ಉಡುಪಿ : ಮಣಿಪಾಲ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬುಧವಾರ ತಡರಾತ್ರಿ ಜರುಗಿದೆ.
ಮೂರುವರೆ ತಿಂಗಳ ಗರ್ಭಿಣಿ ಅರ್ಚನಾರನ್ನು ಕಫ ಕಟ್ಟಿದೆಯೆಂದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಿ ತಡವಾಗಿ ರೋಗಿಗೆ ಎಚ್ 1ಎನ್1 ಇದೆ ಎಂದು ಖಚಿತಪಡಿ ಚಿಕಿತ್ಸೆ ಮುಂದುವರೆಸಿದ್ದಾರೆ.
ಒಂದು ಲಕ್ಷ ಬಿಲ್ ಕಟ್ಟಿ ಇನ್ನು ಹೆಚ್ಚಿನ ಚಿಕಿತ್ಸೆಗೆ ಆಯುಷ್ಮಾನ್ ಸ್ಕೀಮ್ ನಲ್ಲಿ ಉಚಿತ ಚಿಕಿತ್ಸೆಗೆ ಅರ್ಚನಾರ ಕುಟುಂಬ ಮುಂದಾದಾಗ ವೈದ್ಯರು ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ವಹಿಸಿದ್ರು ಎಂದು ಅರ್ಚನಾ ಕುಟುಂಬದವರು ವೈದ್ಯರ ವಿರುದ್ದ ಆರೋಪ ಮಾಡಿದ್ದಾರೆ.
ಎಚ್ 1ಎನ್ 1ರೋಗವನ್ನ ಬೇಗನೇ ಖಚಿತಪಡಿಸಿ ಚಿಕಿತ್ಸೆಯನ್ನ ಸರಿಯಾದ ರೀತಿಯಲ್ಲಿ ಮಾಡಿದ್ದರೆ ಅರ್ಚನಾ ಬದುಕುಳಿಯುತ್ತಿದ್ಲು ಎನ್ನುವುದು ಮನೆಯವರ ಕೂಗು. ಆದ್ರೆ ಗರ್ಭಿಣಿಯಾದಾಗ ಎಚ್ 1ಎನ್ 1ಬಂದ್ರೆ ಬದುಕೋದು ಕಷ್ಟ ಎಂಬುದು ಆಸ್ಪತ್ರೆ ಸಿಬ್ಬಂದಿಯ ವಾದ.