ನವದೆಹಲಿ: ಲಾಕ್ಡೌನ್ ಬಳಿಕ ದೇಶಿಯ ವಿಮಾನಯಾನ ಸೇವೆಗಳಿಗೆ ಅನುಮತಿ ನೀಡಿದ ಬಳಿಕ ಈ ಒಂದು ತಿಂಗಳ ಅವಧಿಯಲ್ಲಿ ದೇಶಿ ವಿಮಾನಯಾನ ಸಂಸ್ಥೆಗಳು ಎರಡು ದಶಲಕ್ಷ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೂನ್ 24ರವರೆಗೆ ದೇಶಿಯ ವಿಮಾನಯಾನ ಸಂಸ್ಥೆಗಳು 1.8 ಮಿಲಿಯನ್ ಪ್ರಯಾಣಿಕರನ್ನು ಕರೆದೊಯ್ದಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಾಧಿ ಹೇಳಿದ್ದಾರೆ.
ಒಂದು ವರ್ಷದ ಆಧಾರದ ಮೇಲೆ ಇದೇ ಸಾಮರ್ಥ್ಯದೊಂದಿಗೆ ಹೋಲಿಸಿದರೆ, ಈ ಸಂಖ್ಯೆ ಕಡಿಮೆ ಆಗುತ್ತದೆ ಎಂದು ಯುಎಸ್-ಇಂಡಿಯಾ ಏವಿಯೇಷನ್ ಕೋ-ಆಪರೇಷನ್ ಪ್ರೋಗ್ರಾಮ್ ವೆಬ್ನಾರ್ನಲ್ಲಿ ಮಾತನಾಡಿದರು.
ವಾಯುಯಾನದ ಮೇಲಿನ ವಿಶ್ವಾಸವನ್ನು ಪುನಃಸ್ಥಾಪಿಸಲು ಸಚಿವಾಲಯವು ನಾಗರಿಕ ವಿಮಾನಯಾನ ಕ್ಷೇತ್ರದ ಎಲ್ಲ ವರ್ಗಗಳ ಜತೆ ಸಹಕರಿಸಲಿದೆ. ನಾವು ಮುಂದುವರಿಯುತ್ತಿದ್ದಂತೆ ಕ್ಷೇತ್ರದ ಬೆಳವಣಿಗೆಗೆ ನಮ್ಮ ಕಾರ್ಯತಂತ್ರಗಳ ಬಗ್ಗೆ ಪುನಃ ಕೆಲಸ ಮಾಡುತ್ತೇವೆ, ನವೀಕರಿಸುತ್ತೇವೆ ಮತ್ತು ಮರು ಪಡೆಯುತ್ತೇವೆ ಎಂದರು.
ಇಲ್ಲಿಯವರೆಗೆ ದೇಶಿಯ ಪ್ರಯಾಣಿಕರ ದಟ್ಟಣೆಯು ದಿನಕ್ಕೆ ಸರಾಸರಿ 65 ಸಾವಿರದಿಂದ 72,000 ಪ್ರಯಾಣಿಕರಷ್ಟಿದೆ. ನಿತ್ಯ 700ಕ್ಕೂ ಹೆಚ್ಚು ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
ಕಳೆದ ವಾರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ದೇಶಿಯ ಚಲನಶೀಲತೆಯನ್ನು ಕಡಿಮೆ ಮಾಡಲು ಮತ್ತು ಪ್ರಯಾಣಿಕರ ದಟ್ಟಣೆಯನ್ನು ಹೆಚ್ಚಿಸಲು ಕೇಂದ್ರವು ಹೆಚ್ಚಿನ ಸ್ಥಳಗಳಿಗೆ ವಿಮಾನಗಳ ಹಾರಾಟಕ್ಕೆ ಅನುಮತಿಸುತ್ತದೆ ಎಂದು ಹೇಳಿದ್ದರು.
ಲಾಕ್ಡೌನ್ ಬಳಿಕ ದೇಶಿಯ ವಿಮಾನ ಸೇವೆಗಳು ಮೇ 25ರಿಂದ ಪುನರಾರಂಭಗೊಂಡಿವೆ. ಪ್ರಸ್ತುತ, ವಿಮಾನಯಾನ ಸಂಸ್ಥೆಗಳಿಗೆ ತಮ್ಮ ಒಟ್ಟು ಸಾಮರ್ಥ್ಯದ ಶೇ.33ರಷ್ಟು ನಿಯೋಜಿಸಲು ಮಾತ್ರವೇ ಅವಕಾಶವಿದೆ.