ETV Bharat / briefs

ಭಾರತ v/s ಪಾಕ್‌ ಇವರೇ ಪ್ರಮುಖ ಆಕರ್ಷಣೆ: ಟಾಪ್​ 5 ಪ್ಲೇಯರ್ಸ್​ ಬಗ್ಗೆ ನಿಮ್ಗೆಷ್ಟು ಗೊತ್ತು? - ಕೊಹ್ಲಿ

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ, ಪಾಕಿಸ್ತಾನ ತಂಡಗಳು ಇಂದು ಮ್ಯಾಂಚೆಸ್ಟರ್​ನ ಓಲ್ಡ್​ ಟ್ರ್ಯಾಫೋರ್ಡ್​ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದಾದ ಪ್ರಮುಖ ಆಟಗಾರರ ವಿವರ ಇಲ್ಲಿದೆ.

Key players
author img

By

Published : Jun 16, 2019, 1:39 PM IST

ಮ್ಯಾಂಚೆಸ್ಟರ್​: ವಿಶ್ವಕಪ್​ನಲ್ಲೇ ಬಹುನಿರೀಕ್ಷಿತ ಪಂದ್ಯವಾದ ಇಂಡೋ-ಪಾಕ್​ ಕದನಕ್ಕೆ ಕ್ಷಣಗಣನೆ ಶುರುವಾಗಿದೆ. ಎರಡು ತಂಡಗಳಲ್ಲಿ ವಿಶ್ವಶ್ರೇಷ್ಟ ಆಟಗಾರರಿದ್ದು, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಬಹುದಾದ ಟಾಪ್​ 5 ಆಟಗಾರರ ವಿವರ ಇಲ್ಲಿದೆ.

ರೋಹಿತ್ v/s ಇಮಾಮ್ ಉಲ್​ ಹಕ್​​

ಭಾರತ ತಂಡದ ಆರಂಭಿಕ ರೋಹಿತ್​ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ 3 ದ್ವಿಶತಕ ಸಿಡಿಸಿದ ಏಕೈಕ ಆಟಗಾರನಾಗಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 23 ಶತಕ ಸಿಡಿಸಿರುವ ರೋಹಿತ್,​ ಭಾರತ ತಂಡದ ಓಪನರ್‌ ಆದ್ಮೇಲೆ ಹಲವಾರು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. 208 ಏಕದಿನ ಪಂದ್ಯವಾಡಿರುವ ರೋಹಿತ್​ 8,189 ರನ್ ​ಗಳಿಸಿದ್ದಾರೆ.

ಪಾಕಿಸ್ತಾನ ತಂಡದ ಪರ 31 ಏಕದಿನ ಪಂದ್ಯವನ್ನಷ್ಟೇ ಆಡಿರುವ ಇಮಾಮ್​, ಈಗಾಗಲೇ ಶೇ 57 ರ ಸರಾಸರಿಯಲ್ಲಿ 6 ಶತಕ ಹಾಗೂ 6 ಅರ್ಧಶತಕ ಸೇರಿದಂತೆ 1,486 ರನ್ ​ಗಳಿಸಿ ಗಮನ ಸೆಳೆದಿದ್ದಾರೆ.

Key players
ಇಮಾಮ್‌ v/s ರೋಹಿತ್‌

ಕೊಹ್ಲಿ v/s ಬಾಬರ್​ ಅಜಂ

ರನ್​ ಮಷಿನ್​ ಎಂದೇ ಖ್ಯಾತರಾಗಿರುವ ಏಕದಿನ ಕ್ರಿಕೆಟ್​ನ ನಂಬರ್ ಒನ್ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಪ್ರತಿಯೊಂದು ಪಂದ್ಯದಲ್ಲೂ ಯಾವುದಾದರೊಂದು ದಾಖಲೆ ನಿರ್ಮಿಸುತ್ತಿದ್ದಾರೆ. ಕೊಹ್ಲಿ 229 ಏಕದಿನ ಪಂದ್ಯಗಳಲ್ಲಿ 10,943 ರನ್ ​ಗಳಿಸಿದ್ದು, 41 ಶತಕ ಹಾಗೂ 50 ಅರ್ಧಶತಕ ಸಿಡಿಸಿದ್ದಾರೆ.

'ಪಾಕಿಸ್ತಾನದ ವಿರಾಟ್​ ಕೊಹ್ಲಿ' ಎಂದೇ ಕರೆಸಿಕೊಳ್ಳುತ್ತಿರುವ 25 ವರ್ಷದ ಬಾಬರ್​ ಅಜಂ ಕೇವಲ 67 ಪಂದ್ಯಗಳಲ್ಲೇ 2,854 ರನ್​ಗಳಿಸಿದ್ದಾರೆ. ಇದರಲ್ಲಿ 9 ಶತಕ ಹಾಗೂ 13 ಅರ್ಧಶತಕ ಇದೆ.

Key players
ಕೊಹ್ಲಿv/s ಬಾಬರ್​

ಬುಮ್ರಾ v/s ಅಮೀರ್​

ಕಡಿಮೆ ಸಮಯದಲ್ಲಿ ಏಕದಿನ ಕ್ರಿಕೆಟ್​ನಲ್ಲಿ ನಂಬರ್​ ಒನ್​ ಸ್ಥಾನಕ್ಕೇರಿರುವ ಭಾರತ ತಂಡದ ಯಾರ್ಕರ್​ ಕಿಂಗ್​ ಜಸ್ಪ್ರೀತ್​ ಬುಮ್ರಾ ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಬುಮ್ರಾ 51 ಪಂದ್ಯಗಳಲ್ಲಿ 90 ವಿಕೆಟ್​ ಪಡೆದಿದ್ದಾರೆ. 27 ಕ್ಕೆ 5 ವಿಕೆಟ್​ ಪಡೆದಿರುವುದು ಉತ್ತಮ​ ಬೌಲಿಂಗ್​ ಪ್ರದರ್ಶನವಾಗಿದೆ.

ಪಾಕಿಸ್ತಾನದ ಬೌಲಿಂಗ್​ ನೇತೃತ್ವ ವಹಿಸಿರುವ ಮೊಹಮ್ಮದ್​ ಅಮಿರ್​ 54 ಏಕದಿನ ಪಂದ್ಯಗಳನ್ನಾಡಿದ್ದು, 70 ವಿಕೆಟ್​ ಪಡೆದಿದ್ದಾರೆ. 30 ರನ್​ ನೀಡಿ 5 ವಿಕೆಟ್​ ಪಡೆದಿರುವುದು ಇವರ ಅತ್ಯುತ್ತಮ ಬೌಲಿಂಗ್​ ಪ್ರದರ್ಶನ.

Key players
ಬುಮ್ರಾ v/s ಅಮೀರ್​

ಭುವನೇಶ್ವರ್​ ಕುಮಾರ್​​ v/s ವಹಾಬ್​ ರಿಯಾಜ್

ವಿಶ್ವದ ಸ್ವಿಂಗ್​ ಸ್ಪೆಶಲಿಸ್ಟ್​ ಎಂದೇ ಹೆಸರಾಗಿರುವ ಭುವನೇಶ್ವರ್​ ಕುಮಾರ್​ ಭಾರತದ ಬೌಲಿಂಗ್​ ಶಕ್ತಿಯಾಗಿದ್ದಾರೆ. ಭುವಿ 107 ಪಂದ್ಯಗಳಲ್ಲಿ 123 ವಿಕೆಟ್​ ಪಡೆದಿದ್ದಾರೆ. 42 ರನ್​ ನೀಡಿ 5 ವಿಕೆಟ್ ಪಡೆದಿರುವುದು ಅವರ ಉತ್ತಮ ಪ್ರದರ್ಶನವಾಗಿದೆ.

33 ವರ್ಷದ ವಹಾಬ್​​ ರಿಯಾಜ್​ ಪಾಕಿಸ್ತಾನ ಪರ 82 ಏಕದಿನ ಪಂದ್ಯವಾಡಿದ್ದು, 106 ವಿಕೆಟ್​ ಪಡೆದಿದ್ದಾರೆ. 2011 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ 46 ರನ್​ ನೀಡಿ 5 ವಿಕೆಟ್​ ಪಡೆದಿದ್ದೇ ಇವರ ಜೀವನ ಶ್ರೇಷ್ಠ ಸಾಧನೆ.

Key players
ಭುವನೇಶ್ವರ್​ v/s ವಹಾಬ್​ ರಿಯಾಜ್​

ಹಾರ್ದಿಕ್​ ಪಾಂಡ್ಯ v/s ಮೊಹಮ್ಮದ್​ ಹಫೀಜ್

ಸ್ಫೋಟಕ ಬ್ಯಾಟಿಂಗ್​ ಹಾಗೂ ಮಧ್ಯಮ ವೇಗಿಯಾಗಿರುವ ಹಾರ್ದಿಕ್​ ಪಾಂಡ್ಯ 47 ಏಕದಿನ ಪಂದ್ಯಗಳಲ್ಲಿ 794 ರನ್​ ಸಿಡಿಸಿದ್ದಾರೆ. ಜೊತೆಗೆ 44 ವಿಕೆಟ್​ ಪಡೆದು ಬೌಲಿಂಗ್​ನಲ್ಲೂ ಕಮಾಲ್​ ಮಾಡಿದ್ದಾರೆ. ಐಪಿಎಲ್​ನಲ್ಲಿ 190 ಕ್ಕೂ ಹೆಚ್ಚಿನ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್​ ಬೀಸಿರುವ ಪಾಂಡ್ಯ ಭಾರತದ ಪಾಲಿಗೆ ಟ್ರಂಪ್‌ಕಾರ್ಡ್ ಆಗಿದ್ದಾರೆ.

38 ವರ್ಷದ ಹಫೀಜ್​ ಪಾಕಿಸ್ತಾನದ ಪರ 213 ಪಂದ್ಯಗಳನ್ನಾಡಿದ್ದು, 6,507 ರನ್​ಗಳಿಸಿದ್ದಾರೆ. ಇದರಲ್ಲಿ 11 ಶತಕ ಕೂಡ ದಾಖಲಾಗಿವೆ. ಬೌಲಿಂಗ್​ನಲ್ಲಿ 139 ವಿಕೆಟ್​ ಪಡೆದು ತಂಡದ ಪ್ರಮುಖ ಆಲ್​ರೌಂಡರ್​ ಆಗಿದ್ದಾರೆ.

Key players
ಹಾರ್ದಿಕ್​ v/s ಹಫೀಜ್​

ಈ ಮೇಲಿನ ಎಲ್ಲಾ ಆಟಗಾರರು ಎರಡು ತಂಡಗಳಿಗೆ ಆಧಾರ ಸ್ಥಂಭವಾಗಿದ್ದಾರೆ. ಇವರ ಜೊತೆಗೆ ಭಾರತ ತಂಡಕ್ಕೆ ಧೋನಿ, ರಾಹುಲ್​, ಚಹಾಲ್​ ಕೂಡ ಗೇಮ್​ ಚೇಂಜರ್​ಗಳಾಗಿದ್ದರೆ, ಪಾಕಿಸ್ತಾನದ ಪರ ಫಾಖರ್​ ಜಮಾನ್​ ಮಲಿಕ್​, ಶದಾಬ್​ಖಾನ್​, ಆಸಿಫ್​ ಅಲಿಯಂತ ಆಟಗಾರರು ಗೇಮ್ ಚೇಂಜರ್​ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.