ETV Bharat / business

ಪರಾರಿಯಾದ ಉದ್ಯಮಿ ಚೋಕ್ಸಿ ಅಪಹರಣ: ಆಂಟಿಗುವಾ, ಬಾರ್ಬುಡಾ ಪೊಲೀಸರಿಂದ ತನಿಖೆ - ಮೆಹುಲ್ ಚೋಕ್ಸಿ ಲೆಟೆಸ್ಟ್​ ಸುದ್ದಿ

ಮೆಹುಲ್​ ಚೋಕ್ಸಿ (Mehul Choksi) ತನ್ನನ್ನು ಅಪಹರಿಸಲಾಗಿದೆ ಎಂದು ತಮ್ಮ ವಕೀಲರ ಮೂಲಕ ರಾಯಲ್ ಪೊಲೀಸ್ ಫೋರ್ಸ್ ಆಫ್ ಆಂಟಿಗುವಾ ಮತ್ತು ಬಾರ್ಬುಡಾಗೆ ದೂರು ನೀಡಿದ್ದಾರೆ. ಆಂಟಿಗುವಾದಿಂದ ಅಪಹರಿಸಿ ಡೊಮಿನಿಕಾಗೆ ಕರೆದೊಯ್ಯಲಾಗಿದೆ ಎಂದು ಔಪಚಾರಿಕ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಇದನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡು ಅವರ ಅಪಹರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಪ್ರಧಾನಿ ಬ್ರೌನ್ ಹೇಳಿದ್ದಾರೆ.

Mehul Choksi
Mehul Choksi
author img

By

Published : Jun 7, 2021, 10:11 AM IST

ನವದೆಹಲಿ: ಬಹುಕೋಟಿ ವಂಚನೆ ಪ್ರಕರಣದ ಆರೋಪಿ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು ಡೊಮಿನಿಕಾಗೆ ಅಪಹರಿಸಿರುವ ಬಗ್ಗೆ ಆಂಟಿಗುವಾ ಮತ್ತು ಬಾರ್ಬುಡಾದ ರಾಯಲ್ ಪೊಲೀಸರ ತಂಡ ತನಿಖೆ ಆರಂಭಿಸಿದೆ ಎಂದು ಪ್ರಧಾನಿ ಗ್ಯಾಸ್ಟನ್ ಬ್ರೌನ್ ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಅಪಹರಣದಲ್ಲಿ ಭಾಗಿಯಾಗಿರುವ ಜನರ ಹೆಸರನ್ನು ಚೋಕ್ಸಿಯ ವಕೀಲರು ಪೊಲೀಸ್ ಆಯುಕ್ತರಿಗೆ ದೂರಿನಲ್ಲಿ ನೀಡಿದ್ದಾರೆ ಎಂದು ಬ್ರೌನ್ ಹೇಳಿದ್ದಾರೆ ಎಂದು ಆಂಟಿಗುವಾ ನ್ಯೂಸ್ ರೂಮ್ ವರದಿ ಮಾಡಿದೆ.

ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಹೇಳಿಕೆಗಳು ನಿಜವಾಗಿದ್ದರೆ, ಅದು ಗಂಭೀರ ವಿಷಯವಾಗಿದೆ. ಪೊಲೀಸರು ದೂರನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಎಂದು ಬ್ರೌನ್ ಹೇಳಿದ್ದಾರೆ.

ಇದನ್ನೂ ಓದಿ: ಮೇ ತಿಂಗಳಲ್ಲಿ 65% ಏರಿಕೆ ಕಂಡ ಜಿಎಸ್‌ಟಿ ಸಂಗ್ರಹ : 1.02 ಲಕ್ಷ ಕೋಟಿ ರೂ. ಆದಾಯ

ಚೋಕ್ಸಿ ತನ್ನನ್ನು ಅಪಹರಿಸಲಾಗಿದೆ ಎಂದು ರಾಯಲ್ ಪೋಲಿಸ್ ಫೋರ್ಸ್ ಆಫ್ ಆಂಟಿಗುವಾ ಮತ್ತು ಬಾರ್ಬುಡಾಗೆ ದೂರು ನೀಡಿದ್ದಾರೆ. ಆಂಟಿಗುವಾದಿಂದ ಅಪಹರಿಸಿ ಡೊಮಿನಿಕಾಗೆ ಕರೆದೊಯ್ಯಲಾಗಿದೆ ಎಂದು ಅವರು ತಮ್ಮ ವಕೀಲರ ಮೂಲಕ ಔಪಚಾರಿಕ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಇದನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡು ಅವರ ಅಪಹರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.