ETV Bharat / business

ಕೊರೊನಾ ವಿರುದ್ಧ ಹೋರಾಡಲು ದೇಣಿಗೆ ನೀಡುವಂತೆ ಸಾರ್ವಜನಿಕರಿಗೆ ಸಿಎಂ ಮನವಿ

author img

By

Published : May 18, 2021, 10:32 PM IST

ಸಾಂಕ್ರಾಮಿಕ ರೋಗ ನಿಭಾಯಿಸುವಲ್ಲಿ ಸರ್ಕಾರಗಳ ಪ್ರಯತ್ನಗಳನ್ನು ಬೆಂಬಲಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿ ಅಥವಾ ಅಸ್ಸೋಂ ಆರೋಗ್ಯ ನಿಧಿ ಖಾತೆಗೆ ಉದಾರವಾಗಿ ಕೊಡುಗೆ ನೀಡುವಂತೆ ಶರ್ಮಾ ಅವರು ತಮ್ಮ ಸಾಮಾಜಿಕ ಜಲತಾಣ ಫೇಸ್‌ಬುಕ್ ಮತ್ತು ಟ್ವಿಟರ್‌ಗಳ ಮೂಲಕ ಮನವಿ ಮಾಡಿದ್ದಾರೆ.

fund
fund

ಗುವಾಹಟಿ: ಕೋವಿಡ್​- 19 ಎರಡನೇ ಅಲೆಯ ಪರಿಣಾಮವು ಈಶಾನ್ಯ ರಾಜ್ಯದಲ್ಲಿ ತೀವ್ರವಾಗಿದ್ದು, ಇದನ್ನು ನಿಯಂತ್ರಿಸಲು ವೈದ್ಯಕೀಯ ಮೂಲಸೌಕರ್ಯಗಳನ್ನು ಬಲಪಡಿಸಬೇಕಾಗಿದೆ ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಸರ್ಕಾರಗಳ ಪ್ರಯತ್ನಗಳನ್ನು ಬೆಂಬಲಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿ ಅಥವಾ ಅಸ್ಸೋಂ ಆರೋಗ್ಯ ನಿಧಿ ಖಾತೆಗೆ ಉದಾರವಾಗಿ ಕೊಡುಗೆ ನೀಡುವಂತೆ ಶರ್ಮಾ ಅವರು ತಮ್ಮ ಸಾಮಾಜಿಕ ಜಲತಾಣ ಫೇಸ್‌ಬುಕ್ ಮತ್ತು ಟ್ವಿಟರ್‌ಗಳ ಮೂಲಕ ಮನವಿ ಮಾಡಿದ್ದಾರೆ.

ಕೋವಿಡ್​-19 ರ ಎರಡನೇ ಅಲೆಯ ಪರಿಣಾಮವು ಅಸ್ಸೋಂನಲ್ಲಿ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಇನ್ನಷ್ಟು ಬಲಪಡಿಸುವ ಅವಶ್ಯಕತೆಯಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಂಕ್ರಾಮಿಕ ರೋಗವು ಅತ್ಯಂತ ದೊಡ್ಡ ಆರೋಗ್ಯ ಸವಾಲಾಗಿದೆ. ಇದು ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುವುದರಿಂದ ಮಾನವೀಯತೆಗೆ ಹೇಳಲಾಗದ ಸಂಕಟ ಉಂಟುಮಾಡಿದೆ ಎಂದರು.

ಈ ಅಭೂತಪೂರ್ವ ಸವಾಲನ್ನು ಎದುರಿಸಲು ಅಸ್ಸೋಂ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ನಮ್ಮ ವೈದ್ಯಕೀಯ ಮೂಲಸೌಕರ್ಯಗಳನ್ನು ಸುಧಾರಿಸಲು ನಾವು ಕೆಲಸ ಮಾಡಿದ್ದೇವೆ. ಹೆಚ್ಚಿನ ಐಸಿಯು ಹಾಸಿಗೆಗಳು ಮತ್ತು ಕೋವಿಡ್​ -19 ಆರೈಕೆ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಂಡಿದ್ದೇವೆ. ನಮ್ಮ ಆಮ್ಲಜನಕ ಉತ್ಪಾದನೆ ಮತ್ತು ಸಂಗ್ರಹಣೆಯನ್ನು ಸಹ ನಾವು ಹೆಚ್ಚಿಸಿದ್ದೇವೆ ಎಂದು ಹೇಳಿದರು.

ನಿಮ್ಮ ದೇಣಿಗೆಗಳನ್ನು ಕೋವಿಡ್​-19 ತಡೆಗಟ್ಟುವಿಕೆಗಾಗಿ ಮಾತ್ರ ಬಳಸಲಾಗುವುದು. ದಾನಿಗಳ ಪಟ್ಟಿಯನ್ನು ಸರ್ಕಾರವು ಕಾಲಕಾಲಕ್ಕೆ ಬಿಡುಗಡೆ ಮಾಡುತ್ತದೆ. ಎಲ್ಲ ದೇಣಿಗೆಗಳನ್ನು ಆದಾಯ ತೆರಿಗೆಯಿಂದ ಮುಕ್ತಗೊಳಿಸಲಾಗುತ್ತದೆ ಎಂದಿದ್ದಾರೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ ಮೊತ್ತವನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಅಸ್ಸೋಂ ಆರೋಗ್ಯ ನಿಧಿ ಖಾತೆಯಲ್ಲಿನ 53,534 ವ್ಯಕ್ತಿಗಳಿಂದ 116.1 ಕೋಟಿ ರೂ. ಸ್ವೀಕರಿಸಲಾಗಿದೆ ಎಂದು ಶರ್ಮಾ ಅವರು ಸೆಪ್ಟೆಂಬರ್‌ನಲ್ಲಿ ರಾಜ್ಯ ವಿಧಾನಸಭೆಗೆ ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.