ETV Bharat / business

ಕಚ್ಚಾ ತೈಲದ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ: ಸುಮೀತ್ ಬಗಾಡಿಯಾ - ಸುಮೀತ್ ಬಗಾಡಿಯಾ

ಚಾಯ್ಸ್ ಬ್ರೋಕಿಂಗ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ, ಸರಕು ತಜ್ಞ ಸುಮೀತ್ ಬಗಾಡಿಯಾ, ಡಬ್ಲ್ಯುಟಿಐ ಕಚ್ಚಾ ತೈಲದ ಒಂದು ಬ್ಯಾರೆಲ್‌ಗೆ RS. 4,071.08ರಷ್ಟು ಇದ್ದು, ಬ್ರೆಂಟ್ ಕಚ್ಚಾ ತೈಲದ ಬೆಲೆ RS. 4,330.16ರ ತನಕ ಆಗಬಹುದು ಎಂದಿದ್ದಾರೆ.

ಕಚ್ಚಾ ತೈಲ
ಕಚ್ಚಾ ತೈಲ
author img

By

Published : Nov 27, 2020, 6:32 PM IST

ನವದೆಹಲಿ: ನವೆಂಬರ್​ ತಿಂಗಳಿನಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಏರಿಕೆಯಾಗಿದೆ. 2020ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ವಿಜೇತರಾದ ಬಳಿಕ ಮತ್ತು ಅನೇಕ ಕೊರೊನಾ ಲಸಿಕೆ ತಯಾರಿಸುವ ಕಂಪನಿಗಳು ವೈರಸ್​ ತಡೆಯುವಲ್ಲಿ ತಮ್ಮ ಲಸಿಕೆ ಪರಿಣಾಮಕಾರಿ ಎಂದು ಘೋಷಿಸಿದ ನಂತರ ಬೆಲೆ ಹೆಚ್ಚಾಗಿದೆ.

“ಡಬ್ಲ್ಯುಟಿಐ (ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್) ಕಚ್ಚಾ ತೈಲವು ಕಳೆದ ಏಳು ತಿಂಗಳಲ್ಲಿ ತೀವ್ರ ಚೇತರಿಕೆ ಕಂಡಿದೆ. ಕೋವಿಡ್​ ಬಂದ ಬಳಿಕ ದರ ಮತ್ತಷ್ಟು ಹೆಚ್ಚಾಗಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಾಂತ್ರಿಕ ವಿಶ್ಲೇಷಣೆಯಲ್ಲಿ ತಿಳಿದು ಬಂದಿದೆ” ಎಂದು ಚಾಯ್ಸ್ ಬ್ರೋಕಿಂಗ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ಹೇಳಿದ್ದಾರೆ.

ನಿರ್ದಿಷ್ಟ ಬೆಲೆಯ ಕುರಿತು ಮಾತನಾಡಿದ ಬಗಾಡಿಯಾ, ಡಬ್ಲ್ಯುಟಿಐ ಕಚ್ಚಾ ತೈಲವು ಮುಂದೆ ಬ್ಯಾರೆಲ್‌ಗೆ RS. 4,071.08ರಷ್ಟು ಆಗಬಹುದು. ಸದ್ಯದ ಮಟ್ಟಿಗೆ ಅಷ್ಟಾಗದಿದ್ದರೂ ಮುಂದೆ ಆಗುವ ಸಾಧ್ಯತೆ ಇದೆ. ಸದ್ಯ ಪ್ರತಿ ಬ್ಯಾರೆಲ್‌ಗೆ RS.2,442.66ರಷ್ಟು ಇದೆ ಎಂದು ಹೇಳಿದರು.

ಗುರುವಾರ ಡಬ್ಲ್ಯುಟಿಐ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 44.80 ಡಾಲರ್​ನಂತೆ ವಹಿವಾಟು ನಡೆಸುತ್ತಿದ್ದು, ಬ್ರೆಂಟ್ ಕಚ್ಚಾ ತೈಲವು ನ್ಯೂಯಾರ್ಕ್‌ನಲ್ಲಿ RS. 3,552.93($ 48) ರಷ್ಟು ಇತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.