ಮುಂಬೈ: ಕೊರೊನಾದಿಂದ ಉದ್ಯಮ ಕ್ಷೇತ್ರ ಚೇತರಿಸಿಕೊಳ್ಳುತ್ತಿದ್ದರೂ, ಟೆಕ್ ಇಂಡಸ್ಟ್ರಿಯ ಜಾಬ್ ಮಾರ್ಕೆಟ್ನಲ್ಲಿ ಕಂಪನಿಗಳ ಒಟ್ಟಾರೆ ನೇಮಕಾತಿ ಮಾಡಿಕೊಳ್ಳುವಲ್ಲಿ ಕುಸಿತ ಕಂಡಿದೆ ಎಂದು ವರದಿಯೊಂದು ತಿಳಿಸಿದೆ.
ಉದ್ಯೋಗದ ತಾಣವಾದ ಎಸ್‌ಸಿಕಿ ಮಾರ್ಕೆಟ್ ನೆಟ್‌ವರ್ಕ್‌ನಲ್ಲಿ ಮೇ ತಿಂಗಳಲ್ಲಿ ಒಟ್ಟಾರೆ ಹೊಸ ಉದ್ಯೋಗ ಹುದ್ದೆಗಳ ಸಂಖ್ಯೆಯಲ್ಲಿ ಶೇ.2ರಷ್ಟು ಕುಸಿತ ಕಂಡುಬಂದಿದೆ. ಇದರಲ್ಲಿ ಬ್ಯಾಂಕಿಂಗ್‌ನಂತಹ ವಲಯಗಳು ಶೇ.12 ರಷ್ಟು, ವಿಮಾ ಕ್ಷೇತ್ರದಲ್ಲಿ ಶೇ.5ರಷ್ಟು ಬೆಳವಣಿಗೆ ಸಾಧಿಸಿವೆ ಎಂದು ವರದಿಯಾಗಿದೆ.
ಈ ನಡುವೆ ಸಾಫ್ಟ್‌ವೇರ್ ಡೆವಲಪರ್, ಡೆವೊಪ್ಸ್, ಕ್ಲೌಡ್ ಮತ್ತು ಡಾಟಾ ಇಂಜಿನಿಯರ್ ಮುಂತಾದ ಉದ್ಯೋಗಗಳಿಗೆ ಬೇಡಿಕೆ ಹೆಚ್ಚಿದೆ. ಇದು ಮೇ ತಿಂಗಳಲ್ಲಿ ಶೇ.12ರಿಂದ 16ರಷ್ಟು ಬೆಳವಣಿಗೆ ಕಂಡಿದೆ ಎಂದು ತಿಳಿದುಬಂದಿದೆ.
ಇತರ ಕ್ಷೇತ್ರಗಳಾದ ಮಾರಾಟ, ಮಾರ್ಕೆಟಿಂಗ್, ಸೈಟ್ ಇಂಜಿನಿಯರಿಂಗ್, ಮಾನವ ಸಂಪನ್ಮೂಲ, ಹಣಕಾಸು ಮತ್ತು ಯೋಜನಾ ವ್ಯವಸ್ಥಾಪಕರಂತಹ ವಲಯವು ಏರಿಳಿತವಿಲ್ಲದೆ ಸಮಾನತೆ ಕಾಯ್ದುಕೊಂಡಿದೆ. ಅಲ್ಲದೆ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಅಂದರೆ 16 ವರ್ಷಕ್ಕಿಂತಲೂ ಹೆಚ್ಚಿನ ಅನುಭವವುಳ್ಳ ವ್ಯಕ್ತಿಗಳ ನೇಮಕಾತಿಯಲ್ಲಿ ಶೇ.2ರಷ್ಟು ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ.
ಆದರೆ ಇದೇ ವೇಳೆ ಆರಂಭಿಕ ನೇಮಕಾತಿಯಲ್ಲಿ ಅಂದರೆ 0ಯಿಂದ 3 ವರ್ಷ ಅನುಭವ ಹೊಂದಿರುವ ಅಭ್ಯರ್ಥಿಗಳ ನೇಮಕಾತಿಯಲ್ಲಿ ಶೇ.4ರಷ್ಟು ಇಳಿಕೆ ಕಂಡುಬಂದಿದೆ. ಇದಕ್ಕೆ ಹಲವು ವಿಚಾರಗಳು ಕಾರಣವಾಗಿಬಹುದು. ಆದರೂ ಟೆಕ್ ಕಂಪನಿಗಳು ಲಾಕ್ಡೌನ್ ಬಳಿಕ ನೇಮಕಾತಿ ವೇಗ ಹೆಚ್ಚಿಸಿವೆ ಎಂದು ವರದಿಯಾಗಿದೆ.