ಕಳೆದ ವರ್ಷದಿಂದ ಕೊರೊನಾ ಎಂಬ ಹೆಮ್ಮಾರಿ, ಸಾವಿರಾರು ಜನರ ಜೀವದ ಮೇಲಲ್ಲ. ಜೀವನದ ಮೇಲೂ ತುಂಬಾ ಕೆಟ್ಟ ಪರಿಣಾಮ ಬೀರಿದೆ. ಇದರಿಂದ ಚಿತ್ರರಂಗಕ್ಕಾಗಿರುವ ನಷ್ಟ ಅಷ್ಟಿಷ್ಟಲ್ಲ. ಸಿನಿರಂಗದ ಸಾವಿರಾರು ಕಾರ್ಮಿಕರು ಇಷ್ಟು ದಿವಸ ಕೆಲಸವಿಲ್ಲದೇ ಇದ್ದದ್ದು, ಇದೇ ಮೊದಲು ಎನ್ನಬಹುದು.
ಇಂತಹ ಸಂದರ್ಭದಲ್ಲಿ ಸಿನಿಮಾ ತಾರೆಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಆದರೀಗ ಕನ್ನಡ ಚಿತ್ರರಂಗ ಅಲ್ಲದೇ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಒಂದು ಬ್ರಾಂಡ್ ಕ್ರಿಯೇಟ್ ಮಾಡಿರೋ ಹೊಂಬಾಳೆ ಸಂಸ್ಥೆಯ ಮಾಲೀಕರಾದ ವಿಜಯ್ ಕಿರಗಂದೂರು ಅವರು ಕೊರೊನಾ ಸಂದರ್ಭದಲ್ಲಿ ಯಾವುದೇ ಪ್ರಚಾರವಿಲ್ಲದೇ ಆದರ್ಶನಿಯ ಕೆಲಸಗಳನ್ನ ಮಾಡಿದ್ದಾರೆ.
ಈ ಸಾಂಕ್ರಾಮಿಕ ಸೋಂಕಿನ ಪ್ರಭಾವದಿಂದಾಗಿ ಇಡೀ ದೇಶವೇ ಎರಡು ತಿಂಗಳು ಸ್ತಬ್ಧವಾಗಿತ್ತು. ಈ ಸಂದರ್ಭದಲ್ಲಿ ವಿಜಯ್ ಕಿರಂಗದೂರು ಅವರು ತಮ್ಮ ನಿರ್ಮಾಣದ ಕೆ.ಜಿ.ಎಫ್ ಹಾಗೂ ಯುವರತ್ನ ಚಿತ್ರತಂಡದ ಸದಸ್ಯರ ಖಾತೆಗೆ ಹಣವನ್ನು ಎರಡು ತಿಂಗಳು ವರ್ಗಾಯಿಸಿದ್ದರು.
ಅಷ್ಟೇ ಅಲ್ಲ ಕನ್ನಡ ಚಲನಚಿತ್ರ ಕಾರ್ಮಿಕರ ಸಂಕಷ್ಟಕ್ಕೂ ವಿಜಯ್ ಕಿರಂಗದೂರ್ ನೆರವಾಗಿದ್ದರು. ಈ ವರ್ಷ ಮತ್ತೆ ಕೊರೊನಾದ ಎರಡನೇ ಅಲೆ ಜೋರಾಗಿದ್ದು, ತಮ್ಮ ತವರು ಜಿಲ್ಲೆ ಮಂಡ್ಯ ಆಸ್ಪತ್ರೆಗೆ ಎರಡು ಆಕ್ಸಿಜನ್ ಪ್ಲಾಂಟ್ ಹಾಗೂ ಇಪ್ಪತ್ತು ಆಕ್ಸಿಜನ್ ಸೇರಿದಂತೆ ಉತ್ತಮ ಸೌಲಭ್ಯವುಳ್ಳ ಹಾಸಿಗೆ ನೀಡಿದ್ದಾರೆ.
ಕನ್ನಡ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ ಹಾಗೂ ಕಲಾವಿದರ ಒಕ್ಕೂಟದ ಸುಮಾರು 3200ಕ್ಕೂ ಅಧಿಕ ಮಂದಿಗೆ ಧನಸಹಾಯ ಮಾಡುತ್ತಿದ್ದಾರೆ.
ಎಲ್ಲಕ್ಕಿಂತಲೂ ಮಿಗಿಲಾಗಿ ಹೊಂಬಾಳೆ ಸಂಸ್ಥೆಯಲ್ಲಿ ಕೆಲಸ ಮಾಡುವ 600 ಕ್ಕೂ ಅಧಿಕ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ಕೊರೊನಾ ಲಸಿಕೆ ಹಾಕಿಸಿದ್ದಾರೆ ಹಾಗೂ ಅವರ ಎಲ್ಲಾ ಕಷ್ಟಗಳಿಗೂ ಸ್ಪಂದಿಸಿದ್ದಾರೆ.
ಇವರ ಸಹಾಯ ಬರೀ ಕರ್ನಾಟಕಕಷ್ಟೇ ಸೀಮಿತವಾಗಿಲ್ಲ. ತಮ್ಮ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ತೆಲುಗಿನ ಸಲಾರ್ ಚಿತ್ರಕ್ಕೆ ಕಾರ್ಯನಿರ್ವಹಿಸುತ್ತಿರುವ ಸುಮಾರು 150ಕ್ಕೂ ಅಧಿಕ ಚಿತ್ರತಂಡದ ಸದಸ್ಯರಿಗೂ ಇಲ್ಲಿನ ಹಾಗೆ ಎಲ್ಲಾ ಸೌಲಭ್ಯ ನೀಡಿದ್ದಾರೆ.