ಲಂಡನ್ : ಇಂಗ್ಲೆಂಡ್ನಲ್ಲಿ 12ನೇ ವಿಶ್ವಕಪ್ ನಡೆಯುತ್ತಿದ್ದು, ಇಲ್ಲಿನ ಕ್ರೀಡಾಂಗಣಗಳು ಹೆಚ್ಚು ಫ್ಲಾಟ್ ಪಿಚ್ ಹೊಂದಿದ್ದು, ಬ್ಯಾಟಿಂಗ್ಗೆ ಅನುಕೂಲಕರವಾಗಿದೆ. ಇದೇ ಕಾರಣದಿಂದ ಈ ಬಾರಿಯ ವಿಶ್ವಸಮರದಲ್ಲಿ 500 ರನ್ಗಳ ಮೊತ್ತವನ್ನು ನಿರೀಕ್ಷಿಸಲಾಗುತ್ತಿದೆ.
ನಿನ್ನೆ ನಡೆದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ 421 ರನ್ಗಳಿಸಿದ ವಿಂಡೀಸ್ ತಂಡ ನ್ಯೂಜಿಲ್ಯಾಂಡ್ ವಿರುದ್ಧ 91 ರನ್ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ 84 ಎಸೆತಗಳಲ್ಲಿ 101 ಸಿಡಿಸಿದ್ದ ಶೈ ಹೋಪ್ ಏಕದಿನ ಕ್ರಿಕೆಟ್ನಲ್ಲಿ 500 ರನ್ಗಳಿಸುವ ತಾಕುತ್ತು ನಮ್ಮ ತಂಡಕ್ಕಿದೆ ಎಂದಿದ್ದಾರೆ.
ಗೇಲ್,ಲೆವಿಸ್, ರಸೆಲ್ರಂತಹ ಸ್ಪೋಟಕ ಆಟಗಾರರ ದಂಡನ್ನೇ ಹೊಂದಿರುವ ವಿಂಡೀಸ್ ತಂಡ 500 ರನ್ಗಳನ್ನು ದಾಖಲಿಸುವ ಸಾಮರ್ಥ್ಯ ಹೊಂದಿದೆ. ವಿಂಡೀಸ್ ತಂಡದಲ್ಲಿ ಇರುವ 11 ಜನ ಆಟಗಾರರೂ ಬೌಂಡರಿ ಸಿಕ್ಸರ್ ಸಿಡಿಸುವ ತಾಕತ್ತನ್ನು ಹೊಂದಿದ್ದು, ಇಂಗ್ಲೆಂಡ್ನಂತಹ ಚಿಕ್ಕ ಕ್ರೀಡಾಂಗಣದಲ್ಲಿ 500ರ ಗಡಿ ದಾಟುವುದು ಸುಲಭ ಎಂದಿದ್ದಾರೆ.
ಈ ಮಾತನ್ನು ನಿಜಕ್ಕೂ ಕ್ರಿಕೆಟ್ ಜಗತ್ತು ಒಪ್ಪಿಕೊಳ್ಳಲೇ ಬೇಕಿದೆ. ವಿಂಡೀಸ್ ತಂಡ ಅಗ್ರ ಕ್ರಮಾಂಕದಲ್ಲಿ ಶೈ ಹೋಪ್ ಕ್ರಿಸ್ ಗೇಲ್,ಎವಿನ್ ಲೆವಿಸ್ ಅವರಂತಹ ಸ್ಫೋಟಕ ಆಟಗಾರರ ಜೊತೆಗೆ ಶಿಮ್ರಾನ್ ಹೆಟ್ಮೇಯೆರ್ ,ನಿಕೊಲಾಸ್ ಪೂರನ್ ರಂತಹ ಯುವ ಆಟಗಾರರನ್ನು ಹಾಗೂ ಆಂಡ್ರೆ ರಸೆಲ್, ಕಾರ್ಲೊಸ್ ಬ್ರಾತ್‌ವೈಟ್ ಹಾಗೂ ಜೇಸನ್ ಹೋಲ್ಡರ್ ರಂತಹ ಹಿರಿಯ ಆಲ್‌ರೌಂಡರ್‌ಗಳನ್ನು ಹೊಂದಿದೆ. ಈ ತಂಡದಲ್ಲಿರುವವರೆಲ್ಲ ದೈಹಿಕವಾಗಿ ಬಲಿಷ್ಠರಾಗಿದ್ದು, ವಿಶ್ವದ ಹಲವು ಟಿ-20 ಲೀಗ್ಗಳನ್ನು ಆಡಿದ ಅನುಭವವಿದೆ. ಆದ್ದರಿಂದ ವಿಂಡೀಸ್ ತಂಡವೇ 500 ಗಡಿ ದಾಟುವ ಮೊದಲ ತಂಡವಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.