ಅಮರಾವತಿ: ಆಂಧ್ರಪ್ರದೇಶ ಸರ್ಕಾರವು 2021-22ರ ಆರ್ಥಿಕ ವರ್ಷದ ವಾರ್ಷಿಕ ಬಜೆಟ್ ಗಾತ್ರ 2.29 ಲಕ್ಷ ಕೋಟಿ ರೂ.ಯಷ್ಟಾಗಿದೆ.
1.77 ಲಕ್ಷ ಕೋಟಿ ರೂ. ಅಂದಾಜು ಆದಾಯದೊಂದಿಗೆ ಮಂಡನೆ ಆಗಿದ್ದು, ಇದು 5,000 ಕೋಟಿ ರೂ. ಆದಾಯ ಕೊರತೆ ಮತ್ತು 37,029 ಕೋಟಿ ರೂ. ಹಣಕಾಸಿನ ಕೊರತೆ ಒಳಗೊಂಡಿದೆ.
ಏಕದಿನ ಅಧಿವೇಶನದಲ್ಲಿ ಪರಿಷತ್ ಮತ್ತು ವಿಧಾನಸಭೆಯ ಜಂಟಿ ಸಭೆಯಲ್ಲಿ ರಾಜ್ಯಪಾಲ ಬಿಸ್ವಭೂಸನ್ ಹರಿಚಂದನ್ ಅವರ ಸಾಂಪ್ರದಾಯಕ ಭಾಷಣದ ನಂತರ ವಿತ್ತ ಸಚಿವ ಬುಗ್ಗನಾ ರಾಜೇಂದ್ರನಾಥ್ ಅವರು ರಾಜ್ಯ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದರು.
ಇದನ್ನೂ ಓದಿ: ಉಚಿತ ಸೇವೆ, ವಾರಂಟಿ ವಾಯ್ದೆ ಅವಧಿ ವಿಸ್ತರಿಸಿದ ಸುಜುಕಿ ಇಂಡಿಯಾ
ಹಿಂದಿನ ವರ್ಷ 3,55,874 ಕೋಟಿ ರೂ.ಗಳಿಂದ 2021-22ರಲ್ಲಿ ರಾಜ್ಯದ ಸಾರ್ವಜನಿಕ ಸಾಲ 3,87,125 ಕೋಟಿ ರೂ.ಗೆ ಏರಿಕೆಯಾಗಲಿದೆ. ಏಕೆಂದರೆ ಸರ್ಕಾರವು ಹೊಸದಾಗಿ 50,525 ಕೋಟಿ ರೂ. ಹೊಸ ಸಾಲ ಎತ್ತಿದೆ. ಸಾಲ ಸೇವೆಗಾಗಿ ರಾಜ್ಯವು ಈ ವರ್ಷ 23,205.88 ಕೋಟಿ ರೂ. ವಿನಿಯೋಗಿಸಲಿದೆ.
ಈ ವರ್ಷ 22 ಫ್ರೀಬಿ ಯೋಜನೆಗಳಿಗೆ ಸರ್ಕಾರ 48,083.92 ಕೋಟಿ ರೂ. ಮೀಸಲಿಟ್ಟಿದೆ. 16,899 ಕೋಟಿ ರೂ. ವೆಚ್ಚವಾಗುವ ಈ ಮೂರು ಯೋಜನೆಗಳನ್ನು ರಾಜ್ಯ ಅಭಿವೃದ್ಧಿ ನಿಗಮದ ಮೂಲಕ ಜಾರಿಗೆ ತರಲಾಗುವುದು. ಹಣಕಾಸು ಸಚಿವರು ಈ ವರ್ಷ 'ಲಿಂಗ ಬಜೆಟ್' ಮತ್ತು 'ಮಕ್ಕಳ ಬಜೆಟ್'ಗೆ ಕ್ರಮವಾಗಿ 47,283 ಕೋಟಿ ರೂ. ಮತ್ತು 16,748 ಕೋಟಿ ರೂ. ತೆಗೆದಿರಿಸಿದ್ದಾರೆ.
ಲಿಂಗ ಬಜೆಟ್ ಅನ್ನು ಎರಡು ಘಟಕಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಒಂದು ಮಹಿಳೆಯರು ಮತ್ತು ಹುಡುಗಿಯರನ್ನು ಗುರಿಯಾಗಿರಿಸಿಕೊಂಡು ಯೋಜನೆಗಳನ್ನು ಸಂಪೂರ್ಣವಾಗಿ ಒಳಗೊಳ್ಳಲು 23,463 ಕೋಟಿ ರೂ.ಗಳಷ್ಟಿದೆ.