ನವದೆಹಲಿ: ಉತ್ಪನ್ನಗಳಿಗೆ ಹಾಗೂ ಸೇವೆಗಳಿಗೆ ರೇಟಿಂಗ್ ನೀಡುವ ಟಿಆರ್ಎ ಸಂಸ್ಥೆ 2020ನೇ ವರ್ಷದ ಬ್ರಾಂಡ್ ಟ್ರಸ್ಟ್ ರಿಪೋರ್ಟ್ (ಬಿಟಿಆರ್) ಅನ್ನು ಬಿಡುಗಡೆ ಮಾಡಿದ್ದು, ಅಮೆರಿಕ ಮೂಲದ ಡೆಲ್ ಅನ್ನು ಭಾರತದ ವಿಶ್ವಾಸಾರ್ಹತೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಿದೆ.
ಚೀನಾದ ಮೊಬೈಲ್ ಫೋನ್ ತಯಾರಿಕಾ ಸಂಸ್ಥೆ ಎಂಐ ಎರಡನೇ ಸ್ಥಾನದಲ್ಲಿದ್ದು, ಮೊಬೈಲ್ ಉತ್ಪನ್ನಗಳ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಬ್ರಾಂಡ್ ಟ್ರಸ್ಟ್ ರಿಪೋರ್ಟ್ ತನ್ನ ವರದಿಯಲ್ಲಿ ತಿಳಿಸಿವೆ.
ಸ್ಯಾಮ್‌ಸಂಗ್ ಮೊಬೈಲ್ಸ್ ಮೂರನೇ ಸ್ಥಾನ ಪಡೆದರೆ, ಆಪಲ್ ಐಫೋನ್ ಮತ್ತು ಎಲ್ಜಿ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನು ಪಡೆದಿವೆ. ಒಪ್ಪೋ ಈ ವರ್ಷ ಟ್ರಸ್ಟ್ ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿದೆ.
ಹಿಂದಿ ಮನರಂಜನಾ ಚಾನೆಲ್ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಹತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಮೊದಲ ಹತ್ತು ಸ್ಥಾನಗಳಲ್ಲಿ ಏಳನೇ ಸ್ಥಾನದಲ್ಲಿದೆ. ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಎಂಟನೇ ಸ್ಥಾನದಲ್ಲಿದೆ. ಸ್ಯಾಮ್‌ಸಂಗ್ ಟೆಲಿವಿಷನ್ಗೆ ಎಂಟನೇ ಒಂಬತ್ತನೇ ಸ್ಥಾನ, ವಿವೋ ಮೊಬೈಲ್ ಹತ್ತನೇ ಸ್ಥಾನದಲ್ಲಿದೆ. ಮೊದಲ ಹತ್ತು ಸ್ಥಾನಗಳಲ್ಲಿ ಐದು ಮೊಬೈಲ್ ಕಂಪನಿಗಳಿವೆ.
ಈ ಕುರಿತು ಮಾತನಾಡಿದ ಟಿಆರ್ಎ ಸಂಸ್ಥೆಯ ಸಿಇಒ ಎನ್.ಚಂದ್ರಮೌಳಿ, ಕೋವಿಡ್ ಸಂಕಷ್ಟ ಬ್ರಾಂಡ್ಗಳ ಸ್ಥಾನದಲ್ಲಿ ಏರುಪೇರಾಗಲು ಕಾರಣವಾಗಿದೆ. ಕೆಲವು ಬ್ರಾಂಡ್ಗಳ ಮೇಲೆ ಗ್ರಾಹಕರು ನಂಬಿಕೆ ಹಾಗೂ ಉಳಿಸಿಕೊಂಡಿದ್ದಾರೆ ಎಂದಿದ್ದಾರೆ.