ETV Bharat / business

ಮೇ 31ರ ತನಕ ಇವಿಸಿ ಮೂಲಕ ಮಾಸಿಕ ಜಿಎಸ್‌ಟಿ ಆದಾಯ ಪರಿಶೀಲಿಸಲು ಅವಕಾಶ

author img

By

Published : Apr 27, 2021, 9:10 PM IST

2021ರ ಏಪ್ರಿಲ್ 21ರಿಂದ 2021ರ ಮೇ 31ರವರೆಗಿನ ಯಾವುದೇ ನೋಂದಾಯಿತ ವ್ಯಕ್ತಿಗೆ ಫಾರ್ಮ್ಸ್​ ಜಿಎಸ್​​ಟಿಆರ್ -3ಬಿಯಲ್ಲಿ ರಿಟರ್ನ್ ಮತ್ತು ಎಲೆಕ್ಟ್ರಾನಿಕ್ ವೆರಿಫಿಕೇಷನ್ ಕೋಡ್ (ಇವಿಸಿ) ಮೂಲಕ ಪರಿಶೀಲಿಸಿದ ಫಾರ್ಮ್ ಜಿಎಸ್​​ಟಿಆರ್ -1ರಲ್ಲಿ ಹೊರಗಿನ ಸರಬರಾಜುಗಳ ವಿವರಗಳನ್ನು ನೀಡಲು ಅನುಮತಿಸಲಾಗುವುದು ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ತಿಳಿಸಿದೆ.

GST
GST

ನವದೆಹಲಿ: ಎಲೆಕ್ಟ್ರಾನಿಕ್ ವೆರಿಫಿಕೇಷನ್ ಕೋಡ್ ಮೂಲಕ ಮಾಸಿಕ ಜಿಎಸ್​​ಟಿ ರಿಟರ್ನ್ಸ್ ಅನ್ನು ಮೇ 31ರವರೆಗೆ ಸಲ್ಲಿಸಲು ಸರ್ಕಾರ ವ್ಯವಹಾರಗಳಿಗೆ ಅವಕಾಶ ನೀಡಿದೆ.

ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯು (ಸಿಬಿಐಸಿ) 2021ರ ಏಪ್ರಿಲ್ 21ರಿಂದ 2021ರ ಮೇ 31ರವರೆಗಿನ ಯಾವುದೇ ನೋಂದಾಯಿತ ವ್ಯಕ್ತಿಗೆ ಫಾರ್ಮ್ಸ್​ ಜಿಎಸ್​​ಟಿಆರ್ -3ಬಿಯಲ್ಲಿ ರಿಟರ್ನ್ ಮತ್ತು ಎಲೆಕ್ಟ್ರಾನಿಕ್ ವೆರಿಫಿಕೇಷನ್ ಕೋಡ್ (ಇವಿಸಿ) ಮೂಲಕ ಪರಿಶೀಲಿಸಿದ ಫಾರ್ಮ್ ಜಿಎಸ್​​ಟಿಆರ್ -1ರಲ್ಲಿ ಹೊರಗಿನ ಸರಬರಾಜುಗಳ ವಿವರಗಳನ್ನು ನೀಡಲು ಅನುಮತಿಸಲಾಗುವುದು ಎಂದು ಸೂಚನೆಯಲ್ಲಿ ತಿಳಿಸಿದೆ.

ಪ್ರಸ್ತುತ, ವ್ಯವಹಾರಗಳು ಮಾಸಿಕ ರಿಟರ್ನ್ ಸಲ್ಲಿಸುವಾಗ ಮತ್ತು ತೆರಿಗೆ ಪಾವತಿಸುವಾಗ ಜಿಎಸ್​ಟಿಆರ್ -3 ಬಿ ಫಾರ್ಮ್​ಗೆ ಡಿಜಿಟಲ್ ಸಹಿ ಮಾಡಬೇಕಾಗುತ್ತದೆ. ಲಾಕ್‌ಡೌನ್‌ನಿಂದಾಗಿ ಕಚೇರಿಗಳು ಮುಚ್ಚಿವೆ. ವ್ಯವಹಾರಗಳಿಗೆ ಡಿಜಿಟಲ್ ಸಹಿ ಮಾಡುವುದು ಸಾಧ್ಯವಾಗುವುದಿಲ್ಲ. ಅದು ರಿಟರ್ನ್ಸ್ ಸಲ್ಲಿಸುವಲ್ಲಿ ವಿಳಂಬಕ್ಕೆ ಕಾರಣವಾಗಲಿದೆ.

ಸಾಂಕ್ರಾಮಿಕ ರೋಗದ ಎರಡನೇ ಅಲೆಯ ವೇಳೆ ಜಿಎಸ್​ಟಿ ಅಧಿಕಾರಿಗಳು ಅಂತಿಮವಾಗಿ ಮೊದಲ ಕೋವಿಡ್​ ಪ್ರೇರಿತ ಪರಿಹಾರ ನೀಡಿದ್ದಾರೆ ಎಂದು ಎಎಂಆರ್​ಜಿ ಮತ್ತು ಅಸೋಸಿಯೇಟ್ಸ್ ಹಿರಿಯ ಪಾಲುದಾರ ರಜತ್ ಮೋಹನ್ ಹೇಳಿದ್ದಾರೆ.

ಕಾರ್ಪೊರೇಟ್ ತೆರಿಗೆದಾರರು ಮೇ 31ರವರೆಗೆ ಇವಿಸಿ ಮೂಲಕ ಮಾಸಿಕ ಕಂಪ್ಲೈನ್ಸ್​ ಸಲ್ಲಿಸಬಹುದು. ಲಾಕ್​​ಡೌನ್ ಸಮಯದಲ್ಲಿ ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರ ಸಂಗ್ರಹಿಸಲು ಕಚೇರಿಗಳಿಗೆ ಭೇಟಿ ನೀಡಲಾಗದ ಸಾವಿರಾರು ತೆರಿಗೆದಾರರಿಗೆ ಇದು ಪ್ರಯೋಜನವಾಗಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.