ETV Bharat / business

ಟರ್ಕಿ, ಈಜಿಪ್ಟ್​ನಿಂದ ಭಾರತಕ್ಕೆ ಬಂತು 790 ಟನ್ ಈರುಳ್ಳಿ..! ಹಾಗಾದರೆ ದರ ಎಷ್ಟು?

ಬೆಲೆ ಏರಿಕೆಯಿಂದಾಗಿ ಕೇಂದ್ರ ಸರ್ಕಾರ ವಿದೇಶದಿಂದ ಆಮದು ಮಾಡಿಕೊಂಡ 790 ಟನ್ ಈರುಳ್ಳಿ ಮುಂಬೈಗೆ ಬಂದು ತಲುಪಿದೆ.

ಭಾರತಕ್ಕೆ ಬಂತು 790 ಟನ್ ಈರುಳ್ಳಿ,790 tonnes of imported onion reach India
ಭಾರತಕ್ಕೆ ಬಂತು 790 ಟನ್ ಈರುಳ್ಳಿ
author img

By

Published : Dec 23, 2019, 4:56 PM IST

ನವದೆಹಲಿ: ಗಗನಕ್ಕೇರಿದ ಈರುಳ್ಳಿ ಬೆಲೆ ನಿಯಂತ್ರಣಕ್ಕಾಗಿ ವಿದೇಶದಿಂದ ಆಮದು ಮಾಡಿಕೊಂಡ 790 ಟನ್ ಈರುಳ್ಳಿ ಭಾರತ ತಲುಪಿದೆ. ದೆಹಲಿ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಈ ಈರುಳ್ಳಿ ಖರೀದಿಸಿದ್ದು, ಕೆಜಿಗೆ 57 ರಿಂದ 60 ರೂ. ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿವೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿಸೆಂಬರ್ ಅಂತ್ಯದ ವೇಳೆಗೆ 12,000 ಟನ್ ಈರುಳ್ಳಿ ಬರುವ ನಿರೀಕ್ಷೆಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸರ್ಕಾರದ ಪರವಾಗಿ ಪ್ರಮುಖ ಅಡುಗೆ ವಸ್ತುಗಳನ್ನ ಆಮದು ಮಾಡಿಕೊಳ್ಳುತ್ತಿರುವ ಎಂಎಂಟಿಸಿ, ಇದುವರೆಗೆ 49,500 ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ರಿಟೇಲ್ ಈರುಳ್ಳಿ ಬೆಲೆ ಪ್ರಮುಖ ನಗರಗಳಲ್ಲಿ ಪ್ರತಿ ಕೆಜಿಗೆ 100 ರೂಪಾಯಿ ಇದ್ದರೆ, ದೇಶದ ಕೆಲವು ಭಾಗಗಳಲ್ಲಿ ಈಗಲೂ ಕೆಜಿಗೆ 160 ರೂಪಾಯಿಗೆ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ.

ಟರ್ಕಿ, ಈಜಿಪ್ಟ್ ಮತ್ತು ಅಫ್ಘಾನಿಸ್ತಾನದಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದೆ. ತಲಾ 290 ಟನ್ ಮತ್ತು 500 ಟನ್ ಒಳಗೊಂಡಿರುವ ಎರಡು ಹಡಗುಗಳು ಈಗಾಗಲೇ ಮುಂಬೈ ತಲುಪಿವೆ. ಆಂಧ್ರ ಪ್ರದೇಶ ಮತ್ತು ದೆಹಲಿ ಸರ್ಕಾರಗಳು ಈಗಾಗಲೇ ತಮ್ಮ ಬೇಡಿಕೆ ಮುಂದಿಟ್ಟಿದ್ದು, ಮುಂಬೈನಿಂದ ತಮ್ಮ ರಾಜ್ಯಗಳಿಗೆ ಸಾಗಣೆ ಪ್ರಾರಂಭಿಸಿವೆ ಎಂದಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ಸರ್ಕಾರ ಹಲವಾರು ಕ್ರಮ ಕೈಗೊಡರೂ ಈರುಳ್ಳಿ ಬೆಲೆ ತಗ್ಗಿಸುವಲ್ಲಿ ವಿಫಲವಾಗಿದೆ. ಸರ್ಕಾರ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸಿದ್ದು, ವ್ಯಾಪಾರಿಗಳ ಮೇಲೆ ಸ್ಟಾಕ್ ಮಿತಿಗಳನ್ನು ವಿಧಿಸಿದೆ. ಇಷ್ಟಿದ್ದರೂ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನಲಾಗುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.