ETV Bharat / business

ಬಜೆಟ್​ನಲ್ಲಿ ಆರೋಗ್ಯ ವೆಚ್ಚ ಜಿಡಿಪಿಯ ಶೇ.3ಕ್ಕೆ ಹೆಚ್ಚಿಸುವಂತೆ ಮುಖ್ಯ ಆರ್ಥಿಕ ಸಲಹೆಗಾರ ಶಿಫಾರಸು - ಸುಬ್ರಮಣಿಯನ್ ಆರ್ಥಿಕ ಸಮೀಕ್ಷೆ ಸುದ್ದಿಗೋಷ್ಠಿ

ಭಾರತದ ಆರ್ಥಿಕತೆಯು 'ವಿ-ಆಕಾರದ' ಚೇತರಿಕೆಗೆ ಸಾಕ್ಷಿಯಾಗಿದೆ ಎಂಬುದನ್ನು ಸಮೀಕ್ಷೆ ಒಪ್ಪಿಕೊಂಡಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಆರ್ಥಿಕತೆಯ ‘ಪ್ರಭಾವ ಗಮನಿಸಿದರೆ ಭಾರತದ ನೈಜ ಜಿಡಿಪಿ ಈ ಹಣಕಾಸು ವರ್ಷದಲ್ಲಿ ಶೇ.7.7ರಷ್ಟು ಸಂಕುಚಿತಗೊಳ್ಳುವ ನಿರೀಕ್ಷೆಯಿದೆ..

K V Subramanian
K V Subramanian
author img

By

Published : Jan 29, 2021, 4:17 PM IST

ನವದೆಹಲಿ: 2021-22ರ ಆರ್ಥಿಕ ಸಮೀಕ್ಷೆಯನ್ನು ಎಲ್ಲಾ ಕೋವಿಡ್ ಯೋಧರಿಗೆ ಸಮರ್ಪಿಸುತ್ತಿದ್ದೇವೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ ಸುಬ್ರಮಣಿಯನ್ ಹೇಳಿದರು.

2021-22ರ ಆರ್ಥಿಕೆ ಸಮೀಕ್ಷೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತದ 'ವಿ' ಆಕಾರದ ಚೇತರಿಕೆಯು ಭಾರತದ ಗಬ್ಬಾ ಟೆಸ್ಟ್​ ಗೆಲುವನ್ನು ಹೋಲುತ್ತದೆ. ಸಾರ್ವಜನಿಕ ವೆಚ್ಚವನ್ನು ಜಿಡಿಪಿಯ ಶೇ.1ರಷ್ಟರಿಂದ ಶೇ. 2.5-3ಕ್ಕೆ ಹೆಚ್ಚಿಸಲು ಆರ್ಥಿಕ ಸಮೀಕ್ಷೆ ಶಿಫಾರಸು ಮಾಡಿದೆ ಎಂದು ಹೇಳಿದರು. ರಾಷ್ಟ್ರೀಯ ಆರೋಗ್ಯ ಖಾತೆಗಳ ಪ್ರಕಾರ, ಆರೋಗ್ಯ ರಕ್ಷಣೆಗೆ ರಾಜ್ಯಗಳಿಂದ ಶೇ 66ರಷ್ಟು ಖರ್ಚು ಮಾಡಲಾಗುತ್ತಿದೆ.

ಸಾರ್ವಜನಿಕ ಖರ್ಚನ್ನು ಶೇ 2.5-3ರಷ್ಟಕ್ಕೆ ಹೆಚ್ಚಿಸುವುದರಿಂದ ಒಒಪಿಯ ಪ್ರಸ್ತುತ ಮಟ್ಟ ಶೇ 60 ರಿಂದ ಶೇ 30ಕ್ಕೆ ಇಳಿಸಬಹುದು. ಆದ್ದರಿಂದ, ಶ್ರೀಮಂತ ರಾಜ್ಯಗಳು ವಿಶೇಷವಾಗಿ ಆರೋಗ್ಯ ವೆಚ್ಚವನ್ನು ಜಿಡಿಪಿಯ ಶೇ 2.5ರಿಂದ 3ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು.

ಆರ್ಥಿಕ ಸಮೀಕ್ಷೆ : 2021-22ರಲ್ಲಿ ಭಾರತದ ನೈಜ ಜಿಡಿಪಿ ಶೇ.11ಕ್ಕೆ ಬೆಳೆಯಬಹುದು ಮತ್ತು ನಾಮ ಮಾತ್ರ ಜಿಡಿಪಿ ಶೇ.15.4ರಷ್ಟು ಏರಿಕೆಯಾಗಬಹುದು ಎಂದು 2021-22ರ ಆರ್ಥಿಕ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.

ಭಾರತದ ಆರ್ಥಿಕತೆಯು 'ವಿ-ಆಕಾರದ' ಚೇತರಿಕೆಗೆ ಸಾಕ್ಷಿಯಾಗಿದೆ ಎಂಬುದನ್ನು ಸಮೀಕ್ಷೆ ಒಪ್ಪಿಕೊಂಡಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಆರ್ಥಿಕತೆಯ ‘ಪ್ರಭಾವ ಗಮನಿಸಿದರೆ ಭಾರತದ ನೈಜ ಜಿಡಿಪಿ ಈ ಹಣಕಾಸು ವರ್ಷದಲ್ಲಿ ಶೇ.7.7ರಷ್ಟು ಸಂಕುಚಿತಗೊಳ್ಳುವ ನಿರೀಕ್ಷೆಯಿದೆ ಎಂದಿದೆ.

ಇದನ್ನೂ ಓದಿ: ಆರ್ಥಿಕ ಸಮೀಕ್ಷೆ: ವಿತ್ತೀಯ ಬೆಳವಣಿಗೆ -7.7% ನಿರೀಕ್ಷೆ; 2022ರಲ್ಲಿ 11.5% ಅಂದಾಜು

ರಫ್ತು ಉತ್ತೇಜಕದ ಉಪಕ್ರಮಗಳು, ಪ್ರೊಡಕ್ಷನ್ ಲಿಂಕ್ಡ್ ಪ್ರೋತ್ಸಾಹಕ (ಪಿಎಲ್ಐ) ಯೋಜನೆ, ಕಸ್ಟಮ್ಸ್​ ವ್ಯಾಜ್ಯ ನಿವಾರಣೆ ಮತ್ತು ರಫ್ತು ಉತ್ಪನ್ನಗಳ ಮೇಲಿನ ತೆರಿಗೆ ಸುಧಾರಣೆ, ಸಾರಿಗೆ ಮೂಲಸೌಕರ್ಯ ಮತ್ತು ಡಿಜಿಟಲ್ ಸುಧಾರಣೆಗಳಿಂದಾಗಿ ಭಾರತ ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.