ETV Bharat / business

ಟ್ರಂಪ್​ ಭೇಟಿ ಖುಷಿಯ ಉನ್ಮಾದ, ಒತ್ತಡದಲ್ಲಿ ಮೋದಿ ವಾಣಿಜ್ಯ ಒಪ್ಪಂದ ಮಾಡಿಕೊಂಡರೆ ಆಪತ್ತು

author img

By

Published : Feb 15, 2020, 10:12 PM IST

ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭೇಟಿಯ ಸಮಯದಲ್ಲಿ ಉಭಯ ದೇಶಗಳ ನಡುವೆ ಸೀಮಿತ ವ್ಯಾಪಾರ ಒಪ್ಪಂದಕ್ಕೆ ಸಹಿ ಬೀಳಲಿವೆ. ಒಟ್ಟಾರೆ ಒಪ್ಪಂದ ಮೊತ್ತ 10 ಬಿಲಿಯನ್ ಡಾಲರ್​ ಮೌಲ್ಯದ ಸರಕು ಮತ್ತು ಸೇವೆಗಳು ಒಳಗೊಂಡಿರಲಿದೆ. ಇದು ಒಟ್ಟು ದ್ವಿಪಕ್ಷೀಯ ವ್ಯಾಪಾರದ ಸುಮಾರು ಶೇ 12ರಷ್ಟು ಇರಲಿದೆ. ಅಮೆರಿಕದ ಕೃಷಿ ಮತ್ತು ಡೈರಿ ಉತ್ಪನ್ನಗಳ ಮೇಲಿನ ನಿರ್ಬಂಧವನ್ನು ಭಾರತ ಸಡಿಲಗೊಳಿಸಲಿದೆ ಎಂಬು ಆತಂಕ ಭಾರತೀಯ ಕೃಷಿಕರಿಲಿದೆ. ಕೆಲವು ವ್ಯಾಪಾರ ತಜ್ಞರು ಇದಕ್ಕೆ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ.

India- US
ಭಾರತ- ಅಮೆರಿಕ

ನವದೆಹಲಿ: ಈ ಮಾಸಿಕದ ಕೊನೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಥಮ ಬಾರಿಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮುಂಚಿತವಾಗಿ ಇಂಡೋ-ಅಮೆರಿಕ ವ್ಯಾಪಾರ ಒಪ್ಪಂದಗಳು ಸಾಕಷ್ಟು ಚರ್ಚೆಯಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ನಾಯಕನಿಗೆ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ತಮ್ಮ ತವರು ರಾಜ್ಯ ಗುಜರಾತ್‌ನಲ್ಲಿ ಆತಿಥ್ಯದ ಅದ್ಧೂರಿ​ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದಾರೆ.

ವರದಿಗಳ ಪ್ರಕಾರ, ಈ ಭೇಟಿಯ ಸಮಯದಲ್ಲಿ ಉಭಯ ದೇಶಗಳ ನಡುವೆ ಸೀಮಿತ ವ್ಯಾಪಾರ ಒಪ್ಪಂದಕ್ಕೆ ಸಹಿ ಬೀಳಲಿವೆ. ಒಟ್ಟಾರೆ ಒಪ್ಪಂದ ಮೊತ್ತ 10 ಬಿಲಿಯನ್ ಡಾಲರ್​ ಮೌಲ್ಯದ ಸರಕು ಮತ್ತು ಸೇವೆಗಳು ಒಳಗೊಂಡಿರಲಿದೆ. ಇದು ಒಟ್ಟು ದ್ವಿಪಕ್ಷೀಯ ವ್ಯಾಪಾರದ ಸುಮಾರು ಶೇ 12ರಷ್ಟು ಇರಲಿದೆ. ಅಮೆರಿಕದ ಕೃಷಿ ಮತ್ತು ಡೈರಿ ಉತ್ಪನ್ನಗಳ ಮೇಲಿನ ನಿರ್ಬಂಧವನ್ನು ಭಾರತ ಸಡಿಲಗೊಳಿಸಲಿದೆ ಎಂಬ ಆತಂಕ ಭಾರತೀಯ ಕೃಷಿಕರಲ್ಲಿದೆ. ಕೆಲವು ವ್ಯಾಪಾರ ತಜ್ಞರು ಇದಕ್ಕೆ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ.

ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಗಳು ಸಂಭವಿಸುತ್ತದೆ ಎಂಬುದರ ಬಗ್ಗೆ ನಾನು ತುಂಬಾ ನಿರಾಶಾವಾದಿಯಾಗಿದ್ದೇನೆ. ನಮ್ಮ ಕೃಷಿ, ಡೈರಿ ಮತ್ತು ನಮ್ಮ ಮೇಕ್ ಇನ್ ಇಂಡಿಯಾ ಮತ್ತು ಭಾರತದಲ್ಲಿ ಜೋಡಿಸಿ ನೀತಿಗಳ ಅಡಿಯಲ್ಲಿ ನಾವು ಪ್ರೋತ್ಸಾಹಿಸಲು ಬಯಸುವ ವಸ್ತುಗಳನ್ನು ರಕ್ಷಿಸುವ ಬಗ್ಗೆ ನಮ್ಮ ಮೂಲಭೂತ ನಿಲುವನ್ನು ರಾಜಿ ಮಾಡಿಕೊಳ್ಳಬಹುದು ಎಂದು ಮಾಜಿ ವಾಣಿಜ್ಯ ಕಾರ್ಯದರ್ಶಿ ಅಜಯ್ ದುವಾ ಹೇಳಿದರು.

ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಭೇಟಿಗೆ ಮುನ್ನ ಭಾರತೀಯ ಸಮಾಲೋಚಕರು ಒಪ್ಪಂದವನ್ನು ಕೈಗೆತ್ತಿಕೊಳ್ಳುವುದು ಅಷ್ಟು ಸುಲಭವಲ್ಲ. ಏಕೆಂದರೆ ಈ ವಾರ ಅಮೆರಿಕ, ಭಾರತ ಮತ್ತು ಇತರ ಹಲವು ದೇಶಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದ ತೆಗೆದುಹಾಕಿದೆ. ಅದು ಅಮೆರಿಕದ ಉದ್ಯಮಕ್ಕೆ ಯಾವುದೇ ಹಾನಿಯಾಗಬಹುದು ಎಂಬ ಕಾರಣದಿಂದ ಈ ರೀತಿ ಮಾಡಿದೆ.

ಅಧ್ಯಕ್ಷ ಟ್ರಂಪ್ ಅವರ ಭೇಟಿಯ ಯಶಸ್ಸಿನಲ್ಲಿ ನೀವು ಏನನ್ನಾದರೂ ಮಾಡಬೇಕು ಎಂಬ ಒತ್ತಡದಲ್ಲಿ ಒಪ್ಪಂದಗಳಿಗೆ ಅಸ್ತು ಎನ್ನಬಾರದು ಎಂದು ಅಜಯ್ ದುವಾ ಈಟಿವಿ ಭಾರತ್ ಹಿರಿಯ ಪತ್ರಕರ್ತ ಕೃಷ್ಣಾನಂದ ತ್ರಿಪಾಠಿ ಅವರಿಗೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.