ETV Bharat / briefs

ಹೆಣ್ಣಿನ ವಿಷಯಕ್ಕೆ ಹೆಣವಾದ ಮಾಜಿ ಸಿಎಂ ಪುತ್ರ... ರೋಹಿತ್​ ತಿವಾರಿ ಕೊಲೆ ರಹಸ್ಯ ಭೇದಿಸಿದ ಖಾಕಿಪಡೆ! - ಅಪೂರ್ವ ಶುಕ್ಲಾ

ಮೇಲ್ನೋಟಕ್ಕೆ ರೋಹಿತ್​​ ಅಕಾಲಿಕ ನಿಧನ ಕೊಲೆ ಎಂದು ತೀರ್ಮಾನಕ್ಕೆ ಬಂದಿದ್ದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಈ ಸವಾಲಿನ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಣ್ಣಿನ ಸಖ್ಯವೇ ತಿವಾರಿ ಕೊಲೆಗೆ ಕಾರಣವೆಂದು ಪೊಲೀಸರು ಷರಾ ಬರೆದಿದ್ದಾರೆ.

ರೋಹಿತ್​ ತಿವಾರಿ
author img

By

Published : Apr 25, 2019, 6:05 AM IST

Updated : Apr 25, 2019, 7:24 AM IST

ನವದೆಹಲಿ: ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯದ ಮಾಜಿ ಸಿಎಂ ಎನ್​.ಡಿ ತಿವಾರಿ ಪುತ್ರ ರೋಹಿತ್ ಶೇಖರ್​ ತಿವಾರಿ ಅಕಾಲಿಕ ನಿಧನ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿತ್ತು.

ಆಸ್ಪತ್ರೆಗೆ ಕರೆತರುವ ವೇಳೆಯೇ ಸಾವನ್ನಪ್ಪಿದ್ದ ರೋಹಿತ್ ಶೇಖರ್​ ನಿಧನ ಪೊಲೀಸರಿಗೆ ಅನುಮಾನ ಮೂಡಿಸಿತ್ತು. ಇದಕ್ಕೆ ಪೂರಕ ಎನ್ನುವಂತೆ ರೋಹಿತ್​ ಸಾವು ಅಸ್ವಾಭಾವಿಕ ಎಂದು ಪೋಸ್ಟ್ ಮಾರ್ಟಮ್ ವರದಿ ಹೇಳಿತ್ತು.

ಮೇಲ್ನೋಟಕ್ಕೆ ಇದು ಕೊಲೆ ಎಂದು ತೀರ್ಮಾನಕ್ಕೆ ಬಂದಿದ್ದ ಪೊಲೀಸರಿಗೆ ಕೊಲೆಗಾರನನ್ನು ಹುಡುಕುವುದೇ ಅತಿದೊಡ್ಡ ಸವಾಲಿನ ಕೆಲಸವಾಗಿತ್ತು. ಸದ್ಯ ಈ ಸವಾಲಿನ ಪ್ರಕರಣವನ್ನು ಖಾಕಿ ಪಡೆ ಪಡೆ ಭೇದಿಸಿ ನಿಟ್ಟುಸಿರು ಬಿಟ್ಟಿದ್ದಾರೆ.

Rohit Shekhar
ತಂದೆಯೊಂದಿಗೆ ರೋಹಿತ್​ ಶೇಖರ್​ ತಿವಾರಿ

ಹೆಣ್ಣಿನ ಸ್ನೇಹದಲ್ಲಿ ಹೆಣವಾದ ತಿವಾರಿ..!

ರೋಹಿತ್​ ತಿವಾರಿ ಪತ್ನಿ ಅಪೂರ್ವ ಶುಕ್ಲಾಗೆ ಪತಿಯ ಕೆಲವೊಂದು ವಿಚಾರಗಳು ಕೋಪಗೊಳ್ಳುವಂತೆ ಮಾಡುತ್ತಿತ್ತು. ಸೋದರ ಸಂಬಂಧಿಯ ಪತ್ನಿ ಜೊತೆಗೆ ಅತ್ಯಂತ ನಿಕಟವಾಗಿ ವರ್ತಿಸುವುದು ಇಷ್ಟವಾಗುತ್ತಿರಲಿಲ್ಲ.

ಏಪ್ರಿಲ್​ 10ರಂದು ರೋಹಿತ್​​​, ಮತದಾನ ಮಾಡಲು ಉತ್ತರಾಖಂಡದ ಹಲ್ದ್ವಾನಿಗೆ ಇದೇ ಸೋದರ ಸಂಬಂಧಿಯ ಪತ್ನಿಯ ಜೊತೆಗೆ ತೆರಳಿದ್ದರು. ಹಿಂತಿರುಗುವ ವೇಳೆಯಲ್ಲಿ ಪತ್ನಿ ಅಪೂರ್ವ ಶುಕ್ಲಾ ಪತಿಗೆ ವಿಡಿಯೋ ಕಾಲ್​ ಮಾಡಿದ್ದಳು. ಈ ವೇಳೆ ಪತಿ ಮದ್ಯಪಾನ ಮಾಡುತ್ತಿರುವುದು ಹಾಗೂ ಪತಿ ಹಾಗೂ ಸೋದರ ಸಂಬಂಧಿಯ ಪತ್ನಿ ಒಂದೇ ಗ್ಲಾಸ್​ನಲ್ಲಿ ಮದ್ಯ ಸೇವಿಸುವುದನ್ನು ಗಮನಿಸಿ ಕುಪಿತಳಾಗಿದ್ದಳು.

ಸಂಬಂಧಿತ ಸುದ್ದಿ:

ಕೋರ್ಟ್​ ಮೆಟ್ಟಿಲೇರಿದ್ದ ಅಪ್ಪ-ಮಗನ 'ಜೈವಿಕ' ಹೋರಾಟ... ರೋಹಿತ್​​ ಶೇಖರ್​ ತಿವಾರಿ ಜೀವನದ ರೋಚಕ ಘಟನಾವಳಿ..!

ರಾತ್ರಿ ಹತ್ತರ ವೇಳೆ ರೋಹಿತ್ ಹಾಗೂ ಸೋದರ ಸಂಬಂಧಿಯ ಪತ್ನಿ​ ಮನೆ ತಲುಪುತ್ತಾರೆ. ತಾಯಿ ಉಜ್ವಲಾ ಶರ್ಮಳೊಂದಿಗೆ ಊಟ ಮಾಡಿ ರೋಹಿತ್​​​ ತನ್ನ ರೂಮ್​ಗೆ ತೆರಳುತ್ತಾರೆ. ತಾಯಿ ತಿಲಕ್​ ಲೇನ್ ಬಂಗಲೆಗೆ ಮರಳುತ್ತಾರೆ.

ಮಧ್ಯರಾತ್ರಿ 12.45ರ ವೇಳೆ ಅಪೂರ್ವ ಶುಕ್ಲಾ ಪತಿಯ ರೂಮ್​​ಗೆ ಹೋಗಿ ಒಂದಷ್ಟು ಮಾತಿನ ಚಕಮಕಿ ನಡೆಸುತ್ತಾಳೆ. ಜಗಳದ ವೇಳೆ ಪತ್ನಿ ಶುಕ್ಲಾ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಪೋಸ್ಟ್​ ಮಾರ್ಟಮ್​ನಲ್ಲಿ ರಾತ್ರಿ ಒಂದು ಗಂಟೆಯ ಅಸುಪಾಸಿನಲ್ಲಿ ರೋಹಿತ್ ಸಾವನ್ನಪ್ಪಿದ್ದಾರೆ ಎನ್ನುವುದು ಉಲ್ಲೇಖವಾಗಿರುವುದು ಈ ಎಲ್ಲ ಘಟನಾವಳಿಗೆ ಪೂರಕವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್ ರಂಜನ್ ಹೇಳಿದ್ದಾರೆ.

ಲಾಯರ್​​ ಬ್ರೈನ್​​ ಎಡವಿದ್ದೆಲ್ಲಿ..?

ರೋಹಿತ್​ ಪತ್ನಿ ಅಪೂರ್ವ ಶುಕ್ಲಾ ಮೂಲತಃ ವಕೀಲೆ. ತನಿಖೆಯ ಆರಂಭದಿಂದಲೂ ತನ್ನ ಲಾಯರ್​​ ಜಾಣ್ಮೆಯನ್ನೇ ತೋರಿಸುತ್ತಾ ಬಂದು ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಳು. ಬರೋಬ್ಬರಿ ನಾಲ್ಕು ದಿನದ ಸತತ ವಿಚಾರಣೆಯ ಫಲವಾಗಿ ಸಂಪೂರ್ಣ ಘಟನಾವಳಿಗಳು ಪೊಲೀಸರಿಗೆ ತಿಳಿದು ಬಂದಿದ್ದು, ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿದ್ದು ರುಜುವಾತಾಗಿದೆ.

Rohit Shekhar
ಅಪೂರ್ವ ಶುಕ್ಲಾ

ಕೊಲೆ ನಡೆದ ದಿನ ಆ ಮನೆಯಲ್ಲಿ ಆರು ಮಂದಿ ಇದ್ದರು. ಅದರಲ್ಲಿ ಪತ್ನಿ ಅಪೂರ್ವ ಶುಕ್ಲಾ, ಸಹಾಯಕ ಗೋಲು ಹಾಗೂ ಡ್ರೈವರ್​​​​​ ಅಖಿಲೇಶ್​​ಗೆ ಮಾತ್ರ ಮಾತ್ರ ರೋಹಿತ್​​ ಮಲಗುವ ಮೊದಲನೇ ಅಂತಸ್ತಿನಲ್ಲಿರುವ ಕೊಠಡಿಗೆ ಪ್ರವೇಶಿಸುವ ಅನುಮತಿ ಇತ್ತು.

ಹಲವಾರು ಸುತ್ತಿನ ವಿಚಾರಣೆಯಲ್ಲಿ ಗೋಲು ಹಾಗೂ ಅಖಿಲೇಶ್​​ ತಮ್ಮ ಹೇಳಿಕೆಗೆ ಬದ್ಧರಾಗಿಯೇ ಉಳಿದಿದ್ದರು. ಇದು ಪೊಲೀಸರಿಗೆ ಅಪೂರ್ವ ಶುಕ್ಲಾ ಮೇಲೆ ಅನುಮಾನ ಮೂಡವಂತೆ ಮಾಡಿತ್ತು. ಜೊತೆಗೆ ಸಿಸಿಟಿವಿ ದೃಶ್ಯಗಳ ಆಧಾರದಂತೆ ರೋಹಿತ್​ ಸಂಬಂಧಿಗಳು ಆತನ ರೂಮಿಗೆ ಹೋಗಿರಲಿಲ್ಲ.

ಮಾರನೇ ದಿನ 2.30ರ ಸುಮಾರಿಗೆ ಮನೆಗೆ ಬಂದ ರೋಹಿತ್ ತಾಯಿ ಉಜ್ವಲಾ ಶರ್ಮ, ಮಗನ ಬಗ್ಗೆ ವಿಚಾರಿಸುತ್ತಾರೆ. ಈ ವೇಳೆ ಅಪೂರ್ವ, ಆತ ಇನ್ನೂ ಮಲಗಿಯೇ ಇದ್ದಾನೆ ಎಂದು ಹೇಳುತ್ತಾಳೆ. ರೋಹಿತ್​ಗೆ ಇನ್ಸೋಮ್ನಿಯಾ ಇರುವ ವಿಚಾರ ತಿಳಿದಿದ್ದ ಉಜ್ವಲಾ ಶರ್ಮ, ಅಪೂರ್ವ ಮಾತಿನಿಂದ ಸುಮ್ಮನಾಗುತ್ತಾರೆ.

ಸಂಜೆ ನಾಲ್ಕರ ಸುಮಾರಿಗೆ ಓರ್ವ ಮನೆ ಕೆಲಸದವ ರೋಹಿತ್​ ಯಾವುದೇ ರೀತಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ಮತ್ತು ಮೂಗಿನಲ್ಲಿ ರಕ್ತ ಸೋರುತ್ತಿದೆ ಎಂದು ಉಜ್ವಲಾ ಶರ್ಮಳಿಗೆ ಫೋನ್​​ ಮಾಡುತ್ತಾನೆ. ತಕ್ಷಣವೇ ಆಕೆ ಆ್ಯಂಬುಲೆನ್ಸ್​ ಕರೆತಂದು ರೋಹಿತ್​ನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾಳೆ. ಆದರೆ ಅದಾಗಲೇ ರೋಹಿತ್​​ ಅಸುನೀಗಿದ್ದ ಎಂದು ವೈದ್ಯರು ಹೇಳುತ್ತಾರೆ.

ವಿಚಾರಣೆಯಲ್ಲಿ ಅಪೂರ್ವ ವಿಭಿನ್ನ ಹೇಳಿಕೆ:

ವಿಚಾರಣೆ ವೇಳೆ ಅಪೂರ್ವ ಶುಕ್ಲಾ ಪ್ರತೀ ಬಾರಿಯೂ ಹೇಳಿಕೆಯನ್ನೂ ಬದಲಾಯಿಸುತ್ತಲೇ ಇರುತ್ತಿದ್ದಳು. ತಾನು ಆಕಸ್ಮಿಕವಾಗಿ ಪತಿಯನ್ನು ಉಸಿರುಗಟ್ಟಿಸಿದ್ದಾಗಿ ಒಂದು ಬಾರಿ ಹೇಳಿಕೆ ನೀಡಿದ್ದಳು. ಹೇಳಿಕೆಯನ್ನು ಬದಲಿಸುತ್ತಲೇ ಪ್ರಕರಣದಿಂದ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಳು. ಕೊಲೆ ಮಾಡಿ ತನ್ನ ರೂಮಿಗೆ ಬಂದಿದ್ದ ಅಪೂರ್ವ, ಆ ರಾತ್ರಿಯಿಡೀ ನಿದ್ದೆಯೇ ಮಾಡಿರಲಿಲ್ಲ.

ವಿಚಾರಣೆಯ ಒಂದು ಹಂತದ ಬಳಿಕ ಅಪೂರ್ವ ಶುಕ್ಲಾ ಕೊಲೆ ಮಾಡಿದ್ದು ಎನ್ನುವುದು ಸ್ಪಷ್ಟವಾಗಿತ್ತು. ಆದರೆ ಕೋರ್ಟ್​ನಲ್ಲಿ ಪ್ರಬಲ ಸಾಕ್ಷ್ಯ ನೀಡುವ ಸಲುವಾಗಿ ನಿಧಾನವಾಗಿ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಈ ಕೊಲೆ ಪೂರ್ವ ಯೋಜಿತವಲ್ಲ, ಆ ಕ್ಷಣದ ಕೋಪದಲ್ಲಿ ನಡೆದ ಒಂದು ಅಚಾತುರ್ಯ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್ ರಂಜನ್ ಹೇಳಿದ್ದಾರೆ.

ಮುರಿದು ಬಿದ್ದ ರಾಜಕೀಯದ ಆಸೆ, ಹಳಸಿದ ವಿವಾಹ ಸಂಬಂಧ..!

35 ವರ್ಷದ ಅಪೂರ್ವ ಶುಕ್ಲಾ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ರೋಹಿತ್​ನನ್ನು ನೋಡಿರುತ್ತಾಳೆ. ಆತ ಮಾಜಿ ಸಿಎಂ ಪುತ್ರ ಎನ್ನುವುದು ಗೊತ್ತಾದ ಬಳಿಕ ಅಕೆಗೆ ರಾಜಕೀಯದಲ್ಲಿ ಬೆಳೆಯುವ ಆಸೆ ಚಿಗುರಿತ್ತು.

2018ರ ಮಧ್ಯಭಾಗದಲ್ಲಿ ರೋಹಿತ್ ಹಾಗೂ ಅಪೂರ್ವ ಶುಕ್ಲಾ ಮದುವೆಯಾಗಿದ್ದರು. ಮದುವೆಯ ಬಳಿಕ ರೋಹಿತ್​​ ರಾಜಕಾರಣದಲ್ಲಿ ಅಷ್ಟೊಂದು ಪ್ರಭಾವಿಯಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಐಷಾರಾಮಿ ಜೀವನದ ಕನಸಿನಲ್ಲಿದ್ದ ಅಪೂರ್ವ ಹತಾಶೆಗೊಳ್ಳುತ್ತಾಳೆ. ವಿವಾಹವಾದ ಹದಿನೈದೇ ದಿನದಲ್ಲಿ ಇಬ್ಬರೂ ಪ್ರತ್ಯೇಕವಾಗಿ ಜೀವಿಸಲು ಆರಂಭಿಸಿದ್ದರು.

Rohit Shekhar
ಅಪೂರ್ವ ಶುಕ್ಲಾ ಹಾಗೂ ರೋಹಿತ್​ ಶೇಖರ್​ ತಿವಾರಿ

ಆಗಸ್ಟ್​ 2018ರಲ್ಲಿ ಅಪೂರ್ವ ತನ್ನ ಪತಿಯೊಂದಿಗೆ ಕಾನೂನು ಹೋರಾಟ ಆರಂಭಿಸಿದ್ದಳು. ರೋಹಿತ್​​ ಉತ್ತಮ ಪತಿಯಲ್ಲ ಎಂದು ನೋಟಿಸ್​ ಕಳುಹಿಸಿದ್ದಳು.

ರೋಹಿತ್​ ಪರ ವಕೀಲ ವೇದಾಂತ ವರ್ಮ ಹೇಳುವಂತೆ ರೋಹಿತ್​​​ ವಿಚ್ಛೇದನಕ್ಕೆ ಮುಂದಾಗಿದ್ದರು. ಆ ಕುರಿತಂತೆ ಮಾತುಕತೆಯೂ ನಡೆದಿತ್ತು ಎಂದು ವೇದಾಂತ ವರ್ಮ ಹೇಳಿದ್ದಾರೆ. ಆದರೆ, ಸೋದರ ಸಂಬಂಧಿ ಪತ್ನಿಯ ಜೊತೆಗೆ ಅಕ್ರಮ ಸಂಬಂಧ ಇತ್ತು ಎನ್ನುವುದನ್ನು ವೇದಾಂತ ವರ್ಮ ತಳ್ಳಿಹಾಕಿದ್ದಾರೆ.

ಅಮ್ಮನ ಆಸ್ತಿ ಹಂಚಿಕೆ ಮುಳ್ಳಾಯಿತಾ..?

ರೋಹಿತ್​ ತಾಯಿ ಉಜ್ವಲಾ ಶರ್ಮ ತನ್ನ ಬಳಿಯಿದ್ದ ಕೋಟ್ಯಂತರ ಬೆಲೆ ಬಾಳುವ ಆಸ್ತಿಯನ್ನು ಮೊದಲನೇ ಗಂಡನಿಂದ ಹುಟ್ಟಿದ ಪುತ್ರ ಸಿದ್ಧಾರ್ಥ್​ಗೆ ಶೇ.40 ಹಾಗೂ ರೋಹಿತ್​​ಗೆ ಶೇ.60 ಎಂದು ಹಂಚಿಕೆ ಮಾಡಿ ವಿಲ್​​ ಬರೆಸಿದ್ದಳು. ಒಂದು ವೇಳೆ ಇಬ್ಬರಲ್ಲಿ ಒಬ್ಬರು ಸಾವನ್ನಪ್ಪಿದರೆ ಮತ್ತೊಬ್ಬ ಪುತ್ರನಿಗೆ ಇಲ್ಲವೇ ತಾಯಿಗೆ ಆಸ್ತಿ ವರ್ಗಾವಣೆಯಾಗುತ್ತದೆ ಎಂದು ಉಯಿಲಿನಲ್ಲಿತ್ತು.

ವಿಲ್​ ಪ್ರಕಾರ ಆಸ್ತಿ ಹಂಚಿಕೆಯಲ್ಲಿ ಅಪೂರ್ವ ಶುಕ್ಲಾಗೆ ಯಾವುದೇ ಪಾಲು ಇರಲಿಲ್ಲ. ತನ್ನ ಆಸ್ತಿಯ ಪಾಲನ್ನು ಒಂಭತ್ತು ವರ್ಷದ ಮಗನಿಗೆ ಹಸ್ತಾಂತರಿಸುವುದಾಗಿ ರೋಹಿತ್​​ ಹೇಳಿಕೊಂಡಿದ್ದರು. ಈ ವಿಚಾರ ಅಪೂರ್ವಾಳಿಗೆ ಕೋಪ ತರಿಸಿತ್ತು ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

Rohit Shekhar
ಉಜ್ವಲಾ ಶರ್ಮ ಹಾಗೂ ಎನ್​.ಡಿ.ತಿವಾರಿ

ಆಸ್ತಿ ಹಂಚಿಕೆಯಲ್ಲಿ ಸೇ.40ರಷ್ಟು ಪಾಲು ಪಡೆದಿದ್ದ ಸಿದ್ದಾರ್ಥ್​ ಪತ್ನಿಯೊಂದಿಗೆ ರೋಹಿತ್​​ ನಿಕಟ ಬಾಂಧವ್ಯ ಹೊಂದಿದ್ದರು.ಕೊಲೆಗೆ ಆಸ್ತಿ ಹಂಚಿಕೆ ಕಾರಣ ಎನ್ನುವುದು ಕಾರಣವಾಗಿ ಕಾಣಿಸುತ್ತಿಲ್ಲ. ರೋಹಿತ್​ ವಾಸವಿದ್ದ ಮನೆಯೂ ಆತನ ತಾಯಿಯ ಹೆಸರಲ್ಲಿತ್ತು ಎಂದು ರೋಹಿತ್​ ಪರ ವಕೀಲ ವೇದಾಂತ ವರ್ಮ ಹೇಳಿದ್ದಾರೆ.

ಒಟ್ಟಿನಲ್ಲಿ ಕಳೆದೊಂದು ವಾರದಿಂದ ಪೊಲೀಸರಿಗೆ ಕಗ್ಗಂಟಾಗಿದ್ದ ಹೈಪ್ರೊಫೈಲ್​ ಕೇಸ್​ ಬಗೆಹರಿದಿದೆ. ಕೊಲೆ ಮಾಡಿದ ತಪ್ಪಿಗೆ ಅಪೂರ್ವ ಶುಕ್ಲಾ ಜೈಲು ಸೇರಿದ್ದಾಳೆ. ಹಲವು ತಿರುವು ಹಾಗೂ ರೋಚಕತೆಯಿಂದ ಕೂಡಿದ್ದ ಈ ಪ್ರಕರಣ ಮುಂದಿನ ದಿನಗಳಲ್ಲಿ ಥ್ರಿಲ್ಲರ್​ ಸಿನಿಮಾಗಳಿಗೆ ಸ್ಫೂರ್ತಿಯಾದರೆ ಅಚ್ಚರಿಯಿಲ್ಲ.

Intro:Body:

ಕೈಗೂಡದ ಆಸೆ, ಕೈಕೊಟ್ಟ ವಿವಾಹ... ರೋಹಿತ್​ ತಿವಾರಿ ಕೊಲೆ ರಹಸ್ಯ ಭೇದಿಸಿದ ಖಾಕಿಪಡೆ..!

ನವದೆಹಲಿ: ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯದ ಮಾಜಿ ಸಿಎಂ ಎನ್​.ಡಿ ತಿವಾರಿ ಪುತ್ರ ರೋಹಿತ್ ಶೇಖರ್​ ತಿವಾರಿ ಅಕಾಲಿಕ ನಿಧನ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿತ್ತು.

ಆಸ್ಪತ್ರೆಗೆ ಕರೆತರುವ ವೇಳೆಯೇ ಸಾವನ್ನಪ್ಪಿದ್ದ ರೋಹಿತ್ ಶೇಖರ್​ ನಿಧನ ಪೊಲೀಸರಿಗೆ ಅನುಮಾನ ಮೂಡಿಸಿತ್ತು. ಇದಕ್ಕೆ ಪೂರಕ ಎನ್ನುವಂತೆ ರೋಹಿತ್​ ಸಾವು ಅಸ್ವಾಭಾವಿಕ ಎಂದು ಪೋಸ್ಟ್ ಮಾರ್ಟಮ್ ವರದಿ ಹೇಳಿತ್ತು.

ಮೇಲ್ನೋಟಕ್ಕೆ ಇದು ಕೊಲೆ ಎಂದು ತೀರ್ಮಾನಕ್ಕೆ ಬಂದಿದ್ದ ಪೊಲೀಸರಿಗೆ ಕೊಲೆಗಾರನನ್ನು ಹುಡುಕುವುದೇ ಅತಿದೊಡ್ಡ ಸವಾಲಿನ ಕೆಲಸವಾಗಿತ್ತು. ಸದ್ಯ ಈ ಸವಾಲಿನ ಪ್ರಕರಣವನ್ನು ಖಾಕಿ ಪಡೆ ಪಡೆ ಭೇದಿಸಿ ನಿಟ್ಟುಸಿರು ಬಿಟ್ಟಿದ್ದಾರೆ.

ಹೆಣ್ಣಿನ ಸ್ನೇಹದಲ್ಲಿ ಹೆಣವಾದ ತಿವಾರಿ..!

ರೋಹಿತ್​ ತಿವಾರಿ ಪತ್ನಿ ಅಪೂರ್ವ ಶುಕ್ಲಾಗೆ ಪತಿಯ ಕೆಲವೊಂದು ವಿಚಾರಗಳು ಕೋಪಗೊಳ್ಳುವಂತೆ ಮಾಡುತ್ತಿತ್ತು. ಸೋದರ ಸಂಬಂಧಿಯ ಪತ್ನಿ ಜೊತೆಗೆ ಅತ್ಯಂತ ನಿಕಟವಾಗಿ ವರ್ತಿಸುವುದು ಇಷ್ಟವಾಗುತ್ತಿರಲಿಲ್ಲ.

ಏಪ್ರಿಲ್​ 10ರಂದು ರೋಹಿತ್​​​, ಮತದಾನ ಮಾಡಲು ಉತ್ತರಾಖಂಡದ ಹಲ್ದ್ವಾನಿಗೆ ಇದೇ ಸೋದರ ಸಂಬಂಧಿಯ ಪತ್ನಿಗೆ ಜೊತೆಗೆ ತೆರಳಿದ್ದರು. ಹಿಂತಿರುಗುವ ವೇಳೆಯಲ್ಲಿ ಪತ್ನಿ ಅಪೂರ್ವ ಶುಕ್ಲಾ ಪತಿಗೆ ವಿಡಿಯೋ ಕಾಲ್​ ಮಾಡಿದ್ದಳು. ಈ ವೇಳೆ ಪತಿ ಮದ್ಯಪಾನ ಮಾಡುತ್ತಿರುವುದು ಹಾಗೂ ಪತಿ ಹಾಗೂ ಸೋದರ ಸಂಬಂಧಿಯ ಪತ್ನಿ ಒಂದೇ ಗ್ಲಾಸ್​ನಲ್ಲಿ ಮದ್ಯ ಸೇವಿಸುವುದನ್ನು ಗಮನಿಸಿ ಕುಪಿತಳಾಗಿದ್ದಳು.

ರಾತ್ರಿ ಹತ್ತರ ವೇಳೆ ರೋಹಿತ್​ ಮನೆ ತಲುಪುತ್ತಾರೆ. ತಾಯಿ ಉಜ್ವಲಾ ಶರ್ಮಳೊಂದಿಗೆ ಕೊಂಚ ಊಟ ಮಾಡಿ ರೋಹಿತ್​​​ ತನ್ನ ರೂಮ್​ಗೆ ತೆರಳುತ್ತಾರೆ. ತಾಯಿ ತಿಲಕ್​ ಲೇನ್ ಬಂಗಲೆಗೆ ಮರಳುತ್ತಾರೆ.

ಮಧ್ಯರಾತ್ರಿ 12.45ರ ವೇಳೆ ಅಪೂರ್ವ ಶುಕ್ಲಾ ಪತಿಯ ರೂಮ್​​ಗೆ ಹೋಗಿ ಒಂದಷ್ಟು ಮಾತಿನ ಚಕಮಕಿ ನಡೆಸುತ್ತಾಳೆ. ಜಗಳದ ವೇಳೆ ವೇಳೆ ಪತ್ನಿ ಶುಕ್ಲಾ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಪೋಸ್ಟ್​ ಮಾರ್ಟಮ್​ನಲ್ಲಿ ರಾತ್ರಿ ಒಂದು ಗಂಟೆಯ ಅಸುಪಾಸಿನಲ್ಲಿ ರೋಹಿತ್ ಸಾವನ್ನಪ್ಪಿದ್ದಾರೆ ಎನ್ನುವುದು ಉಲ್ಲೇಖವಾಗಿರುವುದು ಈ ಎಲ್ಲ ಘಟನಾವಳಿಗೆ ಪೂರಕವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್ ರಂಜನ್ ಹೇಳಿದ್ದಾರೆ.

ಲಾಯರ್​​ ಬ್ರೈನ್​​ ಎಡವಿದ್ದೆಲ್ಲಿ..?

ರೋಹಿತ್​ ಪತ್ನಿ ಅಪೂರ್ವ ಶುಕ್ಲಾ ಮೂಲತಃ ವಕೀಲೆ. ತನಿಖೆಯ ಆರಂಭದಿಂದಲೂ ತನ್ನ ಲಾಯರ್​​ ಜಾಣ್ಮೆಯನ್ನೇ ತೋರಿಸುತ್ತಾ ಬಂದು ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಳು.

ಬರೋಬ್ಬರಿ ನಾಲ್ಕು ದಿನದ ಸತತ ವಿಚಾರಣೆಯ ಫಲವಾಗಿ ಸಂಪೂರ್ಣ ಘಟನಾವಳಿಗಳು ಪೊಲೀಸರಿಗೆ ತಿಳಿದು ಬಂದಿದ್ದು, ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿದ್ದು ರುಜುವಾತಾಗಿದೆ.

ಕೊಲೆ ನಡೆದ ದಿನ ಆ ಮನೆಯಲ್ಲಿ ಆರು ಮಂದಿ ಇದ್ದರು. ಅದರಲ್ಲಿ ಪತ್ನಿ ಅಪೂರ್ವ ಶುಕ್ಲಾ, ಸಹಾಯಕ ಗೋಲು ಹಾಗೂ ಡ್ರೈವರ್​​​​​ ಅಖಿಲೇಶ್​​ಗೆ ಮಾತ್ರ ಮಾತ್ರ ರೋಹಿತ್​​ ಮಲಗುವ ಮೊದಲನೇ ಅಂತಸ್ತಿನಲ್ಲಿರುವ ಕೊಠಡಿಗೆ ಪ್ರವೇಶಿಸುವ ಅನುಮತಿ ಇತ್ತು.

ಹಲವಾರು ಸುತ್ತಿನ ವಿಚಾರಣೆಯಲ್ಲಿ ಗೋಲು ಹಾಗೂ ಅಖಿಲೇಶ್​​ ತಮ್ಮ ಹೇಳಿಕೆಗೆ ಬದ್ಧರಾಗಿಯೇ ಉಳಿದಿದ್ದರು. ಇದು ಪೊಲೀಸರಿಗೆ ಅಪೂರ್ವ ಶುಕ್ಲಾ ಮೇಲೆ ಅನುಮಾನ ಮೂಡವಂತೆ ಮಾಡಿತ್ತು. ಜೊತೆಗೆ ಸಿಸಿಟಿವಿ ದೃಶ್ಯಗಳ ಆಧಾರದಂತೆ ರೋಹಿತ್​ ಸಂಬಂಧಿಗಳು ಆತನ ರೂಮಿಗೆ ಹೋಗಿರಲಿಲ್ಲ.

ಮಾರನೇ ದಿನ 2.30ರ ಸುಮಾರಿಗೆ ಮನೆಗೆ ಬಂದ ರೋಹಿತ್ ತಾಯಿ ಉಜ್ವಲಾ ಶರ್ಮ, ಮಗನ ಬಗ್ಗೆ ವಿಚಾರಿಸುತ್ತಾರೆ. ಈ ವೇಳೆ ಅಪೂರ್ವ, ಆತ ಇನ್ನೂ ಮಲಗಿಯೇ ಇದ್ದಾನೆ ಎಂದು ಹೇಳುತ್ತಾಳೆ. ರೋಹಿತ್​ಗೆ ಇನ್ಸೋಮ್ನಿಯಾ ಇರುವ ವಿಚಾರ ತಿಳಿದಿದ್ದ ಉಜ್ವಲಾ ಶರ್ಮ, ಅಪೂರ್ವ ಮಾತಿನಿಂದ ಸುಮ್ಮನಾಗುತ್ತಾರೆ.

ಸಂಜೆ ನಾಲ್ಕರ ಸುಮಾರಿಗೆ ಓರ್ವ ಮನೆ ಕೆಲಸದಾಕೆ ರೋಹಿತ್​ ಯಾವುದೇ ರೀತಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ಮತ್ತು ಮೂಗಿನಲ್ಲಿ ರಕ್ತ ಸೋರುತ್ತಿದೆ ಎಂದು ಉಜ್ವಲಾ ಶರ್ಮಳಿಗೆ ಫೋನ್​​ ಮಾಡುತ್ತಾನೆ. ತಕ್ಷಣವೇ ಆಕೆ ಆ್ಯಂಬುಲೆನ್ಸ್​ ಕರೆತಂದು ರೋಹಿತ್​ನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾಳೆ. ಆದರೆ ಅದಾಗಲೇ ರೋಹಿತ್​​ ಅಸುನೀಗಿದ್ದ ಎಂದು ವೈದ್ಯರು ಹೇಳುತ್ತಾರೆ.

ವಿಚಾರಣೆಯಲ್ಲಿ ಮಾತು ಬದಲಾಯಿಸುತ್ತಿದ್ದ ಅಪೂರ್ವ:

ವಿಚಾರಣೆ ವೇಳೆ ಅಪೂರ್ವ ಶುಕ್ಲಾ ಪ್ರತೀ ಬಾರಿಯೂ ಹೇಳಿಕೆಯನ್ನೂ ಬದಲಾಯಿಸುತ್ತಲೇ ಇರುತ್ತಿದ್ದಳು. ತಾನು ಆಕಸ್ಮಿಕವಾಗಿ ಪತಿಯನ್ನು ಉಸಿರುಗಟ್ಟಿಸಿದ್ದಾಗಿ ಒಂದು ಬಾರಿ ಹೇಳಿಕೆ ನೀಡಿದ್ದಳು.

ಹೇಳಿಕೆಯನ್ನು ಬದಲಿಸುತ್ತಲೇ ಪ್ರಕರಣದಿಂದ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಳು. ಕೊಲೆ ಮಾಡಿ ತನ್ನ ರೂಮಿಗೆ ಬಂದಿದ್ದ ಅಪೂರ್ವ,  ಆ ರಾತ್ರಿಯಿಡೀ ನಿದ್ದೆಯೇ ಮಾಡಿರಲಿಲ್ಲ.

ವಿಚಾರಣೆಯ ಒಂದು ಹಂತದ ಬಳಿಕ ಅಪೂರ್ವ ಶುಕ್ಲಾ ಕೊಲೆ ಮಾಡಿದ್ದು ಎನ್ನುವುದು ಸ್ಪಷ್ಟವಾಗಿತ್ತು. ಆದರೆ ಕೋರ್ಟ್​ನಲ್ಲಿ ಪ್ರಬಲ ಸಾಕ್ಷ್ಯ ನೀಡುವ ಸಲುವಾಗಿ ನಿಧಾನವಾಗಿ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಈ ಕೊಲೆ ಪೂರ್ವ ಯೋಜಿತವಲ್ಲ, ಆ ಕ್ಷಣದ ಕೋಪದಲ್ಲಿ ನಡೆದ ಒಂದು ಅಚಾತುರ್ಯ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್ ರಂಜನ್ ಹೇಳಿದ್ದಾರೆ.

ಮುರಿದು ಬಿದ್ದ ರಾಜಕೀಯದ ಆಸೆ, ಹಳಸಿದ ವಿವಾಹ ಸಂಬಂಧ..!

35 ವರ್ಷದ ಅಪೂರ್ವ ಶುಕ್ಲಾ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ರೋಹಿತ್​ನನ್ನು ನೋಡಿರುತ್ತಾಳೆ. ಆತ ಮಾಜಿ ಸಿಎಂ ಪುತ್ರ ಎನ್ನುವುದು ಗೊತ್ತಾದ ಬಳಿಕ ಅಕೆಗೆ ರಾಜಕೀಯದಲ್ಲಿ ಬೆಳೆಯುವ ಆಸೆ ಚಿಗುರಿತ್ತು.

2018ರ ಮಧ್ಯಭಾಗದಲ್ಲಿ ರೋಹಿತ್ ಹಾಗೂ ಅಪೂರ್ವ ಶುಕ್ಲಾ ಮದುವೆಯಾಗಿದ್ದರು. ಮದುವೆಯ ಬಳಿಕ ರೋಹಿತ್​​ ರಾಜಕಾರಣದಲ್ಲಿ ಅಷ್ಟೊಂದು ಪ್ರಭಾವಿಯಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಐಷಾರಾಮಿ ಜೀವನದ ಕನಸಿನಲ್ಲಿದ್ದ ಅಪೂರ್ವ ಹತಾಶೆಗೊಳ್ಳುತ್ತಾಳೆ. ವಿವಾಹವಾದ ಹದಿನೈದೇ ದಿನದಲ್ಲಿ ಇಬ್ಬರೂ ಪ್ರತ್ಯೇಕವಾಗಿ ಜೀವಿಸಲು ಆರಂಭಿಸಿದ್ದರು.

ಆಗಸ್ಟ್​ 2018ರಲ್ಲಿ ಅಪೂರ್ವ ತನ್ನ ಪತಿಯೊಂದಿಗೆ ಕಾನೂನು ಹೋರಾಟ ಆರಂಭಿಸಿದ್ದಳು. ರೋಹಿತ್​​ ಉತ್ತಮ ಪತಿಯಲ್ಲ ಎಂದು ನೋಟಿಸ್​ ಕಳುಹಿಸಿದ್ದಳು.

ರೋಹಿತ್​ ಪರ ವಕೀಲ ವೇದಾಂತ ವರ್ಮ ಹೇಳುವಂತೆ ರೋಹಿತ್​​​ ವಿಚ್ಛೇದನಕ್ಕೆ ಮುಂದಾಗಿದ್ದರು. ಆ ಕುರಿತಂತೆ ಮಅತುಕತೆಯೂ ನಡೆದಿತ್ತು ಎಂದು ವೇದಾಂತ ವರ್ಮ ಹೇಳಿದ್ದಾರೆ. ಆದರೆ ಸೋದರ ಸಂಬಂಧಿ ಪತ್ನಿಯ ಜೊತೆಗೆ ಅಕ್ರಮ ಸಂಬಂಧ ಇತ್ತು ಎನ್ನುವುದನ್ನು ವೇದಾಂತ ವರ್ಮ ತಳ್ಳಿಹಾಕಿದ್ದಾರೆ.

ಅಮ್ಮನ ಆಸ್ತಿ ಹಂಚಿಕೆ ಮುಳ್ಳಾಯಿತಾ..?

ರೋಹಿತ್​ ತಾಯಿ ಉಜ್ವಲಾ ಶರ್ಮ ತನ್ನ ಬಳಿಯಿದ್ದ ಕೋಟ್ಯಂತರ ಬೆಲೆ ಬಾಳುವ ಆಸ್ತಿಯನ್ನು ಮೊದಲನೇ ಗಂಡನಿಂದ ಹುಟ್ಟಿದ ಪುತ್ರ ಸಿದ್ಧಾರ್ಥ್​ಗೆ ಶೇ.40 ಹಾಗೂ ರೋಹಿತ್​​ಗೆ ಶೇ.60 ಎಂದು ಹಂಚಿಕೆ ಮಾಡಿ ವಿಲ್​​ ಬರೆಸಿದ್ದಳು. ಒಂದು ವೇಳೆ ಇಬ್ಬರಲ್ಲಿ ಒಬ್ಬರು ಸಾವನ್ನಪ್ಪಿದರೆ ಮತ್ತೊಬ್ಬ ಪುತ್ರನಿಗೆ ಇಲ್ಲವೇ ತಾಯಿಗೆ ಆಸ್ತಿ ವರ್ಗಾವಣೆಯಾಗುತ್ತದೆ ಎಂದು ಉಯಿಲಿನಲ್ಲಿತ್ತು.

ವಿಲ್​ ಪ್ರಕಾರ ಆಸ್ತಿ ಹಂಚಿಕೆಯಲ್ಲಿ ಅಪೂರ್ವ ಶುಕ್ಲಾಗೆ ಯಾವದೇ ಪಾಲು ಇರಲಿಲ್ಲ. ತನ್ನ ಆಸ್ತಿಯ ಪಾಲನ್ನು ಒಂಭತ್ತು ವರ್ಷದ ಮಗನಿಗೆ ಹಸ್ತಾಂತರಿಸುವುದಾಗಿ ರೋಹಿತ್​​ ಹೇಳಿಕೊಂಡಿದ್ದರು. ಈ ವಿಚಾರ ಅಪೂರ್ವಾಳಿಗೆ ಕೋಪ ತರಿಸಿತ್ತು ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಆಸ್ತಿ ಹಂಚಿಕೆಯಲ್ಲಿ ಸೇ.40ರಷ್ಟು ಪಾಲು ಪಡೆದಿದ್ದ ಸಿದ್ದಾರ್ಥ್​ ಪತ್ನಿಯೊಂದಿಗೆ ರೋಹಿತ್​​ ನಿಕಟ ಬಾಂಧವ್ಯ ಹೊಂದಿದ್ದರು.

ಕೊಲೆಗೆ ಆಸ್ತಿ ಹಂಚಿಕೆ ಕಾರಣ ಎನ್ನುವುದು ಕಾರಣವಾಗಿ ಕಾಣಿಸುತ್ತಿಲ್ಲ. ರೋಹಿತ್​ ವಾಸವಿದ್ದ ಮನೆಯೂ ಆತನ ತಾಯಿಯ ಹೆಸರಲ್ಲಿತ್ತು ಎಂದು ರೋಹಿತ್​ ಪರ ವಕೀಲ ವೇದಾಂತ ವರ್ಮ ಹೇಳಿದ್ದಾರೆ.

ಒಟ್ಟಿನಲ್ಲಿ ಸುಮಾರು ಎರಡು ವಾರಗಳ ಕಾಲ ಪೊಲೀಸರಿಗೆ ಕಗ್ಗಂಟಾಗಿದ್ದ ಹೈಪ್ರೊಫೈಲ್​ ಕೇಸ್​ ಬಗೆಹರಿದಿದೆ. ಹಲವು ತಿರುವು ಹಾಗೂ ರೋಚಕತೆಯಿಂದ ಕೂಡಿದ್ದ ಈ ಪ್ರಕರಣ ಮುಂದಿನ ದಿನದಲ್ಲಿ ಥ್ರಿಲ್ಲರ್​ ಸಿನಿಮಾಗಳಿಗೆ ಸ್ಫೂರ್ತಿಯಾದರೆ ಅಚ್ಚರಿಯಿಲ್ಲ..!

Conclusion:
Last Updated : Apr 25, 2019, 7:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.