ETV Bharat / business

ವ್ಯಾಪಾರಿಗಳ ಬಡ್ಡಿ ಮನ್ನಾ, ಪರಿಹಾರ ಪ್ಯಾಕೇಜ್ ಕೋರಿ ಕೇಂದ್ರಕ್ಕೆ ಸಿಎಐಟಿ ಪತ್ರ

ದೇಶದ ಸಣ್ಣ ಉದ್ಯಮಗಳಿಗೆ ಉತ್ತಮವಾದ ಪ್ಯಾಕೇಜ್‌ನ ಅಗತ್ಯವಿದೆ. ಆರ್ಥಿಕತೆಯ ಇತರ ಕ್ಷೇತ್ರಗಳಿಗೆ ಘೋಷಿಸಲಾದ ಪ್ಯಾಕೇಜ್‌ಗಳಂತೆ ವ್ಯಾಪಾರಿಗಳಿಗೂ ನೀಡಬೇಕು. ಕೆಲವು ಸಾಲಗಳ ಮೇಲೆ ಇಎಂಐಗಳನ್ನು ಮೂರು ತಿಂಗಳವರೆಗೆ ಮುಂದೂಡಲಾಗಿದೆ ಇದು ಉತ್ತಮವಾದ ನಡೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.

Nirmala Sitharaman
ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌
author img

By

Published : Apr 3, 2020, 5:21 PM IST

ನವದೆಹಲಿ: ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು (ಸಿಎಐಟಿ) ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದಿದ್ದು, ಲಾಕ್‌ಡೌನ್ ಅವಧಿಯಲ್ಲಿ ಸಾಲದ ಬಡ್ಡಿ ಮನ್ನಾ ಸೇರಿದಂತೆ ವ್ಯಾಪಾರಿಗಳಿಗೆ ಪರಿಹಾರ ಪ್ಯಾಕೇಜ್ ನೀಡುವಂತೆ ಕೋರಿದೆ.

ದೇಶದ ಸಣ್ಣ ಉದ್ಯಮಗಳಿಗೆ ಉತ್ತಮವಾದ ಪ್ಯಾಕೇಜ್​​ ಅಗತ್ಯವಿದೆ. ಆರ್ಥಿಕತೆಯ ಇತರ ಕ್ಷೇತ್ರಗಳಿಗೆ ಘೋಷಿಸಲಾದ ಪ್ಯಾಕೇಜ್‌ಗಳಂತೆ ವ್ಯಾಪಾರಿಗಳಿಗೂ ನೀಡಬೇಕು. ಕೆಲವು ಸಾಲಗಳ ಮೇಲೆ ಇಎಂಐಗಳನ್ನು ಮೂರು ತಿಂಗಳವರೆಗೆ ಮುಂದೂಡಲಾಗಿದೆ ಇದು ಉತ್ತಮವಾದ ನಡೆ ಎಂದು ವ್ಯಾಪಾರಿಗಳ ಸಂಸ್ಥೆ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.

"ಸಿಸಿ (ನಗದು ಕ್ರೆಡಿಟ್) / ಒಡಿ (ಓವರ್‌ಡ್ರಾಫ್ಟ್ ಖಾತೆ) / ಟಿಎಲ್ (ಟರ್ಮ್ ಸಾಲ) ಅಥವಾ ಯಾವುದೇ ರೀತಿಯ ಸಾಲದ ಮೇಲಿನ ಬ್ಯಾಂಕ್ ಬಡ್ಡಿಯನ್ನು ಲಾಕ್‌ಡೌನ್ ಅವಧಿಯಲ್ಲಿ ಮನ್ನಾ ಮಾಡಬೇಕು. ಬಡ್ಡಿ ಮನ್ನಾ ಮಾಡುವುದರಿಂದ ವ್ಯಾಪಾರಿಗಳ ಜೀವನೋಪಾಯಕ್ಕೆ ಅನುಕೂಲವಾಗಲಿದೆ. ಪಾವತಿ ಮತ್ತು ವ್ಯವಹಾರಗಳು ಶೂನ್ಯ ಆದಾಯದ ಅವಧಿಯಲ್ಲಿ ಮುಂದುವರಿಯಲಿದೆ ಎಂದು ಪತ್ರದಲ್ಲಿ ಗಮನಸೆಳೆದಿದೆ.

ಬಡ್ಡಿ ವಾಪಸಾತಿ ಲಾಕ್​ಡೌನ್​ ನಂತರದ ತಿಂಗಳು ಮುಂದುವರಿಯದಂತೆ ಎಚ್ಚರ ವಹಿಸಬೇಕು. ಅದೇ ರೀತಿಯಾಗಿ ಬ್ಯಾಂಕ್​ಗಳು ಠೇವಣಿಗಳ ಮೇಲಿನ ಬಡ್ಡಿ ಪಾವತಿಗಳನ್ನು ನಷ್ಟಕ್ಕೆ ಸರಿಹೊಂದುವಂತೆ ನಿರ್ಬಂಧಿಸಬಹುದು ಎಂದು ಕೇಳಿಕೊಂಡಿದೆ.

ಈ ಅವಧಿಯಲ್ಲಿ ವಸತಿ ಮತ್ತು ವಾಣಿಜ್ಯ ಬಾಡಿಗೆಯನ್ನು ಶೇ 10-25ರ ನಡುವೆ ಇರಬೇಕು. ಇದು ಜಾಗದ ಮಾಲೀಕರಿಗೆ ಯಾವುದೇ ಆದಾಯ ಇಲ್ಲದ ಅಥವಾ ಕಡಿಮೆ ಸಂಬಳದ ವ್ಯಕ್ತಿ/ ವ್ಯವಹಾರಸ್ಥರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಇದಲ್ಲದೇ, ವ್ಯಾಪಾರಿಗಳ ವಿಭಾಗದಲ್ಲಿ ಕಾರ್ಮಿಕರ ವೇತನವನ್ನು ಸರಿದೂಗಿಸಲು ಸರ್ಕಾರದ ಅನುಮತಿಯನ್ನು ಕೋರಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.