ETV Bharat / business

ದಿಗ್ಗಜ ಕಂಪನಿಗಳ ಮಹಾಸೇಲ್​ನಲ್ಲಿ ನಡೆದಿದ್ದು _ ಕೋಟಿ ವ್ಯವಹಾರ!

author img

By

Published : Oct 9, 2019, 5:17 PM IST

ಎರಡು ದಿಗ್ಗಜ ಕಂಪನಿಗಳು ಒಂದೇ ಅವಧಿಯಲ್ಲಿ ಆಯೋಜಿಸಿದ್ದ ಈ ಸೇಲ್​ನಲ್ಲಿ ಅಮೇಜಾನ್​ ತನ್ನ ಸಮೀಪದ ಪ್ರತಿಸ್ಪರ್ಧಿ ಫ್ಲಿಪ್​ಕಾರ್ಟ್​ಗಿಂತ ಹೆಚ್ಚಿನ ವ್ಯವಹಾರ ನಡೆಸಿತ್ತು ಎನ್ನುವುದು ಕೆಲ ದಿನಗಳ ಹಿಂದೆ ಬಹಿರಂಗಗೊಂಡಿತ್ತು.

ಮಹಾಸೇಲ್​

ನವದೆಹಲಿ: ಭಾರತೀಯ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿ ಆರು ದಿನಗಳ ಕಾಲ ರಿಯಾಯ್ತಿ ಸೇಲ್ ನಡೆಸಿದ್ದ ಅಮೇಜಾನ್ ಹಾಗೂ ಫ್ಲಿಪ್​ಕಾರ್ಟ್​ ಒಟ್ಟಾರೆ ಎಷ್ಟು ಕೋಟಿ ವ್ಯವಹಾರ ನಡೆಸಿವೆ ಎನ್ನುವ ಅಂಕ-ಅಂಶ ಬಹಿರಂಗವಾಗಿದೆ.

ಸೆ.28ರಿಂದ ಅ.4ರವರೆಗೆ ಅಮೇಜಾನ್​(ಗ್ರೇಟ್ ಇಂಡಿಯನ್ ಸೇಲ್)ಹಾಗೂ ಫ್ಲಿಪ್​ಕಾರ್ಟ್​(ಬಿಗ್ ಬಿಲಿಯನ್ ಡೇ ಸೇಲ್)ಹಮ್ಮಿಕೊಂಡಿತ್ತು. ಆರು ದಿನದ ಈ ಮಹಾಸೇಲ್​ನಲ್ಲಿ ಎರಡೂ ಕಂಪನಿಗಳು ಒಟ್ಟಾರೆ ಬರೋಬ್ಬರಿ ₹19,000 ಕೋಟಿ ಮೌಲ್ಯದಷ್ಟು ಸರಕುಗಳ ವ್ಯವಹಾರ ನಡೆಸಿದೆ ಎನ್ನುವುದು ತಿಳಿದು ಬಂದಿದೆ.

ಅಮೇಜಾನ್ Vs ಫ್ಲಿಪ್​ಕಾರ್ಟ್​ ದರ ಸಮರ.. ಫೆಸ್ಟಿವ್ ಸೇಲ್​ನಲ್ಲಿ ಗೆದ್ದಿದ್ದು ಯಾರು..?

ಇದೇ ವಾರಾಂತ್ಯದಲ್ಲಿ ಮತ್ತೆ ಮೆಗಾಸೇಲ್​:

ಅ.13ರಿಂದ 17ರವರೆಗೆ ಅಮೆಜಾನ್​ ಮತ್ತೊಮ್ಮೆ 'ಗ್ರೇಟ್ ಇಂಡಿಯನ್ ಸೆಲಬ್ರೇಷನ್​ ಸ್ಪೆಷಲ್​​ ಸೇಲ್' ಹಮ್ಮಿಕೊಂಡಿದ್ದು, ಗ್ರಾಹಕರು ವಿಶೇಷ ಆಫರ್​ಗಳನ್ನು ಪಡೆಯಬಹುದಾಗಿದೆ. ಅಮೇಜಾನ್ ಪ್ರೈಮ್ ಗ್ರಾಹಕರು ಉಳಿದ ಗ್ರಾಹಕರಿಗಿಂತ ಮುಂಚಿತವಾಗಿ ಅಂದರೆ ಅ.12ರ ಮಧ್ಯಾಹ್ನ 12ರಿಂದ ಆಫರ್​ ಪಡೆಯಬಹುದಾಗಿದೆ. ಅ.13ರಿಂದ ಆರಂಭವಾಗಲಿರುವ ವಿಶೇಷ ಸೇಲ್​ನಲ್ಲಿ ಮೊಬೈಲ್ ಫೋನ್​​ಗಳಿಗೆ ಶೇ.40ರಷ್ಟು ಕಡಿತವಿರಲಿದೆ ಎಂದು ಅಮೇಜಾನ್ ಹೇಳಿದೆ.

ಫ್ಲಿಪ್​ಕಾರ್ಟ್​ ದೀಪಾವಳಿ ಸೇಲ್ ಘೋಷಣೆ ಮಾಡಿದ್ದು, ಅ.12ರಿಂದ 16ರವರೆಗೆ ನಡೆಯಲಿದೆ. ಇತ್ತೀಚೆಗೆ ಮುಕ್ತಾಯವಾದ ಸೇಲ್​ನಲ್ಲಿ ಕೊಂಚ ಹಿನ್ನಡೆ ಕಂಡಿರುವ ಫ್ಲಿಪ್​ಕಾರ್ಟ್​ ಈ ಬಾರಿ ಅಮೇಜಾನ್​ ಹಿಂದಿಕ್ಕಲು ಒಂದು ದಿನ ಮುಂಚಿತವಾಗಿಯೇ ಮೆಗಾಸೇಲ್​ ಆರಂಭಿಸಿದೆ.

Intro:Body:

ನವದೆಹಲಿ: ಭಾರತೀಯ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿ ಆರು ದಿನಗಳ ಕಾಲ ರಿಯಾಯಿತಿ ಸೇಲ್ ನಡೆಸಿದ್ದ ಅಮೇಜಾನ್ ಹಾಗೂ ಫ್ಲಿಪ್​ಕಾರ್ಟ್​ ಒಟ್ಟಾರೆ ಎಷ್ಟು ಕೋಟಿ ವ್ಯವಹಾರ ನಡೆಸಿವೆ ಎನ್ನುವ ಅಂಕ-ಅಂಶ ಬಹಿರಂಗವಾಗಿದೆ.

ಸೆ.28ರಿಂದ ಅ.4ರವರೆಗೆ ಅಮೇಜಾನ್​(ಗ್ರೇಟ್ ಇಂಡಿಯನ್ ಸೇಲ್) ಹಾಗೂ ಫ್ಲಿಪ್​ಕಾರ್ಟ್​(ಬಿಗ್ ಬಿಲಿಯನ್ ಡೇ ಸೇಲ್) ಹಮ್ಮಿಕೊಂಡಿತ್ತು. ಆರು ದಿನದ ಈ ಮಹಾಸೇಲ್​ನಲ್ಲಿ ಎರಡೂ ಕಂಪೆನಿಗಳು ಒಟ್ಟಾರೆ ಬರೋಬ್ಬರಿ ₹19,000 ಕೋಟಿ ಮೌಲ್ಯದಷ್ಟು ಸರಕುಗಳ ವ್ಯವಹಾರ ನಡೆಸಿದೆ ಎನ್ನುವುದು ತಿಳಿದು ಬಂದಿದೆ.

ಎರಡು ದಿಗ್ಗಜ ಕಂಪೆನಿಗಳು ಒಂದೇ ಅವಧಿಯಲ್ಲಿ ಆಯೋಜಿಸಿದ್ದ ಈ ಸೇಲ್​ನಲ್ಲಿ ಅಮೇಜಾನ್​ ತನ್ನ ಸಮೀಪದ ಪ್ರತಿಸ್ಪರ್ಧಿ ಫ್ಲಿಪ್​ಕಾರ್ಟ್​ಗಿಂತ ಹೆಚ್ಚಿನ ವ್ಯವಹಾರ ನಡೆಸಿತ್ತು ಎನ್ನುವುದು ಕೆಲ ದಿನಗಳ ಹಿಂದೆ ಬಹಿರಂಗಗೊಂಡಿತ್ತು.

ಇದೇ ವಾರಾಂತ್ಯದಲ್ಲಿ ಮತ್ತೆ ಮೆಗಾಸೇಲ್​:

ಅ.13ರಿಂದ 17ರವರೆಗೆ ಅಮೆಜಾನ್​ ಮತ್ತೊಮ್ಮೆ 'ಗ್ರೇಟ್ ಇಂಡಿಯನ್ ಸೆಲಬ್ರೇಷನ್​ ಸ್ಪೆಷಲ್​​ ಸೇಲ್' ಹಮ್ಮಿಕೊಂಡಿದ್ದು, ಗ್ರಾಹಕರು ವಿಶೇಷ ಆಫರ್​ಗಳನ್ನು ಪಡೆಯಬಹುದಾಗಿದೆ. ಅಮೆಜಾನ್ ಪ್ರೈಮ್ ಗ್ರಾಹಕರು ಉಳಿದ ಗ್ರಾಹಕರಿಗಿಂತ ಮುಂಚಿತವಾಗಿ ಅಂದರೆ ಅ.12ರ ಮಧ್ಯಾಹ್ನ 12ರಿಂದ ಆಫರ್​ ಪಡೆಯಬಹುದಾಗಿದೆ. ಅ.13ರಿಂದ ಆರಂಭವಾಗಲಿರುವ ವಿಶೇಷ ಸೇಲ್​ನಲ್ಲಿ ಮೊಬೈಲ್ ಫೋನ್​​ಗಳಿಗೆ ಶೇ.40ರಷ್ಟು ಕಡಿತವಿರಲಿದೆ ಎಂದು ಅಮೆಜಾನ್ ಹೇಳಿದೆ.

ಫ್ಲಿಪ್​ಕಾರ್ಟ್​ ದೀಪಾವಳಿ ಸೇಲ್ ಘೋಷಣೆ ಮಾಡಿದ್ದು, ಅ.12ರಿಂದ 16ರವರೆಗೆ ನಡೆಯಲಿದೆ. ಇತ್ತೀಚೆಗೆ ಮುಕ್ತಾಯವಾದ ಸೇಲ್​ನಲ್ಲಿ ಕೊಂಚ ಹಿನ್ನಡೆ ಕಂಡಿರುವ ಫ್ಲಿಪ್​ಕಾರ್ಟ್​ ಈ ಬಾರಿ ಅಮೇಜಾನ್​ ಹಿಂದಿಕ್ಕಲು ಒಂದು ದಿನ ಮುಂಚಿತವಾಗಿಯೇ ಮೆಗಾಸೇಲ್​ ಆರಂಭಿಸಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.