಾತನಾಡಿ, ನೌಕರರ ಭವಿಷ್ಯ ನಿಧಿಯ ಈಗಿನ ಬಡ್ಡಿದರ ಶೇ 8.55 ರಿಂದ ಶೇ 8.65ಕ್ಕೆ ಏರಿಕೆ ಮಾಡಲಾಗಿದೆ. 2018-19ರ ಸಾಲಿನ ಸಂಗ್ರಹ ಮೊತ್ತಕ್ಕೆ ಈ ಬಡ್ಡಿದರ ಅನ್ವಯಿಸಲಿದೆ.

Cash
author img

By

Published : Feb 21, 2019, 11:39 PM IST

ಸೆಂಟ್ರಲ್ ಬೋರ್ಡ್​ ಆಫ್ ಟ್ರಸ್ಟೀಸ್​ ಸದಸ್ಯರ ಸಭೆ ಬಳಿಕ ಕೇಂದ್ರ ಕಾರ್ಮಿಕ ಸಚಿವ ಸಂತೋಷ್​ ಗಂಗವಾರ್ ಮಾತನಾಡಿ, ನೌಕರರ ಭವಿಷ್ಯ ನಿಧಿಯ ಈಗಿನ ಬಡ್ಡಿದರ ಶೇ 8.55 ರಿಂದ ಶೇ 8.65ಕ್ಕೆ ಏರಿಕೆ ಮಾಡಲಾಗಿದೆ. 2018-19ರ ಸಾಲಿನ ಸಂಗ್ರಹ ಮೊತ್ತಕ್ಕೆ ಈ ಬಡ್ಡಿದರ ಅನ್ವಯಿಸಲಿದೆ. 2016ರ ಆರ್ಥಿಕ ವರ್ಷದಲ್ಲಿ ಮೊದಲ ಬಾರಿಗೆ ಏರಿಕೆ ಮಾಡಲಾಗಿದೆ. ಇದರಿಂದ 6 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಪರಿಷ್ಕೃತ ಬಡ್ಡಿದರವನ್ನು ಸಿಬಿಟಿ ಅನುಮೋದಿಸಿದ ಬಳಿಕ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆಗೆ ಒಪ್ಪಿಸಿ, ಒಪ್ಪಿಗೆ ಪಡೆದ ನಂತರ ಚಂದಾದಾರ ಖಾತೆಯಲ್ಲಿನ ಹಣಕ್ಕೆ ಅನುಗುಣವಾಗಿ ಬಡ್ಡಿದರ ನೀಡಿಕೆಗೆ ಪರಿಗಣಿಸಲಾಗುತ್ತದೆ.

ಇಪಿಎಫ್ಒನಲ್ಲಿ 8.5 ಕೋಟಿಗೂ ಅಧಿಕ ಸದಸ್ಯರ ₹ 10 ಲಕ್ಷ ಕೋಟಿಗೂ ಅಧಿಕ ಮೊತ್ತವಿದೆ. ಎನ್​ಪಿಎಸ್​ನಲ್ಲಿ 1.15 ಕೋಟಿ ಗೂ ಅಧಿಕ ಸದಸ್ಯರು ₹ 1.1 ಲಕ್ಷ ಕೋಟಿ ನಿಧಿಯಿದೆ. 2017-2018ರಲ್ಲಿ ಶೇ8.55 ರಷ್ಟು ಬಡ್ಡಿದರ ನೀಡಲಾಗಿತ್ತು. 5 ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ ಬಡ್ಡಿ ದರವಾಗಿತ್ತು. 2016-2017ರಲ್ಲಿ ಬಡ್ಡಿ ದರ ಶೇ 8.65ರಷ್ಟು, 2015-2016ರಲ್ಲಿ ಶೇ 8.8ರಷ್ಟು, 2013-14ರಲ್ಲಿ ಶೇ 8.75ರಷ್ಟು ಹಾಗೂ 2012-13ರಲ್ಲಿ ಶೇ 8.5ರಷ್ಟು ನೀಡಲಾಗುತ್ತಿತ್ತು.

Intro:Body:

bussiness

Conclusion:

For All Latest Updates

TAGGED:

bussiness
ETV Bharat Logo

Copyright © 2024 Ushodaya Enterprises Pvt. Ltd., All Rights Reserved.