ಚೆನ್ನೈ: ಯಾವ ತಂಡದ ಪರ ಆಡಿದರೂ ಧೋನಿ ಆಟ ಬದಲಾಗದು, ಅದು ರಾಷ್ಟ್ರೀಯ ಪಂದ್ಯವಾಗಲಿ, ಐಪಿಎಲ್ನಲ್ಲಾಗಲಿ ಅಥವಾ ದೇಶಿಯ ಟೂರ್ನಿಯಾದರೂ ಧೋನಿ ಮಾತ್ರ ತಮ್ಮ ಫಿನಿಶಿಂಗ್ ಸ್ಟೈಲ್ನಲ್ಲಿ ಬದಲಾಗುವುದಿಲ್ಲ ಎನ್ನುವುದಕ್ಕೆ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ತಿಳಿದುಬಂದಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ 27 ರನ್ಗಳಿಸುವಷ್ಟರಲ್ಲಿ ಆರಂಭಿಕ ಮೂವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತ್ತು. ಆದರೆ, ಕೇವಲ 5 ನೇ ಓವರ್ನಲ್ಲಿ 5 ನೇ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದ ಎಂಎಸ್ ಧೋನಿ 46 ಎಸೆತಗಳಲ್ಲಿ 77 ರನ್ ಚಚ್ಚಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆರಂಭಿಕ ಓವರ್ಗಳಲ್ಲಿ ಕೊಂಚ ನಿಧಾನಗತಿ ಆಟಕ್ಕೆ ಇಳಿದಿದ್ದ ಕ್ಯಾಪ್ಟನ್ ಕೂಲ್ ಕೊನೆಯ 4 ಓವರ್ಗಳಲ್ಲಿ ಬ್ರಾವೋ, ಜಡೇಜಾ ಜೊತೆಗೂಡಿ 64 ರನ್ ಬಾರಿಸಿದರು.
#Yellove #CSKvRR #csk #Dhoni #WhistlePodu @ChennaiIPL pic.twitter.com/di4Wf88has
— #IPL (@cricketfeverrr) March 31, 2019 " class="align-text-top noRightClick twitterSection" data="
">#Yellove #CSKvRR #csk #Dhoni #WhistlePodu @ChennaiIPL pic.twitter.com/di4Wf88has
— #IPL (@cricketfeverrr) March 31, 2019#Yellove #CSKvRR #csk #Dhoni #WhistlePodu @ChennaiIPL pic.twitter.com/di4Wf88has
— #IPL (@cricketfeverrr) March 31, 2019
ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ಸಹಿತ 28 ರನ್
ಧೋನಿ ಕೊನೆಯ ಓವರ್ನಲ್ಲಿದ್ದರೆ ಯಾವುದೇ ಬೌಲರ್ಗಾದರೂ ಬೌಲಿಂಗ್ ಮಾಡಬೇಕಾದರೆ ನಿಜಕ್ಕೂ ಸವಾಲಿನ ಕೆಲಸ. ಅದು ನಿನ್ನೆಯ ಪಂದ್ಯದಲ್ಲೂ ಸಾಭೀತಾಯಿತು, ಇನಿಂಗ್ಸ್ನ ಕೊನೆಯ ಓವರ್ ಎಸೆಯಲು ಬಂದ ಐಪಿಎಲ್ನ ದುಬಾರಿ ಬೌಲರ್ಗೆ ಧೋನಿ ಕೊನೆಯ ಮೂರು ಎಸೆತಗಳನ್ನು ಬೌಂಡರಿ ಗೆರೆ ದಾಟಿಸಿದರು. ಧೋನಿಗೂ ಮೊದಲು ಜಡೇಜಾ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ್ದರು.. ಒಟ್ಟಾರೆ 4 ಸಿಕ್ಸರ್ ಸಹಿತ ಕೊನೆಯ ಓವರ್ನಲ್ಲಿ 28 ರನ್ ಸೂರೆಗೈದ ಧೋನಿ-ಜಡೇಜಾ ಜೋಡಿ ತಂಡದ ಮೊತ್ತ 170ರ ಗಡಿ ದಾಟುವಂತೆ ಮಾಡಿದರು.
ಸಿಕ್ಸರ್ನಲ್ಲೂ ಧೋನಿ ಕಿಂಗ್ :
191 ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್ಗಳಲ್ಲಿ 3ನೇ ಸ್ಥಾನ ಹಾಗೂ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.