ETV Bharat / business

ಈ ಒಂದು ದಿನ ಬ್ಯಾಂಕ್​ ಸೇವೆ ಬಂದ್​ ಸಾಧ್ಯತೆ.. ಬೇಗ ಹಣಕಾಸಿನ ಕೆಲಸ ಮುಗಿಸಿಕೊಳ್ಳಿ.. - ಸಿಂಡಿಕೇಟ್ ಬ್ಯಾಂಕ್

ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ಜ.8ರಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಬ್ಯಾಂಕ್ ನೌಕರರ ಒಕ್ಕೂಟ (ಬಿಇಎಫ್‌ಐ) ಸೇರಿ ಇತರೆ ಸಂಘಟನೆಗಳು ರಾಷ್ಟ್ರವ್ಯಾಪಿ ಬ್ಯಾಂಕ್​ ಮುಷ್ಕರಕ್ಕೆ ಕರೆ ನೀಡಿವೆ.

Bank strike
ಬ್ಯಾಂಕ್ ಮುಷ್ಕರ
author img

By

Published : Jan 4, 2020, 7:49 PM IST

ನವದೆಹಲಿ: ಪ್ರಮುಖ ಬ್ಯಾಂಕ್ ನೌಕರರ ಸಂಘಟನೆಗಳು ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಬ್ಯಾಂಕ್​ ಮುಷ್ಕರಕ್ಕೆ ಕರೆ ನೀಡಿವೆ.

ಜನವರಿ 8ರಂದು ಪ್ರತಿಭಟನೆ ನಡೆಸಲಿದ್ದು, ಬ್ಯಾಂಕ್ ಶಾಖೆಗಳು ಮತ್ತು ಎಟಿಎಂಗಳ ಸೇವಾ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಮುಷ್ಕರ ದಿನದಂದು ತನ್ನ ಶಾಖೆಗಳನ್ನು ಸುಗಮವಾಗಿ ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ಸಿಂಡಿಕೇಟ್ ಬ್ಯಾಂಕ್ ನೀಡಿದೆ.

2020ರ ಜನವರಿ 8ರಂದು ಮುಷ್ಕರಕ್ಕೆ ಸಂಬಂಧಿಸಿದ ನೋಟಿಸ್‌ನ ಬ್ಯಾಂಕ್​ ಸ್ವೀಕರಿಸಿದೆ. ಮುಷ್ಕರ ದಿನದಂದು ಬ್ಯಾಂಕ್​ನ ಶಾಖೆಗಳು/ಕಚೇರಿಗಳು ಸುಗಮವಾಗಿ ಕಾರ್ಯನಿರ್ವಹಿಸಲು ಬ್ಯಾಂಕ್ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದಿದೆ. ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮುಷ್ಕರವು ಸೇವಾ ಕಾರ್ಯಾಚರಣೆಗಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ.

ಮುಷ್ಕರದಲ್ಲಿ ಭಾಗವಹಿಸುವ ಯೂನಿಯನ್‌ಗಳಲ್ಲಿ ಬ್ಯಾಂಕ್ ನೌಕರರ ಸದಸ್ಯತ್ವ ಬಹಳ ಕಡಿಮೆ. ಆದ್ದರಿಂದ ಬ್ಯಾಂಕ್​ನ ಕಾರ್ಯಾಚರಣೆಯ ಮೇಲೆ ಅಷ್ಟೇನು ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ(ಎಐಬಿಇಎ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ(ಎಐಬಿಒಎ), ಬ್ಯಾಂಕ್ ನೌಕರರ ಒಕ್ಕೂಟ(ಬಿಇಎಫ್‌ಐ) ಸೇರಿದಂತೆ ಇತರೆ ಸಂಘಟನೆಗಳು ಈ ಬಂದ್‌ಗೆ ಕರೆ ನೀಡಿವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.