ETV Bharat / business

ತಂತ್ರಜ್ಞಾನ ದೈತ್ಯ ಚೀನಾ, ಅಮೆರಿಕ, ದ. ಕೊರಿಯಾಗೆ ಟಕ್ಕರ್: ಡಿಜಿಟಲ್​​ ಪೇಮೆಂಟ್​​ನಲ್ಲಿ​ ಭಾರತ ನಂ.1

2020ರಲ್ಲಿ ಭಾರತದ ನೈಜ-ಸಮಯದ ಆನ್‌ಲೈನ್ ವಹಿವಾಟುಗಳ ನೆಲೆಯಾಗಿದೆ. ಆ ವೇಳೆ ದೇಶದಲ್ಲಿ 25.5 ಬಿಲಿಯನ್ ರಿಯಲ್-ಟೈಮ್ ಪೇಮೆಂಟ್​ ವಹಿವಾಟುಗಳು ನಡೆದಿವೆ. ಈ ನಂತರ ಚೀನಾದಲ್ಲಿ 15.7 ಬಿಲಿಯನ್, ದಕ್ಷಿಣ ಕೊರಿಯಾದಲ್ಲಿ 6 ಬಿಲಿಯನ್, ಥೈಲ್ಯಾಂಡ್​ನಲ್ಲಿ 5.2 ಬಿಲಿಯನ್ ಮತ್ತು ಇಂಗ್ಲೆಂಡ್​ನಲ್ಲಿ 2.8 ಬಿಲಿಯನ್ ಡಿಜಿಟಲ್​ ಪೇಮೆಂಟ್​ ಮಾಡಲಾಗಿದೆ.

Digital payments
Digital payments
author img

By

Published : Apr 3, 2021, 7:52 PM IST

ನವದೆಹಲಿ: ಕೋವಿಡ್ ಮಧ್ಯೆಯೂ ಭಾರತವು 2020ರಲ್ಲಿ ಡಿಜಿಟಲ್​ ಪಾವತಿಯಲ್ಲಿ ಚೀನಾ, ದಕ್ಷಿಣ ಕೊರಿಯಾ ಮತ್ತು ಅಮೆರಿಕದಂತಹ ತಂತ್ರಜ್ಞಾನ ದೈತ್ಯ ದೇಶಗಳನ್ನು ಹಿಂದಿಕ್ಕಿದೆ.

2020ರಲ್ಲಿ ಭಾರತದ ನೈಜ-ಸಮಯದ ಆನ್‌ಲೈನ್ ವಹಿವಾಟುಗಳ ನೆಲೆಯಾಗಿದೆ. ಆ ವೇಳೆ ದೇಶದಲ್ಲಿ 25.5 ಬಿಲಿಯನ್ ರಿಯಲ್-ಟೈಮ್ ಪೇಮೆಂಟ್​ ವಹಿವಾಟುಗಳು ನಡೆದಿವೆ. ಈ ನಂತರ ಚೀನಾದಲ್ಲಿ 15.7 ಬಿಲಿಯನ್, ದಕ್ಷಿಣ ಕೊರಿಯಾದಲ್ಲಿ 6 ಬಿಲಿಯನ್, ಥೈಲ್ಯಾಂಡ್​ನಲ್ಲಿ 5.2 ಬಿಲಿಯನ್ ಮತ್ತು ಇಂಗ್ಲೆಂಡ್​ನಲ್ಲಿ 2.8 ಬಿಲಿಯನ್. ಅಗ್ರ 10 ದೇಶಗಳಲ್ಲಿ 1.2 ಬಿಲಿಯನ್ ವಹಿವಾಟುಗಳೊಂದಿಗೆ ಅಮೆರಿಕ ಒಂಬತ್ತನೇ ಸ್ಥಾನದಲ್ಲಿದೆ.

ತ್ವರಿತ ಪಾವತಿಗಳ ವಹಿವಾಟು ಪರಿಮಾಣವು 2020ರಲ್ಲಿ ರಿಯಲ್ ಟೈಮ್​​ ವಹಿವಾಟುಗಳಲ್ಲಿ ಶೇ 15.6ರಷ್ಟು ಮತ್ತು ಇತರ ಎಲೆಕ್ಟ್ರಾನಿಕ್ ಪಾವತಿ ಶೇ 22.9ರಷ್ಟಿತ್ತು ಎಂದು ಇಂಗ್ಲೆಂಡ್​ ಮೂಲದ ಪಾವತಿ ವ್ಯವಸ್ಥೆ ಕಂಪನಿ ಎಸಿಐ ವರ್ಲ್​​ವೈಡ್ ವರದಿ ತಿಳಿಸಿದೆ.

ಇದನ್ನೂ ಓದಿ: ಹರಿದ್ವಾರ ಕುಂಭಮೇಳ ಸಂಭ್ರಮಕ್ಕೆ ಕೋವಿಡ್ ಅಡ್ಡಿ: ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ

ಕಾಗದ ಆಧಾರಿತ ಪಾವತಿಗಳು ಭಾರತದಲ್ಲಿ ಶೇ 61.4ರಷ್ಟು ಪಾಲು ಹೊಂದಿವೆ. ತ್ವರಿತ ಪಾವತಿ ಮತ್ತು ಇತರ ಎಲೆಕ್ಟ್ರಾನಿಕ್ ಪಾವತಿಗಳ ಕ್ರಮವಾಗಿ ಶೇ 37.1ರಷ್ಟು ಮತ್ತು ಶೇ 34.6ರಷ್ಟಕ್ಕೆ ಬೆಳೆಯುವ ಸಾಧ್ಯತೆಯಿದ್ದು, ಇದು 2025ರ ವೇಳೆಗೆ ಬದಲಾಗಲಿದೆ. ಕಾಗದ ಆಧಾರಿತ ವಹಿವಾಟಿನ ಪಾಲು ಶೇ 28.3ಕ್ಕೆ ಕುಗ್ಗುತ್ತದೆ. ಇದಲ್ಲದೆ, ಒಟ್ಟಾರೆ ಎಲೆಕ್ಟ್ರಾನಿಕ್ ವಹಿವಾಟಿನಲ್ಲಿ ರಿಯಲ್​-ಟೈಮ್​​ ಪಾವತಿಗಳ ಪ್ರಮಾಣವು 2024ರ ವೇಳೆಗೆ ಶೇ 50ರಷ್ಟು ಮೀರುತ್ತದೆ ಎಂದಿದೆ.

ಡಿಜಿಟಲ್ ಹಣಕಾಸು ಮೂಲಸೌಕರ್ಯವನ್ನು ಸರ್ಕಾರ, ನಿಯಂತ್ರಕ, ಬ್ಯಾಂಕ್​ಗಳು ಮತ್ತು ಫಿನ್‌ಟೆಕ್‌ಗಳ ನಡುವಿನ ಸಹಯೋಗದಿಂದ ನಿರೂಪಿಸಲಾಗಿದೆ. ಇದು ಆರ್ಥಿಕ ಸೇರ್ಪಡೆಗೆ ಅನುವು ಮಾಡಿಕೊಟ್ಟಿದೆ ಜೊತೆಗೆ ನಾಗರಿಕರಿಗೆ ತ್ವರಿತ ಪಾವತಿ ಡಿಜಿಟಲೀಕರಣ ಸಹ ಒದಗಿಸಿದೆ.

ಪೇಟಿಎಂ, ಫೋನ್​​ಪೇ, ಪಿನ್​​ಲ್ಯಾಬ್ಸ್​, ರ್ಯಾಝೋಪೇ, ಭರತ್​ಪೇ, ಬಿ2ಸಿ ಮತ್ತು ಬಿ2ಬಿಯಂತಹ ಇತರರು ಡಿಜಿಟಲ್ ಪಾವತಿ ಪ್ಲಾಟ್​​ಫಾರ್ಮ್​ಗಳು ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.