ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿ ಔಡಿ ಭಾರತದಲ್ಲಿ A4 ಸೆಡಾನ್ ಕಾರ್ ಪರಿಚಯಿಸಿದೆ. ಇದರ ಬೆಲೆ ರೂ 39.99 ಲಕ್ಷದಿಂದ (ಎಕ್ಸ್ ಶೋ ರೂಂ) ಶುರುವಾಗಲಿದೆ.
ಈ ಹಿಂದೆ ಇಂತಹ ಮಾದರಿಯ A4 ಪ್ರೀಮಿಯಂ ಮತ್ತು A4 ತಂತ್ರಜ್ಞಾನದೊಂದಿಗೆ ಔಡಿ ಕಾರು ಬಿಡುಗಡೆ ಮಾಡಿತ್ತು. ಅವುಗಳ ಬೆಲೆ ಕ್ರಮವಾಗಿ 43.69 ಲಕ್ಷ ಮತ್ತು 47.61 ಲಕ್ಷ ಇದೆ. ಎರಡು ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಬರುತ್ತಿರುವ ಹೊಸ ಕಾರು 190 ಎಚ್‌ಪಿ ಮತ್ತು 320 ಎನ್‌ಎಂ ಟಾರ್ಕ್ ಹೊಂದಿದೆ.
ಹೊಸ ಕಾರು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಔಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್, 'ಜನವರಿಯಲ್ಲಿ ಈ ಕಾರು ಬಿಡುಗಡೆಯಾದಾಗಿನಿಂದ A4 ಬಹಳ ಜನಪ್ರಿಯವಾಗಿದೆ. ತಮ್ಮ ಕಂಪನಿಯಿಂದ ಬರುವ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದು ಕೂಡಾ ಒಂದು' ಎಂದರು.