ETV Bharat / business

ಜಿಎಸ್​ಟಿ ಹೊಡೆತಕ್ಕೆ ಚೂರಾಯ್ತು ಪಾರ್ಲೆ ಬಿಸ್ಕೆಟ್..! ಹತ್ತು ಸಾವಿರ ಉದ್ಯೋಗಿಗಳಿಗೆ ಗೇಟ್​ಪಾಸ್..? - ಬೇಡಿಕೆ ಇಳಿಕೆ

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಭಾರತದಲ್ಲಿ ಕಾರಿನಿಂದ ಬಟ್ಟೆವರೆಗೆ ಬೇಡಿಕೆ ತೀವ್ರವಾಗಿ ಕುಸಿತವಾಗಿದ್ದು ಇದು ಸದ್ಯ ಖ್ಯಾತ ಬಿಸ್ಕೆಟ್ ಕಂಪನಿಗೂ ತಟ್ಟಿದೆ.

ಪಾರ್ಲೆ ಬಿಸ್ಕೆಟ್
author img

By

Published : Aug 21, 2019, 3:02 PM IST

Updated : Aug 21, 2019, 5:07 PM IST

ಬೆಂಗಳೂರು: ಕೆಲ ದಶಕಗಳಿಂದ ಜನರ ಮನೆ ಮಾತಾಗಿದ್ದ ಪಾರ್ಲೆ ಬಿಸ್ಕೆಟ್​​ ಬೇಡಿಕೆ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದ್ದು, ಪರಿಣಾಮ ಸಾವಿರಾರು ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಭಾರತದಲ್ಲಿ ಕಾರಿನಿಂದ ಬಟ್ಟೆವರೆಗೆ ಬೇಡಿಕೆ ತೀವ್ರವಾಗಿ ಕುಸಿತವಾಗಿದ್ದು, ಇದು ಸದ್ಯ ಖ್ಯಾತ ಬಿಸ್ಕೆಟ್ ಕಂಪನಿಗೂ ತಟ್ಟಿದೆ.

ಪಾರ್ಲೆ ಬಿಸ್ಕೆಟ್ ಬೇಡಿಕೆ ಇಳಿಕೆಯ ಹಾದಿ ಹಿಡಿದಿದ್ದು, ತಯಾರಿಕೆಯೂ ಸಹಜವಾಗಿ ಕಡಿಮೆಯಾಗಿದೆ. ಇವೆಲ್ಲದರ ಪರಿಣಾಮ ಸುಮಾರು ಎಂಟು ಸಾವಿರದಿಂದ ಹತ್ತು ಸಾವಿರದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದ್ಯ ಪಾರ್ಲೆ ಕಂಪನಿಯ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸರ್ಕಾರ ತಕ್ಷಣವೇ ಮಧ್ಯಪ್ರವೇಶ ಮಾಡದಿದ್ದಲ್ಲಿ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವುದು ನಿಶ್ಚಿತ ಎಂದು ಪಾರ್ಲೆ ಕೆಟಗರಿ ಮುಖ್ಯಸ್ಥ ಮಯಾಂಕ್ ಶಾ ಹೇಳಿದ್ದಾರೆ.

ಜಿಎಸ್​ಟಿ ಹೊಡೆತಕ್ಕೆ ಚೂರಾಯ್ತು ಬಿಸ್ಕೆಟ್..!

2017ರಲ್ಲಿ ಮೋದಿ ಸರ್ಕಾರ ಜಾರಿ ಮಾಡಿದ ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ಬಳಿಕ ಪಾರ್ಲೆ - ಜಿ ಬಿಸ್ಕೆಟ್ ಬೇಡಿಕೆ ಗಣನೀಯವಾಗಿ ಕುಸಿತ ಕಂಡಿದೆ ಎಂದು ಮಯಾಂಕ್ ಶಾ ಕಾರಣ ನೀಡಿದ್ದಾರೆ.

ಜಿಎಸ್​ಟಿಯಲ್ಲಿ ಬಿಸ್ಕೆಟ್​​ಗಳಿಗೆ ಹೆಚ್ಚಿನ ತೆರಿಗೆ ವಿಧಿಸಿದ್ದು, ಪರಿಣಾಮ ಬೀರಿದೆ ಎನ್ನುವ ಶಾ, ಜಿಎಸ್​ಟಿ ಪರಿಣಾಮ ಪ್ಯಾಕೆಟ್​​ಗಳಲ್ಲಿರುವ ಬಿಸ್ಕೆಟ್​ ಸಂಖ್ಯೆ ಇಳಿಕೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದಿದ್ದಾರೆ.

ಪಾರ್ಲೆ ಕಂಪನಿ 1929ರಲ್ಲಿ ಆರಂಭವಾಗಿದ್ದು ಸದ್ಯ ಸುಮಾರು ಒಂದು ಲಕ್ಷ ಮಂದಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

ಜಿಎಸ್​ಟಿ ಗುದ್ದಿಗೆ ಬಿಸ್ಕೆಟ್ ಕಂಪನಿಗಳು ತತ್ತರ..!

ಸರಕು ಮತ್ತು ಸೇವಾ ತೆರಿಗೆ ಜಾರಿಗೊಂಡ ಬಳಿಕ ಬಿಸ್ಕೆಟ್ ಕಂಪನಿಗಳು ಕುಸಿತದ ಹಾದಿ ಹಿಡಿದಿವೆ. ಪಾರ್ಲೆಯಲ್ಲಿ ಉದ್ಯೋಗಕ್ಕೆ ಕತ್ತರಿ ಹಾಕುತ್ತಿದ್ದರೆ ಇತರ ಕಂಪೆನಿಗಳೂ ಬೇಡಿಕೆ ಕುಸಿತದಿಂದ ನಲುಗಿದ್ದಾರೆ.

ಪಾರ್ಲೆ ಬಿಸ್ಕೆಟ್​ನ ಪ್ರಬಲ ಸ್ಪರ್ಧಿಯಾಗಿರುವ ಬ್ರಿಟಾನಿಯಾ ಕಂಪನಿ ಪ್ರಧಾನ ನಿರ್ದೇಶಕ ಸಹ ಬೇಡಿಕೆ ಕುಸಿತದ ಬಗ್ಗೆ ಆತಂಕ ಹೊರಹಾಕಿದ್ದಾರೆ. ಐದು ರೂಪಾಯಿ ಬಿಸ್ಕೆಟ್ ಖರೀದಿಸುವ ಮುನ್ನ ಗ್ರಾಹಕ ಎರಡು ಬಾರಿ ಯೋಚಿಸುತ್ತಾನೆ ಬ್ರಿಟಾನಿಯಾ ಕಂಪನಿ ಪ್ರಧಾನ ನಿರ್ದೇಶಕ ವರುಣ್​ ಬೆರಿ ಹೇಳಿದ್ದಾರೆ. ಜೊತೆಗೆ ಆರ್ಥಿಕತೆಯನ್ನೂ ವರುಣ್ ಬೆರಿ ಉಲ್ಲೇಖ ಮಾಡಿದ್ದಾರೆ.

Intro:Body:

ಜಿಎಸ್​ಟಿ ಹೊಡೆತಕ್ಕೆ ಚೂರಾಯ್ತು ಪಾರ್ಲೆ ಬಿಸ್ಕೆಟ್..! ಹತ್ತು ಸಾವಿರ ಉದ್ಯೋಗಿಗಳಿಗೆ ಗೇಟ್​ಪಾಸ್..?

ಬೆಂಗಳೂರು: ಕೆಲ ದಶಕಗಳಿಂದ ಜನರ ಮನೆ ಮಾತಾಗಿದ್ದ ಪಾರ್ಲೆ ಬಿಸ್ಕೆಟ್​​ ಬೇಡಿಕೆ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದ್ದು ಪರಿಣಾಮ ಸಾವಿರಾರು ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಭಾರತದಲ್ಲಿ ಕಾರಿನಿಂದ ಬಟ್ಟೆವರೆಗೆ ಬೇಡಿಕೆ ತೀವ್ರವಾಗಿ ಕುಸಿತವಾಗಿದ್ದು ಇದು ಸದ್ಯ ಖ್ಯಾತ ಬಿಸ್ಕೆಟ್ ಕಂಪೆನಿಗೂ ತಟ್ಟಿದೆ.

ಪಾರ್ಲೆ ಬಿಸ್ಕೆಟ್ ಬೇಡಿಕೆ ಇಳಿಕೆಯ ಹಾದಿ ಹಿಡಿದಿದ್ದು, ತಯಾರಿಕೆಯೂ ಸಹಜವಾಗಿ ಕಡಿಮೆಯಾಗಿದೆ. ಇವೆಲ್ಲದರ ಪರಿಣಾಮ ಸುಮಾರು ಎಂಟು ಸಾವಿರದಿಂದ ಹತ್ತು ಸಾವಿರದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದ್ಯ ಪಾರ್ಲೆ ಕಂಪೆನಿಯ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸರ್ಕಾರ ತಕ್ಷಣವೇ ಮಧ್ಯಪ್ರವೇಶ ಮಾಡದಿದ್ದಲ್ಲಿ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವುದು ನಿಶ್ಚಿತ ಎಂದು ಪಾರ್ಲೆ ಕೆಟಗರಿ ಮುಖ್ಯಸ್ಥ ಮಯಾಂಕ್ ಶಾ ಹೇಳಿದ್ದಾರೆ.

ಜಿಎಸ್​ಟಿ ಹೊಡೆತಕ್ಕೆ ಚೂರಾಯ್ತು ಬಿಸ್ಕೆಟ್..!

2017ರಲ್ಲಿ ಮೋದಿ ಸರ್ಕಾರ ಜಾರಿ ಮಾಡಿದ ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ಬಳಿಕ ಪಾರ್ಲೆ-ಜಿ ಬಿಸ್ಕೆಟ್ ಬೇಡಿಕೆ ಗಣನೀಯವಾಗಿ ಕುಸಿತ ಕಂಡಿದೆ ಎಂದು ಮಯಾಂಕ್ ಶಾ ಕಾರಣ ನೀಡಿದ್ದಾರೆ.

ಜಿಎಸ್​ಟಿಯಲ್ಲಿ ಬಿಸ್ಕೆಟ್​​ಗಳಿಗೆ ಹೆಚ್ಚಿನ ತೆರಿಗೆ ವಿಧಿಸಿದ್ದು ಪರಿಣಾಮ ಬೀರಿದೆ ಎನ್ನುವ ಶಾ, ಜಿಎಸ್​ಟಿ ಪರಿಣಾಮ ಪ್ಯಾಕೆಟ್​​ಗಳಲ್ಲಿರುವ ಬಿಸ್ಕೆಟ್​ ಸಂಖ್ಯೆ ಇಳಿಕೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದಿದ್ದಾರೆ.

ಪಾರ್ಲೆ ಕಂಪೆನಿ 1929ರಲ್ಲಿ ಆರಂಭವಾಗಿದ್ದು ಸದ್ಯ ಸುಮಾರು ಒಂದು ಲಕ್ಷ ಮಂದಿ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

ಜಿಎಸ್​ಟಿ ಗುದ್ದಿಗೆ ಬಿಸ್ಕೆಟ್ ಕಂಪನಿಗಳು ತತ್ತರ..!

ಸರಕು ಮತ್ತು ಸೇವಾ ತೆರಿಗೆ ಜಾರಿಗೊಂಡ ಬಳಿಕ ಬಿಸ್ಕೆಟ್ ಕಂಪೆನಿಗಳು ಕುಸಿತದ ಹಾದಿ ಹಿಡಿದಿವೆ. ಪಾರ್ಲೆಯಲ್ಲಿ ಉದ್ಯೋಗಕ್ಕೆ ಕತ್ತರಿ ಹಾಕುತ್ತಿದ್ದರೆ ಇತರ ಕಂಪೆನಿಗಳೂ ಬೇಡಿಕೆ ಕುಸಿತದಿಂದ ನಲುಗಿದ್ದಾರೆ.

ಪಾರ್ಲೆ ಬಿಸ್ಕೆಟ್​ನ ಪ್ರಬಲ ಸ್ಪರ್ಧಿಯಾಗಿರುವ ಬ್ರಿಟಾನಿಯಾ ಕಂಪೆನಿ ಪ್ರಧಾನ ನಿರ್ದೇಶಕ ಸಹ ಬೇಡಿಕೆ ಕುಸಿತದ ಬಗ್ಗೆ ಆತಂಕ ಹೊರಹಾಕಿದ್ದಾರೆ. ಐದು ರೂಪಾಯಿ ಬಿಸ್ಕೆಟ್ ಖರೀದಿಸುವ ಮುನ್ನ ಗ್ರಾಹಕ ಎರಡು ಬಾರಿ ಯೋಚಿಸುತ್ತಾನೆ ಬ್ರಿಟಾನಿಯಾ ಕಂಪೆನಿ ಪ್ರಧಾನ ನಿರ್ದೇಶಕ ವರುಣ್​ ಬೆರಿ ಹೇಳಿದ್ದಾರೆ. ಜೊತೆಗೆ ಆರ್ಥಿಕತೆಯನ್ನೂ ಬೆರಿ ಉಲ್ಲೇಖ ಮಾಡಿದ್ದಾರೆ.

Conclusion:
Last Updated : Aug 21, 2019, 5:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.