ಉಡುಪಿ: ಕಣ್ಣಾಡಿಸಿದಲ್ಲೆಲ್ಲಾ ನೀಲಿ ಬಣ್ಣದ ತಿಳಿ ಸಾಗರ... ಹಾಲನೊರೆಯ ಕಡಲ ಮೇಲೆ ತೇಲುತ್ತಾ ಸಾಗುವ ಬೋಟ್ಗಳು... ಮಲ್ಪೆಯಿಂದ ಸೈಂಟ್ ಮೆರೀಸ್ ದ್ವೀಪಕ್ಕೆ ಸಾಗುವಾಗ ಎದುರಾಗುವ ಪ್ರಕೃತಿಯ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲದು. ಅದಕ್ಕೆ ಈ ಪುಟ್ಟ ದ್ವೀಪ ಪ್ರವಾಸಿಗರ ಹಾಟ್ ಫೆವರೆಟ್ ಆಗಿರುವುದು.
ಈ ಪುಟ್ಟ ದ್ವೀಪ ಪ್ರವಾಸಿಗರ ಹಾಟ್ ಫೆವರೆಟ್:
ಮೂರು ತಿಂಗಳ ಮಳೆಗಾಲದ ನಿಷೇಧದ ಬಳಿಕ ಈಗ ದ್ವೀಪಕ್ಕೆ ತೆರಳಲು ಅನುವು ಮಾಡಿಕೊಟ್ಟಿರೋದು ಪ್ರವಾಸಿಗರ ಪಾಲಿಗೆ ಹಬ್ಬವೇ ಆಗಿದೆ. ಇನ್ನು ಮುಂಜಾನೆಯಿಂದ ಮುಸ್ಸಂಜೆವರಗೂ ದ್ವೀಪದಲ್ಲೇ ಸಮಯ ಕಳೆಯಬಹುದಾಗಿದ್ದು ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. ಯುವ ಜೋಡಿಗಳಿಗೆ ಇದು ಸ್ವರ್ಗವಾದರೆ, ಇನ್ನು ಫ್ಯಾಮಿಲಿ ಟೈಂ ಕಳೆಯೋದಕ್ಕೂ ಇದು ಹೇಳಿ ಮಾಡಿಸಿದ ಸ್ಥಳ.
ಫ್ಯಾಮಿಲಿ ಟೈಂ ಕಳೆಯಲು ಉತ್ತಮ ಸ್ಥಳ:
ಸೈಂಟ್ ಮೇರೀಸ್ ಗೆ ತೆರಳೋಕೆ ಮಲ್ಪೆ ಬೀಚ್ ನಿಂದ 7 ಕಿಲೋ ಮೀಟರ್ ಸಮುದ್ರ ಪ್ರಯಾಣ ಮಾಡಬೇಕು. ಪ್ರವಾಸಿಗರ ರಕ್ಷಣೆಯೇ ದೊಡ್ಡ ಹೊಣೆ, ಹಾಗಾಗಿ ತುರ್ತು ಪರಿಸ್ಥಿತಿ ಎದುರಿಸಲು ಅನುಕೂಲವಾಗುವಂತೆ ಲೈಫ್ ಜಾಕೆಟ್ಗಳನ್ನು ಒದಗಿಸಲಾಗುತ್ತಿದೆ. ಪ್ರವಾಸಿಗೊಬ್ಬರಿಗೆ 250 ರೂಪಾಯಿ ಟಿಕೆಟ್ ದರ ಇದೆ. ಮತ್ತಿನ್ನೇಕೆ ತಡ ನೀವೂ ಉಡುಪಿಗೆ ಪ್ರವಾಸ ಬೆಳೆಸಿ ಪ್ರಕೃತಿ ಸೌಂದರ್ಯವನ್ನು ಸವಿಯಿರಿ.