ಬೆಂಗಳೂರು: ಡೆಲ್ಲಿ ವಿರುದ್ಧ ಸೋಲುವ ಮೂಲಕ 12ನೇ ಆವೃತ್ತಿಯಲ್ಲಿ ಸತತ 6ನೇ ಪಂದ್ಯದಲ್ಲಿ ಸೋಲನುಭವಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ನಾಯಕ ಕೊಹ್ಲಿ ಪ್ರತಿದಿನವೂ ಸೋಲಿಗೆ ನೆಪ ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.
ಪಂದ್ಯದ ನಂತರ ಮಾತನಾಡಿದ ಕೊಹ್ಲಿ ಪ್ರತಿ ಸೋಲಿಗೂ ನೆಪ ಹೇಳಲಾಗುವುದಿಲ್ಲ. ಸಿಕ್ಕ ಅವಕಾಶಗಳನ್ನು ಕೈಚೆಲ್ಲವುದರಿಂದ ಪಂದ್ಯದ ಸಂಪೂರ್ಣ ಫಲಿತಾಂಶ ಬದಲಾಗುತ್ತದೆ. ಇದನ್ನು ಪಂದ್ಯಕ್ಕೂ ಮುನ್ನ ಎಲ್ಲಾ ಆಟಗಾರರಿಗೂ ಅವರವರ ಜವಾಬ್ದಾರಿಯನ್ನು ನಿರ್ವಹಿಸಲು ಸೂಚಿಸಲಾಗಿದೆ. ಆದರೂ ಕೆಲ ತಪ್ಪುಗಳು ಮರುಕಳಿಸುತ್ತಿವೆ ಎಂದು ಕ್ಯಾಚ್ ಡ್ರಾಪ್ ಮಾಡಿದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ತಮ್ಮ ಸ್ಲೋ ಇನ್ನಿಂಗ್ಸ್ ಬಗ್ಗೆ ಮಾತನಾಡಿದ ಕೊಹ್ಲಿ, ಆರಂಭದಲ್ಲಿ ಹಿರಿಯ ಆಟಗಾರ ಎಬಿಡಿ ವಿಕೆಟ್ ಕಳೆದುಕೊಂಡಿದ್ದರಿಂದ ತಂಡಕ್ಕೆ ನೆರವಾಗಬೇಕಿರುವುದು ಮತ್ತೊಬ್ಬ ಪ್ರಮುಖ ಆಟಗಾರನ ಜವಾಬ್ದಾರಿ. ಆದ್ದರಿಂದ ನಾನು ಇನ್ನಿಂಗ್ಸ್ ಕೊನೆಯತನಕ ಕೊಂಡೊಯ್ಯಲು ತೀರ್ಮಾನಿಸಿದ್ದೆ. ಆದರೆ, ನಾನು ಔಟಾಗಿದ್ದು ನನಗೆ ಬೇಸರ ತರಿಸಿತು. 20-30 ರನ್ಗಳಿಸಿದ್ದರೆ ಪಂದ್ಯ ನಮ್ಮ ಪಾಲಾಗುತ್ತಿತ್ತು. ಆದರೆ, ಮಧ್ಯಂತರದಲ್ಲಿ ವಿಕೆಟ್ ಕಳೆದುಕೊಂಡಿದ್ದರಿಂದ ಸ್ಪರ್ಧಾತ್ಮಕ ಮೊತ್ತ ಪೇರಿಸಲು ವಿಫಲವಾಯಿತು ಎಂದರು.
ಈ ಆವೃತ್ತಿಯಲ್ಲಿ ಆರ್ಸಿಬಿ ಬರೋಬ್ಬರಿ 15 ಕ್ಯಾಚ್ ಕೈಚೆಲ್ಲಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊಹ್ಲಿ ಸೇರಿ 5 ಕ್ಯಾಚ್ ಕೈಚೆಲ್ಲಿದ್ದರು. ಈ ಇಂದು ಕೇವಲ 4 ರನ್ಗಳಿಸಿದ್ದ ಶ್ರೇಯಸ್ ಕ್ಯಾಚ್ ಕೈಚೆಲ್ಲಿದ್ದರಿಂದ ಅಯ್ಯರ್ 67 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪ್ರತಿ ಪಂದ್ಯದಲ್ಲೂ ಆರ್ಸಿಬಿ ಕಳಪೆ ಫೀಲ್ಡಿಂಗ್ ಮೂಲಕವೇ ಪಂದ್ಯ ಕಳೆದುಕೊಳ್ಳುತ್ತಿದೆ.