ETV Bharat / business

ಚಿನ್ನ ಆಯ್ತು, ಬೆಳ್ಳಿಯ ಇಟಿಎಫ್​ ಮೇಲೆ ಹೂಡಿಕೆ ಪ್ರಾರಂಭಿಸಿ.. ಇಲ್ಲಿದೆ ವಿವರ

author img

By

Published : Jan 13, 2022, 10:22 AM IST

Updated : Jan 13, 2022, 12:28 PM IST

ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುಯಲ್ ಫಂಡ್‌, ಐಸಿಐಸಿಐ ಸಿಲ್ವರ್ ಇಟಿಎಫ್ ಎಂಬ ಹೆಸರಿನಲ್ಲಿ ಫಂಡ್ ಅನ್ನು ಬಿಡುಗಡೆ ಮಾಡಿದೆ. ನೀವು ಅದರಲ್ಲಿ ಕನಿಷ್ಠ ನೂರು ರೂಪಾಯಿಯನ್ನು ಹೂಡಿಕೆ ಮಾಡಬಹುದು. ಈ ಹೊಸ ಆಫರ್ ಜನವರಿ 19ರವರೆಗೆ ಲಭ್ಯವಿರುತ್ತದೆ.

After gold, now you can invest in Silver ETFs
ಚಿನ್ನ ಆಯ್ತು, ಬೆಳ್ಳಿಯ ಇಟಿಎಫ್​ ಮೇಲೆ ಹೂಡಿಕೆ ಫ್ರಾರಂಭಿಸಿ..ಇಲ್ಲಿದೆ ವಿವರ

ಹೈದರಾಬಾದ್: ಭಾರತೀಯರಿಗೆ ಚಿನ್ನ ಮತ್ತು ಬೆಳ್ಳಿ ಅತ್ಯಮೂಲ್ಯ ಲೋಹಗಳು. ಹೂಡಿಕೆ ವಿಚಾರದಲ್ಲೂ ಈ ಲೋಹಗಳು ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆದಿವೆ. ಈಗಾಗಲೇ ಚಿನ್ನದ ಮೇಲಿನ ಇಟಿಎಫ್ (ವಿನಿಮಯ ವ್ಯಾಪಾರ ನಿಧಿ) ಜನರನ್ನು ಸಾಕಷ್ಟು ಆಕರ್ಷಿಸುತ್ತಿದೆ. ಇದರ ಜೊತೆಗೆ ಈಗ ಬೆಳ್ಳಿಯಲ್ಲೂ ನೀವು ಇಟಿಎಫ್​ ಮೂಲಕ ಹೂಡಿಕೆ ಮಾಡುವುದು ಲಾಭದಾಯಕ ಎಂದು ಎನ್ನಿಸಿಕೊಳ್ಳುತ್ತಿದೆ.

ಆನ್​ಲೈನ್ ಮೂಲಕವೇ ಖರೀದಿ ಮಾಡಿ, ಆನ್​ಲೈನ್​​​ನಲ್ಲೇ ಸಂಗ್ರಹಣೆ ಮಾಡುವುದು ಮಾತ್ರವಲ್ಲದೇ ಅನಿವಾರ್ಯವಾದಾಗ ಅಥವಾ ಬೆಲೆ ಹೆಚ್ಚಾದಾಗ ಮಾರುವುದೇ ಇಟಿಎಫ್​ನ ಮೊದಲ ಲಕ್ಷಣ. ಇದು ಚಿನ್ನ ಮಾತ್ರವಲ್ಲದೇ, ಈಗ ಬೆಳ್ಳಿಯಲ್ಲೂ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದೆ. ಚಿನ್ನವನ್ನು ನೇರವಾಗಿ ಖರೀದಿ ಮಾಡದೇ, ಇಟಿಎಫ್​ಗಳಲ್ಲಿ ಹೂಡಿಕೆ ಮಾಡಿ ಲಾಭ ಗಳಿಕೆ ಮಾಡುವಂತೆ ಬೆಳ್ಳಿಯಲ್ಲೂ ಇಟಿಎಫ್​​ ಮೂಲಕ ಹೂಡಿಕೆ ಮಾಡಿ, ಲಾಭ ಗಳಿಕೆ ಮಾಡಬಹುದಾಗಿದೆ.

ಬೆಳ್ಳಿಗೆ ಏಕೆ ಹೆಚ್ಚು ಬೆಲೆ?: ಹೊಸ ತಂತ್ರಜ್ಞಾನಗಳಾದ 5ಜಿ, ಎಲೆಕ್ಟ್ರಿಕ್ ವಾಹನಗಳು ಮತ್ತು ಗ್ರೀನ್ ಎನರ್ಜಿಯಲ್ಲಿ ಬೆಳ್ಳಿಯನ್ನು ಉಪಯೋಗಿಸಲಾಗುತ್ತದೆ. ಹೊಸ ತಂತ್ರಜ್ಞಾನದಲ್ಲಿ ಇದರ ಬಳಕೆಯಲ್ಲಿ ಹೆಚ್ಚಾಗಲು ಕಾರಣವೆಂದರೆ ಬೆಳ್ಳಿ ಉತ್ತಮ ವಿದ್ಯುತ್ ವಾಹಕವಾಗಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಬೆಳ್ಳಿಯ ಮೇಲೆ ಹೂಡಿಕೆ ಮಾಡುವವರಿಗಾಗಿ ವೇದಿಕೆ ಒದಗಿಸಿಕೊಡಲು ಸೆಬಿ ಸಣ್ಣ ಹೂಡಿಕೆದಾರರಿಗೆ ಅವಕಾಶ ಒದಗಿಸಿದೆ.

ಬೆಳ್ಳಿಯ ಇಟಿಎಫ್​ಗೆ ಸೆಪ್ಟೆಂಬರ್ 2021ರಂದು ಸೆಬಿ ಅನುಮತಿ ನೀಡಿದ್ದು, ನಂತರ ನವೆಂಬರ್​​​ನಲ್ಲಿ ಹೊಸ ವಿಧಾನಗಳನ್ನು ಘೋಷಣೆ ಮಾಡಿದೆ. ಇದಕ್ಕೆ ಅನುಗುಣವಾಗಿ ಅನೇಕ ಕಂಪನಿಗಳು 2022ರ ಹೊಸ ವರ್ಷದಲ್ಲಿ ಸಿಲ್ವರ್ ಇಟಿಎಫ್‌ಗಳನ್ನು ಪ್ರಾರಂಭಿಸಲು ಸಿದ್ಧವಾಗಿವೆ.

ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುಯಲ್ ಫಂಡ್‌, ಐಸಿಐಸಿಐ ಸಿಲ್ವರ್ ಇಟಿಎಫ್ ಎಂಬ ಹೆಸರಿನಲ್ಲಿ ಫಂಡ್ ಅನ್ನು ಬಿಡುಗಡೆ ಮಾಡಿದೆ. ನೀವು ಅದರಲ್ಲಿ ಕನಿಷ್ಠ ನೂರು ರೂಪಾಯಿಯನ್ನು ಹೂಡಿಕೆ ಮಾಡಬಹುದು. ಈ ಹೊಸ ಆಫರ್ ಜನವರಿ 19ರವರೆಗೆ ಲಭ್ಯವಿರುತ್ತದೆ.

ಬೆಳ್ಳಿಯ ಮೇಲಿನ ಇಟಿಎಫ್​ಗಳು ಶೇಕಡಾ 95ರಷ್ಟು ಹೂಡಿಕೆಯನ್ನು ಬೆಳ್ಳಿ ಮತ್ತು ಬೆಳ್ಳಿ ಸಂಬಂಧಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತವೆ. ನೀವು ಶೇಕಡಾ 99.9ರಷ್ಟು ಗುಣಮಟ್ಟ ಹೊಂದಿರುವ 30 ಕೆಜಿಯಷ್ಟು ಬೆಳ್ಳಿಯ ಬಾರ್​ಗಳನ್ನು ಕೊಳ್ಳಬಹುದು. ಈ ಬೆಳ್ಳಿಯ ಗುಣಮಟ್ಟವನ್ನು ಲಂಡನ್ ಬುಲಿಯನ್ ಮಾರ್ಕೆಟ್ ಅಸೋಸಿಯೇಷನ್​ ಪ್ರಮಾಣಿಕರಿಸಿರುತ್ತದೆ.

ಪಾರದರ್ಶಕತೆ ಕಡ್ಡಾಯ: ಸೆಬಿ ಈ ವ್ಯವಹಾರದಲ್ಲಿ ಪಾರದರ್ಶಕತೆಗಾಗಿ ಇದನ್ನು ಕಡ್ಡಾಯಗೊಳಿಸಿದೆ. ಅದೇ ರೀತಿ, ಬೆಳ್ಳಿಯ ಇಟಿಎಫ್‌ಗಳ ಮೌಲ್ಯಕ್ಕಾಗಿ ಐಸಿಐಸಿಐ ತರಹದ ನಿಧಿ ಕಂಪನಿಗಳು ತಮ್ಮ ಗ್ರಾಹಕರ ಬಳಿಯಿರುವ ಬೆಳ್ಳಿಯ ಪ್ರಮಾಣವನ್ನು ಪರಿಶೀಲಿಸುತ್ತಿರಬೇಕಾಗುತ್ತದೆ. ಮ್ಯೂಚುಯಲ್ ಫಂಡ್‌ನ ಲೆಕ್ಕಪರಿಶೋಧಕರು ಪ್ರತಿ ಆರು ತಿಂಗಳಿಗೊಮ್ಮೆ ತಮ್ಮ ವರದಿಯನ್ನು ಫಂಡ್ ಟ್ರಸ್ಟಿಗಳಿಗೆ ಸಲ್ಲಿಸಬೇಕಾಗುತ್ತದೆ.

ಕನಿಷ್ಠ ನೂರು ರೂಪಾಯಿ ಹೂಡಿಕೆ ಮಾಡಿ, ಬೆಳ್ಳಿಯನ್ನು ಆನ್​ಲೈನ್​ ಮೂಲಕ ಖರೀದಿಸಿ, ಸಂಗ್ರಹ ಮಾಡಬಹುದಾಗಿದೆ. ಕಡಿಮೆ ಬೆಲೆಯಿದ್ದಾಗ ಕೊಂಡು ಅಧಿಕ ಬೆಲೆಯಾದಾಗ ಮಾರಬಹುದಾಗಿದೆ ಹಾಗೂ ಲಾಭ ಗಳಿಸಬಹುದಾಗಿದೆ. ಅಂದಹಾಗೆ ಬೆಳ್ಳಿಯ ಬೆಲೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಆದರೂ ಪಾರದರ್ಶಕತೆಯಲ್ಲಿ ಯಾವುದೇ ಕೊರತೆ ಇರುವುದಿಲ್ಲ.

ಡಿಮ್ಯಾಟ್ ಖಾತೆಯ ಅಗತ್ಯತೆ : ಸಾಮಾನ್ಯವಾಗಿ ಇಂತಹ ಹೂಡಿಕೆಗಳಿಗೆ ಡಿಮ್ಯಾಟ್ ಖಾತೆಯ ಅಗತ್ಯವಿರುತ್ತದೆ. ಆದರೆ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಸಿಲ್ವರ್ ಫಂಡ್​ಗಳಲ್ಲಿ ಬೆಳ್ಳಿಯ ಮೇಲೆ ಇಟಿಎಫ್​ ಹೂಡಿಕೆಗೆ ಡಿಮ್ಯಾಟ್ ಖಾತೆಯ ಅಗತ್ಯವಿರುವುದಿಲ್ಲ.

ಬೆಳ್ಳಿಯ ಬಳಕೆ ಪ್ರಮಾಣ : 2020ರಲ್ಲಿ 79,816 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿಯನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲಾಗಿದೆ. ಅದೇ ರೀತಿ, 34,985 ಕೋಟಿ ಮೌಲ್ಯದ ಬೆಳ್ಳಿಯನ್ನು ಆಭರಣಕ್ಕಾಗಿ ಮತ್ತು 38,711 ಕೋಟಿ ರೂಪಾಯಿಗಳನ್ನು ಹೂಡಿಕೆಗಾಗಿ ಖರೀದಿಸಲಾಗಿದೆ. ಆದರೆ, ಬೆಳ್ಳಿಯ ಬೆಲೆಯಲ್ಲಿ ಏರಿಳಿತ ಹೆಚ್ಚಾಗುವ ಸಾಧ್ಯತೆ ಇದೆ.

ದೀರ್ಘಾವಧಿಗೆ ಹೂಡಿಕೆ ಮಾಡುವುದರಿಂದ ಲಾಭವೇನು ಎಂಬುದರ ಬಗ್ಗೆ ಹೇಳಲು ಸಾಧ್ಯವಿಲ್ಲ. ನೀವು ಹೂಡಿಕೆ ಮಾಡಲು ಬಯಸಿದರೆ, ಖರೀದಿ ಮತ್ತು ಮಾರಾಟದ ಬಗ್ಗೆ ಹಣಕಾಸು ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ತಾಜಾ ಮಾಂಸ: ಪ್ರತಿ ಸೆಕೆಂಡ್​ಗೆ ಒಂದು ಆರ್ಡರ್​​​​​​​..! ಚಿಕನ್​​​ ಪ್ರಿಯರೇ ಜಾಸ್ತಿಯಂತೆ!!

Last Updated : Jan 13, 2022, 12:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.