ETV Bharat / business

ಪ್ರೇಕ್ಷಕನ ಕಣ್ಣಲ್ಲಿ ಕೊರೊನಾ ನಿರ್ಭೀತಿಯ ಸಿನಿ ಕನಸು: '2,999 ರೂ.ಗೆ ಇಡೀ ಥೇಟರ್ ಕಾಯ್ದಿರಿಸಿ'- Inox ಅಧ್ಯಕ್ಷ

author img

By

Published : Nov 9, 2020, 5:12 PM IST

ಸದ್ಯಕ್ಕೆ ಜಾಗತಿಕ ಮಾರುಕಟ್ಟೆಗಳಲ್ಲಿ ಯಶಸ್ಸಿನ ಸೂತ್ರಗಳನ್ನು ಪಾಲಿಸುತ್ತಿದ್ದೇವೆ. ಖಾಸಗಿ ಸ್ಕ್ರೀನಿಂಗ್‌ನಂತಹ ಸೇವೆಗಳನ್ನು ಸಹ ಶುರುವಾಗಿವೆ. ಅಲ್ಲಿ ಗ್ರಾಹಕರು ಇಡೀ ಥಿಯೇಟರ್ ಅನ್ನು ಕೇವಲ 2,999 ರೂ.ಗೆ ಕಾಯ್ದಿರಿಸಬಹುದು ಎಂದು ಐನೊಕ್ಸ್ ಲೀಜರ್ ಲಿಮಿಟೆಡ್‌ನ ಸಿಇಒ ಅಲೋಕ್ ಟಂಡನ್ ಹೇಳಿದ್ದಾರೆ.

Cinema
ಸಿನಿಮಾ

ನವದೆಹಲಿ: ಅನ್ಲಾಕ್ 5.0 ಮಾರ್ಗಸೂಚಿಗಳ ಅಡಿ ಶೇ 50ರಷ್ಟು ಸಾಮರ್ಥ್ಯದೊಂದಿಗೆ ಭಾರತದಲ್ಲಿ ಸಿನೆಮಾ ಹಾಲ್‌ ತೆರೆಯಲು ಅನುಮತಿ ನೀಡಿದ್ದರೂ ಚಿತ್ರಮಂದಿರಗಳು ಪ್ರೇಕ್ಷಕರನ್ನು ಸೆಲೆಯಲು ತೀವ್ರ ಹೆಣಗಾಡುತ್ತಿವೆ.

ದೇಶದ 68 ನಗರಗಳಲ್ಲಿ 147 ಮಲ್ಟಿಪ್ಲೆಕ್ಸ್‌ ಮತ್ತು 626 ಪರದೆ ಹೊಂದಿರುವ ಭಾರತದ ಅತಿದೊಡ್ಡ ಮಲ್ಟಿಪ್ಲೆಕ್ಸ್ ಚೈನ್ ಆಪರೇಟರ್‌ ಐನೊಕ್ಸ್ ಲೀಜರ್ ಲಿಮಿಟೆಡ್‌ನ ಸಿಇಒ ಅಲೋಕ್ ಟಂಡನ್ ಅವರು ಈಟಿವಿ ಭಾರತ ಜೊತೆಗೆ ಮಾತನಾಡಿ, ಮಾಲೀಕತ್ವದ ಚಿತ್ರ ಮಂದಿರಗಳು ಬಹುತೇಕ ರಾಜ್ಯಗಳಲ್ಲಿ ಏಕ ಅಂಕಿಯ ಉದ್ಯೋಗ ಒದಗಿಸಲು ಮಾತ್ರವೇ ಸಾಕ್ಷಿಯಾಗುತ್ತಿವೆ. ಇದು ಕೋವಿಡ್​ ಬಳಿಕ ಬಂದೊದಗಿದ ಸಂಕಷ್ಟವಾಗಿದೆ ಎಂದರು.

ನಾವು ಇನ್ನೂ ಸಾಮಾನ್ಯ ಕಾರ್ಯಾಚರಣೆಯ ಮಾನದಂಡ ತಲುಪಿಲ್ಲ. ಹೊಸ ಕಂಟೆಂಟ್​ನ ಅನುಪಸ್ಥಿತಿಯಿಂದಾಗಿ ಹೆಚ್ಚಿನದನ್ನು ಪಡೆಯಲು ಆಗುತ್ತಿಲ್ಲ. ನ್ಯೂ ಕಂಟೆಂಟ್​​ ಸಿನೆಮಾ ಪ್ರದರ್ಶನ ಕ್ಷೇತ್ರದ ಪುನರುಜ್ಜೀವನಕ್ಕೆ ಪ್ರಮುಖವಾಗಿದೆ ಎಂದು ಹೇಳಿದರು.

ಹೊಸ ಚಲನಚಿತ್ರಗಳ ಕೊರತೆ ಪರಿಣಾಮ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಏಕ ಅಂಕಿಯ ಉದ್ಯೋಗಗಳೊಂದಿಗೆ ಹೆಚ್ಚಿನ ರಾಜ್ಯಗಳಲ್ಲಿ ಇದು ಕಂಡು ಬರುತ್ತದೆ. ಇದರ ಹೊರತಾಗಿರುವುದು ಪಶ್ಚಿಮ ಬಂಗಾಳದಲ್ಲಿ ಹೊಸ ಬಂಗಾಳಿ ಚಲನಚಿತ್ರಗಳು ಬಿಡುಗಡೆ ಆಗುತ್ತಿರುವುದರಿಂದ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಟಂಡನ್ ತಿಳಿಸಿದರು.

ಸಿನೆಮಾ ಉದ್ಯಮವು ಪ್ರಸ್ತುತ ಒಂದು ಅನಿಶ್ಚಿತ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ಒಂದು ಕಡೆ ಹೊಸ ಚಲನಚಿತ್ರದ ಕಂಟೆಂಟ್​ ಕೊರತೆ. ಮತ್ತೊಂದು ಕಡೆ ಮಾರ್ಗಸೂಚಿಗಳ ಸಡಿಲಗೊಳಿಸುವಿಕೆ. ರಾಜಸ್ಥಾನ, ಪಂಜಾಬ್​, ತಮಿಳುನಾಡು ಹಾಗೂ ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ಚಿತ್ರಮಂದಿರಗಳು ಪುನಃ ತೆರೆದರೂ ಹೊಸ ಚಲನಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಮನಸ್ಸು ಮಾಡುತ್ತಿಲ್ಲ ಎಂದರು.

ಸೀಟ್ ಹಂಚಿಕೆ ಶೇ 50ರಷ್ಟಕೆ ಸೀಮಿತವಾಗಿದೆ. ತಮಿಳುನಾಡು, ತೆಲಂಗಾಣ, ರಾಜಸ್ಥಾನ ಮತ್ತು ಪಂಜಾಬ್​ನಂತಹ ಪ್ರಮುಖ ಮಾರುಕಟ್ಟೆಗಳ ಬಗ್ಗೆ ಸಿನಿಮಾ ನಿರ್ಮಾಪಕರು ತಮ್ಮ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಮುಂಬರುವ ತಿಂಗಳಲ್ಲಿ ಟಂಡನ್ ವ್ಯವಹಾರ ಚುರುಕುಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿ, ಹಬ್ಬದ ದಿನಗಳು, ಹೊಸ ಶೀರ್ಷಿಕೆಗಳು ಲಭ್ಯವಾದರೇ ನಮ್ಮ ಆರೋಗ್ಯಕರ ಉದ್ದಮ ಸಾಧಿಸುವುದು ನಮಗೆ ಖಚಿತವಾಗಿದೆ. ಬಂಗಾಳಿ, ಪಂಜಾಬಿ, ತಮಿಳು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಹೊಸ ಶೀರ್ಷಿಕೆಗಳು ಹೊರ ಬರುತ್ತಿವೆ. ಇದೊಂದು ಆಶಾದಾಯಕ ಎಂದರು.

ನಾವು ತುಂಬಾ ಆಸಕ್ತಿದಾಯಕ ಪ್ರವೃತ್ತಿಗೆ ಸಾಕ್ಷಿಯಾಗಿದ್ದೇವೆ. ಇತರ ಭಾರತೀಯ ಭಾಷೆಗಳ ಚಲನಚಿತ್ರಗಳು 4 ರಿಂದ 5 ಇತರ ಭಾಷೆಗಳಲ್ಲಿ ಬಿಡುಗಡೆಯಾಗಲಿವೆ. ಇದು ನಮ್ಮ ಕಂಟೆಂಟ್​ ಆಯ್ಕೆಗಳಿಗೆ ಸೇರಿಸುತ್ತದೆ ಎಂದು ಹೇಳಿದರು.

ಸದ್ಯಕ್ಕೆ ಜಾಗತಿಕ ಮಾರುಕಟ್ಟೆಗಳಲ್ಲಿ ಯಶಸ್ಸಿನ ಸೂತ್ರಗಳನ್ನು ಪಾಲಿಸುತ್ತಿದ್ದೇವೆ. ಖಾಸಗಿ ಸ್ಕ್ರೀನಿಂಗ್‌ನಂತಹ ಸೇವೆಗಳನ್ನು ಸಹ ಶುರುವಾಗಿವೆ. ಅಲ್ಲಿ ಗ್ರಾಹಕರು ಇಡೀ ಥಿಯೇಟರ್ ಅನ್ನು ಕೇವಲ 2,999 ರೂ.ಗೆ ಕಾಯ್ದಿರಿಸಬಹುದು ಎಂದರು.

ಐನಾಕ್ಸ್ ಕಳೆದ ವಾರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 67.83 ಕೋಟಿ ರೂ.ಯಷ್ಟು ಒಟ್ಟು ನಿವ್ವಳ ನಷ್ಟ ವರದಿ ಮಾಡಿದೆ. ಈ ವರ್ಷದ ಹಿಂದಿನ ಅವಧಿಯಲ್ಲಿ 35.13 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಕಾರ್ಯಾಚರಣೆಯ ಆದಾಯವು ತ್ರೈಮಾಸಿಕದಲ್ಲಿ ಶೇ 99.93ರಷ್ಟು ಇಳಿದು, 36 ಲಕ್ಷ ರೂ.ಗೆ ತಲುಪಿದೆ. ಇದು ಒಂದು ವರ್ಷದ ಹಿಂದೆ 519.94 ಕೋಟಿ ರೂ.ಯಷ್ಟಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.