ETV Bharat / business

ಕರ್ನಾಟಕ, ಆಂಧ್ರ ಅವಲಂಬನೆ ತಗ್ಗಿಸಲು ಉತ್ತರದ 5 ರಾಜ್ಯಗಳಲ್ಲಿ ಈರುಳ್ಳಿ ಬಿತ್ತನೆ ಹೆಚ್ಚಳಕ್ಕೆ ಕೇಂದ್ರದ ಮನವಿ

author img

By

Published : Apr 30, 2021, 4:39 PM IST

ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಖಾರಿಫ್ ಋತುವಿನಲ್ಲಿ ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳಾಗಿವೆ. ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ, ಗುಜರಾತ್ ಮತ್ತು ಉತ್ತರ ಪ್ರದೇಶ ಸಾಂಪ್ರದಾಯಿಕವಲ್ಲದ ಈರುಳ್ಳಿ ಬೆಳೆಯುವ ರಾಜ್ಯಗಳು. ಅಸಾಂಪ್ರದಾಯಕ ರಾಜ್ಯಗಳಲ್ಲಿನ ಈರುಳ್ಳಿ ಉತ್ಪಾದನೆ ಹೆಚ್ಚಳವು ನೈಸರ್ಗಿಕ ವಿಪತ್ತುಗಳಿಂದಾಗಿ ಸಾಂಪ್ರದಾಯಿಕ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಲಭ್ಯತೆಯು ಪರಿಣಾಮ ಬೀರಿದಾಗ ಇದು ನೆರವಾಗುತ್ತದೆ ಎಂದು ಕೇಂದ್ರ ಹೇಳಿದೆ.

onion
onion

ನವದೆಹಲಿ: ರಾಜಸ್ಥಾನದ ಸೇರಿದಂತೆ ಸಾಂಪ್ರದಾಯಿಕವಲ್ಲದ ಈರುಳ್ಳಿ ಬೆಳೆಯುವ ಐದು ರಾಜ್ಯಗಳು ಮುಂಬರುವ ಖಾರಿಫ್ ಋತುವಿನಲ್ಲಿನ ಬೆಲೆ ಏರಿಕೆಯ ಪರಿಸ್ಥಿತಿ ತಪ್ಪಿಸಲು ಖಾರಿಫ್ ಸೀಷನ್​ನಲ್ಲಿ 9,900 ಹೆಕ್ಟೇರ್ ಪ್ರದೇಶ ಈರುಳ್ಳು ಬಿತ್ತನೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ.

ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಖಾರಿಫ್ ಋತುವಿನಲ್ಲಿ ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳಾಗಿವೆ. ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ, ಗುಜರಾತ್ ಮತ್ತು ಉತ್ತರ ಪ್ರದೇಶ ಸಾಂಪ್ರದಾಯಿಕವಲ್ಲದ ಈರುಳ್ಳಿ ಬೆಳೆಯುವ ರಾಜ್ಯಗಳು.

2021-22 ಬೆಳೆ ವರ್ಷದ (ಜುಲೈ-ಜೂನ್) ಮುಂಬರುವ ಖಾರಿಫ್ ಋತುವಿನ ಕಾರ್ಯತಂತ್ರ ರೂಪಿಸಿದ ಕೃಷಿ ಆಯುಕ್ತ ಎಸ್ ಕೆ ಮಲ್ಹೋತ್ರಾ ಅವರು, ರಾಜ್ಯ ಸರ್ಕಾರಗಳೊಂದಿಗೆ ನಡೆಸಿದ ಸಮಾವೇಶದಲ್ಲಿ ಸಾಂಪ್ರದಾಯಿಕವಲ್ಲದ ರಾಜ್ಯಗಳಲ್ಲಿ ಖಾರಿಫ್ ಈರುಳ್ಳಿ ಬಿತ್ತನೆ ಪ್ರದೇಶವನ್ನು ಹೆಚ್ಚಿಸುವ ಅಗತ್ಯವನ್ನು ಮನದಟ್ಟು ಮಾಡಿದರು.

ನೈಸರ್ಗಿಕ ವಿಪತ್ತುಗಳಿಂದಾಗಿ ಸಾಂಪ್ರದಾಯಿಕ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಲಭ್ಯತೆಯು ಪರಿಣಾಮ ಬೀರಿದಾಗ ಇದು ನೆರವಾಗುತ್ತದೆ ಎಂದು ಹೇಳಿದರು.

ಸಾಂಪ್ರದಾಯಿಕವಲ್ಲದ ಈರುಳ್ಳಿ ಬೆಳೆಯುವ ಐದು ರಾಜ್ಯಗಳನ್ನು ಈ ವರ್ಷದ ಖಾರಿಫ್ ಋತುವಿನಲ್ಲಿ ಈರುಳ್ಳಿ ವಿಸ್ತೀರ್ಣವನ್ನು 41,081 ಹೆಕ್ಟೇರ್‌ನಿಂದ 51,000 ಹೆಕ್ಟೇರ್‌ಗೆ ಹೆಚ್ಚಿಸುವಂತೆ ಕೇಳಿಕೊಂಡರು.

ರಾಜಸ್ಥಾನದಲ್ಲಿ ಖಾರಿಫ್ ಈರುಳ್ಳಿ ಪ್ರದೇಶವನ್ನು ಈ ವರ್ಷ 24,500 ಹೆಕ್ಟೇರ್​​​ಗೆ ಹೆಚ್ಚಿಸಬಹುದು, ಹಿಂದಿನ ವರ್ಷದ ಇದೇ ಋತುವಿನಲ್ಲಿ 22,295 ಹೆಕ್ಟೇರ್ ಆಗಿತ್ತು. ಹರಿಯಾಣದಲ್ಲಿ 7,250 ಹೆಕ್ಟೇರ್‌ನಿಂದ 10,000 ಹೆಕ್ಟೇರ್‌ಗೆ ಮತ್ತು ಗುಜರಾತ್‌ನಲ್ಲಿ 5,000 ಹೆಕ್ಟೇರ್‌ನಿಂದ 5,500 ಹೆಕ್ಟೇರ್‌ಗೆ ಹೆಚ್ಚಿಸಬಹುದು. ಮಧ್ಯಪ್ರದೇಶದಲ್ಲಿ ಖಾರಿಫ್ ಈರುಳ್ಳಿ ಪ್ರದೇಶ ಈ ವರ್ಷದ 4,729 ಹೆಕ್ಟೇರ್‌ನಿಂದ 6,500 ಹೆಕ್ಟೇರ್‌ಗೆ ಹೆಚ್ಚಿಸಬಹುದು. ಉತ್ತರಪ್ರದೇಶದಲ್ಲಿ 4,000 ಹೆಕ್ಟೇರ್‌ನಿಂದ 4,500 ಹೆಕ್ಟೇರ್‌ಗೆ ಏರಿಕೆ ಮಾಡುವಂತೆ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.