ETV Bharat / business

ವೋಟಿಂಗ್​ ಹೊಸ್ತಿಲಲ್ಲಿ ಮೋದಿಗೆ ಅಗ್ನಿ ಪರೀಕ್ಷೆ... ಆರ್ಥಿಕ ಬೆಳವಣಿಗೆ ದರ ಕಡಿತಗೊಳಿಸಿದ 'ಎಡಿಬಿ' - ತೆರಿಗೆ

ಎಡಿಬಿ ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, 2017ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ 7.2ರಷ್ಟಿತ್ತು. 2018ರಲ್ಲಿ ಅದು ಶೇ 7ಕ್ಕೆ ಇಳಿಮುಖವಾಗಿದೆ. 2018-19ರ ಸಾಲಿನಲ್ಲಿ ಶೇ 7.6 ಬೆಳವಣಿಗೆ ದರ ನಿರೀಕ್ಷಿಸಿತ್ತು. ಈಗ ಅದನ್ನು ಶೇ 7.2ಕ್ಕೆ ಕಡಿತಗೊಳಿಸಿದೆ.

ಸಂಗ್ರಹ ಚಿತ್ರ
author img

By

Published : Apr 4, 2019, 1:40 PM IST

ನವದೆಹಲಿ: ಏಷ್ಯನ್​ ಅಭಿವೃದ್ಧಿ ಬ್ಯಾಂಕ್ (ಎಡಿಬಿ), ಭಾರತದ ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವೃದ್ಧಿಯು ಶೇ 7.2ರಲ್ಲಿ ಸಾಗಲಿದೆ ಎಂದು ಅಂದಾಜಿಸಿದೆ.

ಕಳೆದ ಸಾಲಿನಲ್ಲಿ ವಿಶ್ವದ ನಿಧಾನಗತಿಯ ಆರ್ಥಿಕತೆ, ಜಾಗತಿಕ ತೈಲ ದರ ಏರಿಕೆ ಮತ್ತು ಕಡಿಮೆ ಸರ್ಕಾರಿ ವೆಚ್ಚ, ದುರ್ಬಲ ಕೃಷಿ ಇಳುವರಿ ಮತ್ತು ಬಳಕೆಯ ಏರಿಕೆಯಿಂದ ಆರ್ಥಿಕ ಪ್ರಗತಿ ಇಳಿಮುಖವಾಗಿತ್ತು ಎಂದು ಎಡಿಬಿ ತಿಳಿಸಿದೆ.

ವ್ಯಾಪಾರ ಮತ್ತು ಹೂಡಿಕೆ ವಲಯದಲ್ಲಿ ಸುಧಾರಣಾ ನೀತಿಗಳು ಜಾರಿಗೆ ಬಂದರೆ ಮುಂದಿನ ಎರಡು ವರ್ಷಗಳಲ್ಲಿ ಬೆಳವಣಿಗೆಯ ಪ್ರವೃತ್ತಿ ಕುಸಿತದಿಂದ ಚೇತರಿಸಿಕೊಳ್ಳಲಿದೆ ಎಂದು ಸಲಹೆ ನೀಡಿದೆ.

ಜಾಗತಿಕ ವ್ಯಾಪಾರದಲ್ಲಿನ ಉದ್ವಿಗ್ನತೆಯು ದೇಶಿ ಆರ್ಥಿಕತೆಯಲ್ಲಿ ಅನಿಶ್ಚಿತತೆ ಸೃಷ್ಟಿಸಿ ಹಾಗೂ ಕೈಗಾರಿಕೆಯನ್ನು ದುರ್ಬಲಗೊಳಿಸುತ್ತಿದೆ. ನಿಧಾನಗತಿಯ ಬೆಳವಣಿಗೆಯಿಂದ ಭವಿಷ್ಯದ ಅಪಾಯಗಳನ್ನು ಎದುರಿಸಲು ಭಾರತ ಸನ್ನದ್ಧವಾಗಬೇಕಿದೆ ಎಂದು ಎಚ್ಚರಿಸಿದೆ.

ದೇಶಿ ಮಾರುಕಟ್ಟೆಯಿಂದ ಸಹ ಹಣಕಾಸು ಸಚಿವಾಲಯ ನಿರೀಕ್ಷಿಸಿದ್ದ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮೊತ್ತ ಹರಿದು ಬರುತ್ತಿಲ್ಲ. ಇದು ಬ್ಯಾಂಕ್​ ಹಾಗೂ ಸಾಂಸ್ಥಿಕ ಸಂಸ್ಥೆಗಳ ಉಳಿಕೆ ಮೇಲೆ ಪರಿಣಾಮ ಬೀರಲಿದೆ. ಇಷ್ಟೆಲ್ಲ ಏರಿಳಿತಗಳ ನಡುವೆಯೂ ಭಾರತ ವಿಶ್ವದ ಅತ್ಯಂತ ವೇಗದ ಆರ್ಥಿಕ ರಾಷ್ಟ್ರಗಳ ಸಾಲಿನಲ್ಲಿ ಮುಂದುವರಿಯಲಿದೆ ಎಂದು ಎಡಿಬಿ ಹೇಳಿದೆ.

ಪ್ರಬಲವಾದ ಗೃಹ ಖರ್ಚು ಹಾಗೂ ಕಾರ್ಪೊರೇಟ್​ ಸೌಕರ್ಯಗಳ ಕೊಡುಗೆಯಿಂದ ಈ ವರ್ಷ ಭಾರತ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದು ಎಡಿಬಿ ಮುಖ್ಯ ಅರ್ಥಶಾಸ್ತ್ರಜ್ಞ ಯಸುಯುಕಿ ಸಾವಾಡಾ ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ರಾಷ್ಟ್ರಗಳೊಂದಿಗೆ ಉತ್ತಮ ಸ್ನೇಹ- ಸಂಬಂಧ ಮೂಲಕ ಆರ್ಥಿಕ ಲಾಭಗಳನ್ನು ಧಕ್ಕಿಸಿಕೊಳ್ಳುವಲ್ಲಿ ಭಾರತ ಮುಂದಿದೆ. ಯುವ ಪೀಳಿಗೆಯ ಉದ್ಯೋಗ ವಾತಾವರಣ ವಿಸ್ತರಿಸಿಕೊಳ್ಳುತ್ತಿದೆ. ವ್ಯಾಪಾರದ ನೀತಿಗಳು ಸುಧಾರಣೆ ಕಾಣುತ್ತಿವೆ. ನವೀಕೃತ ವಿಧಾನಗಳ ಮುಖೇನ ರಫ್ತು ಪ್ರಮಾಣದ ವಿಸ್ತರಣೆಯತ್ತ ಗಮನ ಹರಿಸಿದರೆ ಈ ಎಲ್ಲ ವಲಯಗಳಿಗೆ ಬೆಂಬಲ ಸಿಗಲಿದೆ ಎಂದು ಸವಡಾ ಹೇಳಿದರು.

Intro:Body:

ವೋಟಿಂಗ್​ ಹೊಸ್ತಿಲಲ್ಲಿ ಮೋದಿಗೆ ಅಗ್ನಿ ಪರೀಕ್ಷೆ... ಆರ್ಥಿಕ ಬೆಳವಣಿಗೆ ದರ ಕಡಿತಗೊಳಿಸಿದ 'ಎಡಿಬಿ'

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.