ನವದೆಹಲಿ: ಯುದ್ಧ ಸಲಕರಣೆಗಳ ಕೊರತೆ ನೀಗಿಸಲು ತುರ್ತು ಯುದ್ಧೋಪಕರಣಗಳ ಖರೀದಿಗಾಗಿ ಸಶಸ್ತ್ರ ಪಡೆಗಳಿಗೆ ಕೆಂದ್ರ ಸರ್ಕಾರ ಅನುಮತಿ ನೀಡಿದ ಬಳಿಕ, 50 ಕಿ.ಮೀ ವ್ಯಾಪ್ತಿಯಲ್ಲಿ ಶತ್ರು ಪಡೆಗಳನ್ನು ನಿಖರವಾಗಿ ಗುರಿಯಿಟ್ಟು ಹೊಡೆಯಬಲ್ಲ ಎಕ್ಸಾಲಿಬರ್ ಫಿರಂಗಿ ಮದ್ದುಗುಂಡು ಖರೀದಿಗೆ ಯೋಜಿಸುತ್ತಿದೆ.
ತುರ್ತು ಆರ್ಥಿಕ ಅಧಿಕಾರಗಳ ಅಡಿಯಲ್ಲಿ ವಿದೇಶಿ ವಲಯದ ಮೇಲೆ ಮೇಲಾಧಾರವಾಗಿ ಹಾನಿ ಆಗದಂತೆ ಜನಸಂಖ್ಯೆಯ ಪ್ರದೇಶಗಳಿಗೆ ಹತ್ತಿರವಿರುವ ಶತ್ರುವಿನ ಅಡಗು ತಾಣಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುವ ಎಕ್ಸಾಲಿಬರ್ ಮದ್ದುಗುಂಡುಗಳ ಸೇರ್ಪಡೆಗೆ ಕಳೆದ ವರ್ಷ ಸೇನೆಗೆ ಅವಕಾಶ ನೀಡಲಾಯಿತು.
ಈಗ ಮತ್ತೆ ಆರ್ಥಿಕ ಖರೀದಿಯ ಅಧಿಕಾರ ಸಶಸ್ತ್ರ ಪಡೆಗಳಿಗೆ ನೀಡಲಾಗಿದೆ. ಅಲ್ಟ್ರಾ ಲೈಟ್ ಹೊವಿಟ್ಜರ್‌ಗಳು ಬಳಸುವ ಎಕ್ಸಾಲಿಬರ್ ಮದ್ದುಗುಂಡುಗಳಿಗೆ ಮರು ಬೇಡಿಕೆ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಇವುಗಳನ್ನು ಎತ್ತರದ ಪರ್ವತಗಳಲ್ಲಿ ಸುಲಭವಾಗಿ ನಿಯೋಜಿಸಬಹುದು ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಪೂರ್ವ ಲಡಾಖ್ ಸೆಕ್ಟರ್‌ನ ಉದ್ದಕ್ಕೂ ಚೀನಿಯರು ತಮ್ಮ ಫಿರಂಗಿಗಳನ್ನು ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ) ಬಳಿ ನಿಯೋಜಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಎಕ್ಸಾಲಿಬರ್ ಫಿರಂಗಿ ಖರೀದಿ ವಿಷಯ ಚರ್ಚೆಗೆ ಬಂದಿದೆ. ಅಗತ್ಯ ಶಸ್ತ್ರಾಸ್ತ್ರ ಪಡೆಯಲು ಪ್ರತಿ ಯೋಜನೆಗೆ 500 ಕೋಟಿ ರೂ.ಗಳವರೆಗೆ ಆರ್ಥಿಕ ಅಧಿಕಾರವನ್ನು ಸೇನಾ ಪಡೆಗಳಿಗೆ ನೀಡಲಾಗಿದೆ.