ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 19 ಓವರ್‌ನಲ್ಲಿ 3 ಸಿಂಗಲ್ ರನ್ ತೆಗೆದುಕೊಳ್ಳುವ ಅವಕಾಶವಿದ್ದರೂ ಧೋನಿ ಬ್ರಾವೋರನ್ನು ಸಿಂಗಲ್ಗೆ ಬರದಂತೆ ತಡೆದಿದ್ದಕ್ಕೆ ಧೋನಿಯನ್ನು ನಾನು ಪ್ರಶ್ನಿಸುವುದಿಲ್ಲ ಎಂದು ಸಿಎಸ್‌ಕೆ ಕೋಚ್ ಸ್ಟೆಫನ್ ಫ್ಲೆಮಿಂಗ್ ತಿಳಿಸಿದ್ದಾರೆ.
ಭಾನುವಾರ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ ಒಂದು ರನ್ನಿಂದ ರಾಯಲ್ ಚಾಲೆಂಜರ್ಸ್ ವಿರುದ್ಧ ಸೋಲನುಭವಿಸಿತ್ತು. ಆದರೆ, ಇದಕ್ಕೂ ಮುನ್ನ 19ನೇ ಓವರ್‌ನಲ್ಲಿ ಧೋನಿ ಮೂರು ಬಾರಿ ಸಿಂಗಲ್ ರನ್ ತೆಗೆದುಕೊಳ್ಳುವ ಅವಕಾಶವಿದ್ದರೂ ಬ್ರಾವೋರನ್ನು ಸಿಂಗಲ್ ರನ್ಗೆ ಬರದಂತೆ ತಡೆದಿದ್ದರು. ಆ ಸಂದರ್ಭದಲ್ಲಿ ಸಿಂಗಲ್ ತೆಗೆದುಕೊಂಡಿದ್ದರೆ ಗೆಲುವು ಸಾಧ್ಯವಾಗಬಹುದಿತ್ತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಫ್ಲೆಮಿಂಗ್, ಧೋನಿ ಒಬ್ಬ ಚೇಸಿಂಗ್ ಮಾಸ್ಟರ್. ಇನ್ನಿಂಗ್ಸ್ನ ಕೊನೆಯ ಓವರ್ಗಳಲ್ಲಿ ಅವರು ಸಿಕ್ಸರ್ ಸಿಡಿಸುವ ಮಷಿನ್ನಂತೆ ಬ್ಯಾಟಿಂಗ್ ನಡೆಸುತ್ತಾರೆ. ತಂಡದ ನಿರ್ಣಾಯಕ ಘಟ್ಟದಲ್ಲಿ ಗೆಲುವಿಗೆ ಹೆಚ್ಚು ರನ್ಗಳಿದ್ದಾಗ ಸಿಂಗಲ್ ಅಥವಾ ಎರಡು ರನ್ಗಳ ಅಗತ್ಯಕ್ಕಿಂತ ಬೌಂಡರಿ ಹಾಗೂ ಸಿಕ್ಸರ್‌ಗಳ ಅಗತ್ಯ ಹೆಚ್ಚಿರುತ್ತದೆ. ಜೊತೆಗೆ ಹೊಸ ಬ್ಯಾಟ್ಸ್ಮನ್ಗಳಿಗೆ ಸ್ಟ್ರೈಕ್ ನೀಡುವುದು ಸಹ ಆ ಸಮಯದಲ್ಲಿ ಕಷ್ಟವಾಗುತ್ತದೆ. ಈ ನಿರ್ಧಾರದಿಂದ ಧೋನಿ ಲೆಕ್ಕಾಚಾರದ ಆಟಕ್ಕೆ ಮೊರೆ ಹೋಗುತ್ತಾರೆ. ಹಾಗಾಗಿ, ಅವರ ನಿರ್ಧಾರವನ್ನು ನಾವೆಂದೂ ಪ್ರಶ್ನೆ ಮಾಡುದಿಲ್ಲ ಎಂದಿದ್ದಾರೆ.
ಆರ್ಸಿಬಿ ನೀಡಿದ 162 ರನ್ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದ ಓವರ್ನಲ್ಲೇ 2 ವಿಕೆಟ್ ಕಳೆದುಕೊಂಡಿದ್ದಲ್ಲದೆ, ಪವರ್ ಪ್ಲೇಯೊಳಗೆ 4 ವಿಕೆಟ್ ಕಳೆದುಕೊಂಡಿದ್ದರು. ಧೋನಿ ತಮ್ಮ ಏಕಾಂಗಿ ಹೋರಾಟದಿಂದ ಪಂದ್ಯವನ್ನು ರೋಚಕ ಹಂತಕ್ಕೆ ತಂದಿದ್ದು ಖುಷಿಯ ವಿಚಾರ. ಇದಲ್ಲದೆ ಆರ್ಸಿಬಿ ಪರ ಬೌಲರ್ಗಳು ಉತ್ತಮ ಪ್ರದರ್ಶನ ತೋರಿದರು. ಜೊತೆಗೆ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಬ್ಯಾಟಿಂಗ್ ಜೊತೆಗೆ ಕೊನೆಯ ಬಾಲ್ನಲ್ಲಿ ರನೌಟ್ ಮಾಡಿ ಉತ್ತಮ ಪ್ರದರ್ಶನ ನೀಡಿದರೆಂದು ಪ್ರಶಂಸಿದರು.
ಕೊನೆಯ ಓವರ್‌ನಲ್ಲಿ 26 ರನ್ ಅಗತ್ಯವಿದ್ದ ವೇಳೆ ಧೋನಿ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿದಂತೆ ಒಟ್ಟು 24 ರನ್ ಸಿಡಿಸಿದ್ದರು. ಕೊನೆಯ ಎಸೆತದಲ್ಲಿ ಎರಡು ರನ್ ಅಗತ್ಯವಿದ್ದಾಗ ಧೋನಿ ದೊಡ್ಡ ಹೊಡೆತದ ಚಿಂತೆ ಮಾಡದೆ ಡ್ರೈವ್ ಮಾಡಲೆತ್ನಿಸಿ ಬಾಲ್ ಬೀಟ್ ಮಾಡಿದರು. ಬಾಲ್ ಕೀಪರ್ ಕೈಗೆ ಸೇರಿದ್ದರಿಂದ ರನ್ಔಟ್ ಆಗಿ ಸಿಎಸ್‌ಕೆ ಕೇವಲ ಒಂದು ರನ್ನಿಂದ ರೋಚಕ ಸೋಲು ಕಂಡಿತು.